ಬೆಳಗಿನ ಜಾವ ಸರಳವಾಗಿ ನೆರವೇರಿತು ಗವಿಸಿದ್ದೇಶ್ವರ ಮಹಾರಥೋತ್ಸವ

ಮಾದರಿಯಾದ ಗವಿಮಠದ ರಥೋತ್ಸವ…

ಕೊಪ್ಪಳ: ಓಮಿಕ್ರಾನ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿಐತಿಹಾಸಿಕ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ. ಇಂದು ಬೆಳಗ್ಗೆ 4.45 ಗಂಟೆಗೆ ಸರಳವಾಗಿ ಮಹಾರಥೋತ್ಸವ ನಡೆದಿದ್ದು,
ಲಕ್ಷಾಂತರ ಭಕ್ತರು ಸೇರುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ರಥೋತ್ಸವನ್ನು ನೆರವೇರಿಸಲಾಯಿತು.


ಕೊವೀಡ್ ನಿಯಮಗಳ ಪ್ರಕಾರ ಅತ್ಯಂತ ಸರಳವಾಗಿ ರಥೋತ್ಸವ ಆಚರಣೆ ಮಾಡಲಾಗಿದ್ದು,ಗವಿಮಠದ ಇತಿಹಾಸದಲ್ಲಿ ಅತ್ಯಂತ ಸರಳವಾಗಿ ನಡೆದ ಮಹಾರಥೋತ್ಸವ ಇದಾಗಿದ್ದು, ಧಾರ್ಮಿಕ ಸಂಪ್ರದಾಯಗಳ ಪ್ರಕಾರ ರಥೋತ್ಸವ ನೆರವೇರಿಸಲಾಯಿತು.
ಪ್ರತಿವರ್ಷ ಲಕ್ಷಾಂತರ ಭಕ್ತರು ಮಹಾರಥೋತ್ಸವ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಇಂತಹ ನಿರ್ಧಾರ ತೆಗೆದುಕೊಂಡಿದ್ದು, ಜನರ ಕಾಳಜಿಯಿಂದ ಶ್ರೀಗಳ ಈ ನಿರ್ಧಾರ ಮಠದ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಲು ಕಾರಣವಾಗಿದೆ..

Please follow and like us: