ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ -2022 ರ ಶ್ರೀಗಳ ಸಂದೇಶ

ಪ್ರತಿವರ್ಷ ರಥೋತ್ಸವದ ನಂತರ ಗವಿಮಠದ ಶ್ರೀಗಳು ಸಂದೇಶ ನೀಡುತ್ತಿದ್ದರು. ಆದರೆ ಈಸಲ ಕರೋನಾ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಇಡೀ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಬೆಳಗಿನ ಜಾವವೇ ರಥೋತ್ಸವ ನಡೆಸಲಾಗಿದೆ.

ಭಕ್ತಾದಿಗಳು ಯಾವತ್ತೂ ಶ್ರೀಗಳ ಸಂದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದರು ಹೀಗಾಗಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ -2022 ರ  ಶ್ರೀಗಳ ಸಂದೇಶ ಹೀಗಿದೆ…

ಅಜ್ಜನ ಜಾತ್ರೆ – ಅದು ಅನುಭಾವದ ಮಜ್ಜನ . ನಮ್ಮೆಲ್ಲರ ಹೃದಯಕ್ಕೆ ಸಜ್ಜನಿಕೆ ಸದ್ಭಾವ ಸಂಸ್ಕಾರಗಳ ಸಿಂಚನ , ಗವಿಸಿದ್ಧೇಶನ ಜಾತ್ರೆ ಭಗವದ್ ಶಕ್ತಿಯ ದಿವ್ಯತೆ , ಭಕ್ತನ ಭಕ್ತಿಯ ಭವ್ಯತೆಗಳ ಸಮಾಗಮ ಸಾಮರಸ್ಯಗಳ ಕೂಡಲಸಂಗಮ . ಕಳೆದೆರಡು ವರ್ಷಗಳಿಂದ ಜಾತ್ರೆಯ ಚಿತ್ರಗಳನ್ನು ಮಾತ್ರ ನೋಡಿ ನೆನಪಿಸುವ ವಿಚಿತ್ರ ಕಾಲ ಬಂತು . ಇಂತಹ ಕಾಲ ಸರಿದು ಸ್ವಾಸ್ಥ್ಯ , ಸಮೃದ್ಧಿ , ಸಂತೋಷ ನಿಮ್ಮೆಲ್ಲರ ಮನೆ – ಮನಗಳಿಗೆ ಹರಿದು ಬರಲಿ . ನಿಮ್ಮೆಲ್ಲರ ನಗು ಮುಖದಲ್ಲಿಯೇ ನಮಗೆ ಗವಿಸಿದ್ಧನ ದರ್ಶನ , ಅದೇ ಜಾತ್ರೋತ್ಸವ ಎಂದು ಸಂದೇಶ ನೀಡಿದ್ದಾರೆ.

Please follow and like us: