ಗವಿಮಠ ಜಾತ್ರಾ ಮಹೋತ್ಸವ ಭಕ್ತಾಧಿಗಳಿಗೆ ವಸತಿ ವ್ಯವಸ್ಥೆ ಇಲ್ಲ

ಕೊಪ್ಪಳ : ನಗರದ ಸಂಸ್ಥಾನ ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬೇರೆ ಬೇರೆ ಊರುಗಳಿಂದ ಆಗಮಿಸುವ ಭಕ್ತಾಧಿಗಳಿಗೆ ಉಳಿದುಕೊಳ್ಳಲು ಅವಕಾಶ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಕೋವಿಡ್ 19 ಮತ್ತು ಓಮಿಕ್ರಾನ್ ಸಾಂಕ್ರಾಮಿಕ ಕಾಯಿಲೆ ಇರುವುದರಿಂದ 2022 ರ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳು ರದ್ದಾಗಿರುತ್ತವೆ. ಆದ್ದರಿಂದ ಭಕ್ತಾಧಿಗಳಿಗೆ ಶ್ರೀಮಠದ ಆವರಣದಲ್ಲಿರುವ ವಿವಿಧ ಶಾಲೆ, ಕಾಲೇಜು, ಯಾತ್ರಾನಿವಾಸ ಹಾಗೂ ಇನ್ನಿತರ ವಸತಿನಿಲಯಗಳಲ್ಲಿ ಉಳಿದುಕೊಳ್ಳಲು ಈ ಮೂಲಕ ಜಾತ್ರಾ ಮಹೋತ್ಸವದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಸದ್ಭಕ್ತರು ಸಹಕರಿಸಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Please follow and like us: