‘ದಿ ಕ್ರಿಟಿಕ್’ ಎಲ್ಲರೂ ನೋಡಲೇಬೇಕಾದ ಕಿರುಚಿತ್ರ


ಹರಿವು, ನಾಚಿತಾರಾಮಿ, ಆಕ್ಟ್ ೧೯೭೮ ಎಂಬ ಅದ್ಬುತ ಸಿನಿಮಾಗಳನ್ನು ಕೊಟ್ಟ ಯುವ ನಿರ್ದೇಶಕ ಮಂಸೋರೆಯವರು ಪತ್ರಕತ್ರ ಬಿ.ಎಂ ಬಶೀರ್ ರವರ ಕಥೆಯನ್ನಾಧರಿಸಿ ‘ದಿ ಕ್ರಿಟಿಕ್’ ಎಂಬ ಕಿರುಚಿತ್ರ ನೀರ್ದೆಶನ ಮಾಡಿದ್ದಾರೆ. ಸತ್ಯ ಹೆಗಡೆ ನಿರ್ಮಾಣದ ನಿರ್ಮಾಣದ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದ್ದು, ಬಿಡುಗಡೆಯಾ ಒಂದು ದಿನದಲ್ಲಿಯೇ ೨೦ ಸಾವಿರ ವೀಕ್ಷಣೆಗಳನ್ನು ಕಂಡಿದೆ.ಅಂಬೇಡ್ಕರ್ ಭಾವಚಿತ್ರದ ಮೂಲಕ ಪ್ರಾರಂಭವಾಗುವ ಚಿತ್ರ ಡಿ.ಆರ್ ನಾಗರಾಜ್ ಅವರ ಪ್ರಸಿದ್ದ ಹೇಳಿಕೆಯನ್ನು ಒಳಗೊಂಡಿದೆ. ದೊಡ್ಡ ದೊಡ್ಡ ಪಾಂಡಿತ್ಯದ ಮಾತುಗಳನ್ನಾಡುವ ವಿಮರ್ಶಕರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಟೀಕಿಸಲಾಗಿದೆ. ರಾಶಿ ರಾಶಿ ಪುಸ್ತಕಗಳ ಮಧ್ಯೆ ಇರುವ ವಿಮರ್ಶಕ ಈಗಿನ ಯುವಕ – ಯುವತಿಯರು ಫೇಸ್ ಬುಕ್ ಬರಹಗಾರರು ಆಗಿದ್ದಾರೆ ಎಂದು ಟೀಕಿಸುತ್ತಲೆ ತಾವೇನು ಮಾಡುತ್ತಾರೆ ಎಂದು ಕಿರುಚಿತ್ರದಲ್ಲಿ ತೋರಿಸಲಾಗಿದೆ.ಸಾಹಿತ್ಯ ಕಮ್ಮಟಕ್ಕೆ ಬರಲು ನನಗೆ ಯಾವ ಅಭ್ಯಂತರವಿಲ್ಲ ಆದರೆ ಗೌರವಧನ ನೋಡಿಕೊಂಡು ಕೊಡಿ ಎನ್ನುವ ಮೂಲಕ ಪರಿಣಾಮಕಾರಿ ವಿಮರ್ಶೆ ನಡೆಯುತ್ತಿಲ್ಲ ಎಂಬುದನ್ನು ಈ ಚಿತ್ರ ಹೇಳುಲು ಹೊರಟಿದೆ. ಈ ಕಿರುಚಿತ್ರಕ್ಕೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಅದೇ ಸಮಯದಲ್ಲಿ ಕನ್ನಡ ವಿಮರ್ಶಾ ಲೋಕವನ್ನು ಒಮ್ಮುಖವಾಗಿ ನೋಡುವುದು ಕಿರುಚಿತ್ರದ ಲೋಪ ಎಂದು ಹಲವರು ಆಕ್ಷೇಪ ಸಹ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಫೋಟೊ, ಡಿ.ಆರ್ ನಾಗರಾಜ್‌ ರವರ ಹೇಳಿಕೆ ಅಗತ್ಯವಿತ್ತೆ ಎಂದು ಸಹ ಪ್ರಶ್ನಿಸಿದ್ದಾರೆ.ಟಿ.ಸ್ ನಾಗಾಭರಣ್ ರವರು ವಿರ್ಮಶಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೈ.ಜಿ ಉಮಾರವರು ಯುವ ಲೇಖಕಿಯ ಪಾತ್ರ ನಿರ್ವಹಿಸಿದ್ದಾರೆ. ಸತ್ಯಾ ಹೆಗ್ಗಡೆ ಅವರು ಸಿನಿಮಾಟೋಗ್ರಫಿ ಮಾಡ್ಡಿದ್ದಾರೆ.

Please follow and like us: