ಹೆಣ್ಣು ಮಕ್ಕಳಿಲ್ಲದೆ ಆಹಾರ ಭದ್ರತೆ ಸಾಧ್ಯವಿಲ್ಲ – ದು ಸರಸ್ವತಿ

ಕೊಪ್ಪಳ : ಆಹಾರವನ್ನು ಯಾವ ಸಮಯದಲ್ಲಿ. ಯಾರಿಗೆ ಕೊಡಬೇಕು. ಯಾವ ರೀತಿ ಆಹಾರವನ್ನು ಕೊಡಬೇಕು ಎಂಬುವುದನ್ನು ಮಹಿಳೆ ಆದಿಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾಳೆ. ಹಾಗಾಗಿ ಹೆಣ್ಣುಮಕ್ಕಳಿಲ್ಲದೆ ಆಹಾರ ಭದ್ರತೆ ಸಾಧ್ಯವಿಲ್ಲ ಎಂದು ಖ್ಯಾತ ಸಾಹಿತಿ,ಹೋರಾಟಗಾರ್ತಿ ದು. ಸರಸ್ವತಿ ಅವರು ಹೇಳಿದರು.


ಅವರು ಕೊಪ್ಪಳ ನಗರದ ತಾಲೂಕಾ ಪಂಚಾಯತ್ ಆವರಣದಲ್ಲಿಯ ಕೃಷಿ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಹಿರೇ ಬಿಡ್ನಾಳ ಗ್ರಾಮದ ವಿಸ್ತಾರ ಸಂಸ್ಥೆಯ ವತಿಯಿಂದ ಆಹಾರ ಭದ್ರತೆ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಮತ್ತು ಕೋವಿಡ್ ಸಂದರ್ಭದಲ್ಲಿ ಪಡಿತರ ವ್ಯವಸ್ಥೆ ಅಧ್ಯಯನದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲರ ಮನೆಯಲ್ಲಿ ಮಹಿಳೆಯೇ ಅಡುಗೆ ಮಾಡುತ್ತಾಳೆ ಆಕೆಯೇ ಅಪೌಷ್ಟಿಕತೆಗೆ ಒಳಗಾಗುತ್ತಾಳೆ. ಎಲ್ಲರೂ ಊಟ ಮಾಡಿದ ನಂತರ ತಾನು ಊಟ ಮಾಡುತ್ತಾಳೆ. ಇಷ್ಟೆಲ್ಲ ಮಾಡುವ ಮಹಿಳೆಗೆ ಅಪೌಷ್ಟಿಕತೆ ಕಾಡುತ್ತಿದೆ. ಆದ್ದರಿಂದ ಮಹಿಳೆಯರು ಇಂದಿಗೂ ರಕ್ತಹೀನತೆಯ ಅಪೌಷ್ಟಿಕತೆಯಿಂದ ಬಳಲುತ್ತಾರೆ. ತಾಯಂದಿರ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಮಹಿಳೆಯರ ಮೇಲಿನ ಲಿಂಗತಾರತಮ್ಯ. ಆಹಾರ ಭದ್ರತೆಗೆ ತೊಡಕಾಗಿದೆ. ಸ್ವಾರ್ಥ ಬಿಟ್ಟು ಎಲ್ಲರಿಗಾಗಿ ಮತ್ತು ಮುಂದಿನ ಪೀಳಿಗೆಗಾಗಿ ನಾವು ಆಹಾರ ಭದ್ರತೆ ಕಾಪಾಡಬೇಕು. ದೇಶಿಯ ಮೂಲ ಸಂಸ್ಕೃತಿಯನ್ನು ಹೆಣ್ಣುಮಕ್ಕಳು ಉಳಿಸುತ್ತಾರೆ. ಹಳೆ ದೇಶಿಯ ನೆಲಮೂಲ ಸಂಸ್ಕೃತಿ ಮತ್ತು ಸಾವಯವ ಕೃಷಿ ಪದ್ಧತಿ ಮೂಲದಲ್ಲಿ ಅಳವಡಿಸಿಕೊಂಡಿರುತ್ತಾರೆ ಎಂದು ಹೇಳಿದರು.ರೂಪ ನಾಯ್ಕ ಮಾತನಾಡಿ ಪ್ರತಿಯೊಬ್ಬರಿಗೂ ಆಹಾರದ ಹಕ್ಕು ಎನ್ನುವುದು ಪ್ರಮುಖವಾದದ್ದು. ಮಕ್ಕಳ ಪೌಷ್ಠಿಕತೆ ಬಡತನಕ್ಕೆ ಒಳಗಾಗಿ ಶಿಕ್ಷಣ ದಿಂದ ವಂಚಿತರಾದ ಮಕ್ಕಳನ್ನು ಆಹಾರದ ಹಕ್ಕಿನಿಂದ ರಕ್ಷಿಸಬಹುದು. ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರಿಗೂ ಆಹಾರ ಸಿಗುವುದು ಮೂಲಭೂತ ಕರ್ತವ್ಯವಾಗಿದೆ. ಆಳುವ ಸರ್ಕಾರಗಳು ಯಾವುದೇ ಜಾತಿ ಧರ್ಮ ಬಣ್ಣವನ್ನು ನೋಡದೆ ಪ್ರತಿಯೊಬ್ಬರಿಗೂ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನು ಒದಗಿಸುವುದು ಸರ್ಕಾರದ ಮೂಲ ಉದ್ದೇಶ ವಾಗಬೇಕಾಗಿದೆ.ಈ ನಿಟ್ಟಿನಲ್ಲಿ ಸರಕಾರದಿಂದ ಸಿಗುವ ಪಡಿತರ ಅದು ಉಚಿತ ಅಲ್ಲ. ನಾವು ಕಟ್ಟುವ ತೆರಿಗೆಯಲ್ಲಿ ನಮಗೆ ಪಡಿತರ ಕೊಡುತ್ತಾರೆ ಅದನ್ನು ನಮಗೆ ಗೌರವದಿಂದ ಕಾಣಬೇಕು ಎಂದು ಹೇಳಿದರು.

ಹರೀಶ್ ಜೋಗಿ ಮಾತನಾಡಿ ಆಹಾರದ ಹಕ್ಕಿನ ಆಧಾರದ ಮೇಲೆ ಸರಕಾರ 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಊಟದ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಅದು ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಭಾರತವು ಹಸಿವು ಮುಕ್ತ ರಾಷ್ಟ್ರವಾಗಬೇಕು ಎಂಬ ಗುರಿಯನ್ನು ಹೊಂದಿದೆ ಎಂದು ಹೇಳಿದರು.ವಿದ್ಯಾ ಪಾಟೀಲ್ ಮಾತನಾಡಿ ನವಜೀವನ ಮಹಿಳಾ ಒಕ್ಕೂಟವು ಹಲವು ಹೋರಾಟಗಳ ಹಾದಿಯಲ್ಲಿ ಪಿಡಿಎಸ್ ವ್ಯವಸ್ಥೆಯನ್ನು ಬಲಪಡಿಸುವ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಪಡಿತರ ವ್ಯವಸ್ಥೆ ಬಡಜನರಿಗೆ ಬಡ ಮಹಿಳೆಯರಿಗೆ ತುಂಬಾ ಸಮಸ್ಯೆಯನ್ನು ತಂದುಕೊಟ್ಟಿದೆ.ಪಿಡಿಎಸ್ ವ್ಯವಸ್ಥೆಯಲ್ಲಿ ಜನರಿಗೆ ಬರಿ ಅಕ್ಕಿ ಕೊಟ್ಟರೆ ಸಾಕಾಗಲ್ಲ. ಇನ್ನೂ ಹಲವು ಮೂಲಭೂತವಾಗಿ ಅಡುಗೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಕೊಡಬೇಕಾಗಿರುವುದು ಆಳುವ ಸರ್ಕಾರದ ಜವಾಬ್ದಾರಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಡುವ ಪಡಿತರದಲ್ಲಿ ಕಡಿತವಾಗಿತ್ತು. ಇದರಿಂದ ಜನಸಾಮಾನ್ಯರ ಸಮಸ್ಯೆಗಳ ವಿರುದ್ಧವೂ ಹೋರಾಟ ಮಾಡಿದೆವು ಎಂದು ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು.

ಧರ್ಮರಾಜ ಗೋನಾಳ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪಡಿತರ ವ್ಯವಸ್ಥೆಯು ಸಂಪೂರ್ಣ ವಿಫಲ ಗೊಂಡಿತ್ತು .ವಲಸೆ ಕಾರ್ಮಿಕರು. ಕೂಲಿ ಕಾರ್ಮಿಕರು. ಆಹಾರಧಾನ್ಯಗಳು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇತ್ತು. ಸರಕಾರಗಳು ಯಾವುದೇ ನೀತಿ-ನಿಯಮಗಳನ್ನು ಕಠಿಣವಾಗಿ ತೆಗೆದುಕೊಳ್ಳದೆ ಇಂತಹ ಸಂದರ್ಭದಲ್ಲಿ ಹಸಿದವರಿಗೆ. ಕೂಲಿ ಇಲ್ಲದವರಿಗೆ. ವಲಸೆ ಕಾರ್ಮಿಕರಿಗೆ. ಮನೆಮನೆಗಳಿಗೆ ಪಡಿತರ ವ್ಯವಸ್ಥೆಯನ್ನು ಮುಟ್ಟಿಸಬೇಕಾಗಿತ್ತು. ಆದರೆ ಅದೇ ಸಮಯದಲ್ಲಿಯೇ ಪಡಿತರ ಕಡಿತ ಮಾಡಿ ಜನರನ್ನು ಇನ್ನಷ್ಟು ಸಮಸ್ಯೆಗೆ ಒಳಗಾಗುವಂತೆ ಮಾಡಿತ್ತು. ಕೋವಿಡ್ ಗಿಂತಲೂ ಹಸಿವಿನಿಂದ ಸತ್ತವರ ಸಂಖ್ಯೆ ಬಹುದೊಡ್ಡದಿದೆ ಎಂದು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಆಶಾ.ವಿ ಅವರು ಮಾತನಾಡಿ ಪಡಿತರ ಎನ್ನುವುದು ಜನರ ಹಕ್ಕು ಹಾಗಾಗಿ ಅದನ್ನು ಕೊಡುವಲ್ಲಿ ತಾತ್ಸಾರ ಮಾಡುವುದು ಬೇಡ .ಪಡಿತರ ಉಚಿತವಾಗಿ ಅಲ್ಲ ಅದು ನಮ್ಮ ದುಡ್ಡಿನಿಂದಲೇ ನಮಗೆ ವಾಪಸ್ಸು ಕೊಡುತ್ತಿರುವುದು ಎಂದು ವಿಷಯವನ್ನು ಹಂಚಿಕೊಂಡರು. ಪಿಡಿಎಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಪಿಡಿಎಸ್ ವ್ಯವಸ್ಥೆ ಸಮರ್ಪಕವಾಗಿ ಜಾರಿ ಆಗದಿರವುದರಿಂದ ಮಹಿಳೆಯರಿಗೆ ಹಲವಾರು ರೀತಿಯ ತೊಂದರೆಗಳನ್ನು ಅದರಲ್ಲೂ ರಕ್ತಹೀನತೆ ಮಹಿಳೆಯರಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿರುವುದು. ಊಟದಲ್ಲಿ ತಾರತಮ್ಯ ಮಾಡುವುದೇ ಕಾರಣ ಎಂದು,ಪಡಿತರ ದಾನವಲ್ಲ ಮೂಲಭೂತ ಹಕ್ಕು ಎಂದು ವಿವರಿಸಿದರು.

ನಾಟಕ : ಬಾಂಧವಿ ಮಕ್ಕಳಿಂದ ಪಡಿತರ ವ್ಯವಸ್ಥೆಯ ಕುರಿತು ಕೋವಿಡ ಸಂದರ್ಭದಲ್ಲಿ ಅನುಭವಿಸಿದಂತಹ ಅನುಭವಗಳನ್ನು ಇಟ್ಟುಕೊಂಡು ಮಕ್ಕಳು ತುಂಬಾ ಅರ್ಥಗರ್ಭಿತವಾದ ನಾಟಕವನ್ನು ಪ್ರದರ್ಶನ ಮಾಡಿದರು. ಬಡ ಜನರು. ದುರ್ಬಲರು. ವೃದ್ಧರು. ವಿಕಲಚೇತನರು ಸರ್ಕಾರದ ಪಡಿತರ ವ್ಯವಸ್ಥೆಯನ್ನು ಪಡೆಯಲು ಮೂಲ ದಾಖಲೆಗಳಿಲ್ಲದೆ ಅವುಗಳನ್ನು ಪಡೆದುಕೊಳ್ಳಲು ಹೇಗೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಮಕ್ಕಳು ಮನಮುಟ್ಟುವಂತೆ ಸಭಿಕರಿಗೆ ಅಭಿನಯ ಮೂಲಕ ತೋರಿಸಿದರು.

ನಂತರ ಕಾರ್ಯಕ್ರಮದಲ್ಲಿ ನಾಸರ್ ಪಿ.ಎಸ್. ರವರು ಪಿಡಿಎಸ್ ಅಧ್ಯಯನದ ವರದಿಯನ್ನು ಕೋವಿಡ್ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು. ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿಯ ಹಳ್ಳಿಗಳಲ್ಲಿ ಅಧ್ಯಯನವನ್ನು ಆರಂಭಿಸಿ ವೈಜ್ಞಾನಿಕ ಶಿಫರಸ್ಸುಗಳನ್ನು ಎಲ್ಲರಿಗೂ ಮನಮುಟ್ಟುವಂತೆ ಮಂಡನೆ ಮಾಡಿದರು.ನಂತರ ವರದಿ ಕುರಿತು ಚರ್ಚೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್, ದಲಿತ ಸಂಘಟನೆಯ ಲಿಂಗು ಬೆಣಕಲ್, ಶಂಕರ್ ಭಂಡಾರಿ,ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಬಸವರಾಜ್, ವಿರುಪಮ್ಮ, ಗುರುರಾಜ್ ಪಾಟೀಲ್, ಹನುಮೇಶ್, ಶಿವಪ್ಪ .ಸುಂಕಪ್ಪ ಮೀಸಿ, ಜಾಸ್ಮಿನ್ ಬೇಗಮ್, ಯೋಸುಫ್ ಡಿಜೆ, ಅಲಿ ಸಾಬ್, ದೊಡ್ಡ ಬಸ್ಸಮ್ಮ. ಕುಸುಮ ರಮೇಶ್, ಪ್ರಕಾಶ್ ಹಳ್ಳಿ, ಶಂಕರ್, ಶೀಲಾ ಹಾಲ್ಕುರಿಕೆ, ಲಕ್ಷ್ಮಣ ಪೀರಗಾರ, ಯುವ ಚಿಂತಕರಾದ ಪ್ರಶಾಂತ್ ದಾನಪ್ಪ, ಹಾಗೂ ಇನ್ನೂ ಅನೇಕ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಬೆಂಗಳೂರಿನ ಹೈಕೋರ್ಟ್ ವಕೀಲರಾದ ಬಿ‌. ಎನ್. ಮಂಜುನಾಥ್ ಅವರು ಮಾಡಿದರು.

Please follow and like us: