ಆಹಾರ ಭದ್ರತೆ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ

ಕೋವಿಡ್ ಸಂಧರ್ಭದಲ್ಲಿ ಪಡಿತರ ವ್ಯವಸ್ಥೆಯ ಅಧ್ಯಯನ ವರದಿ ಬಿಡುಗಡೆ


ಕನ್ನಡನೆಟ್

ವಿಸ್ತಾರ ಸಂಸ್ಥೆಯ ವತಿಯಿಂದ ಜನೆವರಿ 18,2022 ರಂದು ಕೊವಿಡ್ ರೆಸ್ಪೊನ್ಸ್ ಯೋಜನೆಯಾದ ರಿಸಲಿಯನ್ಸ್ ಯೋಜನೆಯ ಅಡಿಯಲ್ಲಿ ಆಹಾರ ಭದ್ರತೆ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಕೋವಿಡ್ ಸಂಧರ್ಭದಲ್ಲಿ ಪಡಿತರ ವ್ಯವಸ್ಥೆಯ ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮವನ್ನು ಕೃಷಿ ವಿಸ್ತರಣಾ ಕೇಂದ್ರ, ತಾಲೂಕು ಪಂಚಾಯತ ಆವರಣ ಕೊಪ್ಪಳದಲ್ಲಿ ಆಯೋಜಿಸಲಾಗಿದೆ. ಜನವರಿ 18, 2022 ಅಂದು ಸಂವಿಧಾನ ಕುರಿತು ವಸ್ತು ಪ್ರದರ್ಶನ, ನ್ಯಾಯಬೆಲೆ ಅಂಗಡಿಯ ಪಡಿತರ ವ್ಯವಸ್ಥೆಯ ಕುರಿತಾದ ಕಿರುನಾಟಕ ಬಾಂಧವಿ ಮಕ್ಕಳಿಂದ ಪ್ರದರ್ಶನ, ಕೊವಿಡ್ ಸಂಧರ್ಭದಲ್ಲಿ ಕೊಪ್ಪಳ ಜಿಲ್ಲೆಯ ಪಡಿತರ ವ್ಯವಸ್ಥೆಯ ಅಧ್ಯಯನದ ವರದಿ ಮಂಡನೆ ಮತ್ತು ವರದಿಯನ್ನು ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಕೊಪ್ಪಳ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳ ವತಿಯಿಂದ ವರದಿ ಸಲ್ಲಿಸಲಾಗುವುದು ಎಂದು ವಿಸ್ತಾರ ಸಂಸ್ಥೆ ತಿಳಿಸಿದೆ.

ನಾಡಿನ ಖ್ಯಾತ ಚಿಂತಕರು, ಸಾಹಿತಿಗಳು, ಮಹಿಳಾ ಹೋರಾಟಗಾರರು, ವಕೀಲರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ಮಾತನಾಡಲಿದ್ದಾರೆ.

ಹಾಗಾಗಿ, ಜಿಲ್ಲೆಯ ನಾಗರೀಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ರೈತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಸಾಹಿತಿಗಳು, ಕಲಾವಿದರು ಮಾದ್ಯಮ ಮಿತ್ರರು, ಪ್ರಗತಿಪರ ಸಂಘ-ಸಂಸ್ಥೆಗಳ ಜನಪರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು

ವಿಸ್ತಾರ-ಬಾಂಧವಿ, ಕೊಪ್ಪಳದ
ರಿಸಲಿಯನ್ಸ್ ಯೋಜನಾ ಸಂಯೋಜಕ ಧರ್ಮರಾಜ್ ಗೋನಾಳ,ಸಹಾಯಕ ನಿರ್ದೇಶಕರು ಆಶಾ ವಿ, ಸಹ ನಿರ್ದೇಶಕರು ನಾಜರ್ ಪಿ ಎಸ್. ಕೋರಿದ್ದಾರೆ.

Please follow and like us: