ಕಾತರಕಿ-ಗುಡ್ಲಾನೂರು ಗ್ರಾಪಂ ಅಧ್ಯಕ್ಷರಾಗಿ ಶಂಕ್ರಪ್ಪ ಮಾಟ್ರ ಅವಿರೋಧ ಆಯ್ಕೆ


ಕೊಪ್ಪಳ : ಯರಿಯಪ್ಪಗೌಡ ಹಿರೇಗೌಡ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಕಾತರಕಿ-ಗುಡ್ಲಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಡೊಂಬರಳ್ಳಿ ಗ್ರಾಮದ ಸದಸ್ಯ ಶಂಕ್ರಪ್ಪ ಮಾಟ್ರ ಅವರು ಅಧಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

೧೯ ಸದಸ್ಯ ಬಲವಿರುವ ಗ್ರಾಮ ಪಂಚಾಯಿತಿಯಲ್ಲಿ ಕೇವಲ ಇವರೊಬ್ಬರೇ ಅಧಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರಿಂದ ಶಂಕ್ರಪ್ಪ ಮಾಟ್ರ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಮುಖಂಡರಾದ ವೆಂಕನಗೌಡ ಹಿರೇಗೌಡ್ರ, ಶಂಕ್ರಗೌಡ ಹಿರೇಗೌಡ್ರ, ಕೃಷ್ಣಾರಡ್ಡಿ ಗಲಬಿ, ದೇವರಡ್ಡಿ ಮಾಟ್ರ, ರಾಮನಗೌಡ ನಂದಿನಗೌಡ್ರ ಸೇರಿದಂತೆ ಅನೇಕರು ಇದ್ದರು.
ವಿಜಯೋತ್ಸವ ಃ- ಕಾತರಕಿ-ಗುಡ್ಲಾನೂರು ಗಾಮ ಪಂಚಾಯಿತಿ ಅಧಕ್ಷರಾಗಿ ಶಂಕ್ರಪ್ಪ ಮಾಟ್ರ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಲಾಯಿತು.Please follow and like us: