ಕೊಪ್ಪಳ ಜೆಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಇರುವಂತ ಐತಿಹಾಸಿಕ ಸ್ಥಳಗಳಾದ ಕೀಲೆ ಗುಡ್ಡದ ಕೋಟೆ ಮತ್ತು ಹುಲಿಕೆರೆ ಮತ್ತು ಬಾಹೂದ್ದರ್ ಬಂಡಿ ಕೋಟೆ ಹಾಗೂ ಹೂವಿನಾಳ ಗ್ರಾಮದ ಮಾರ್ಗದಲ್ಲಿ ಇರುವ ಅಶೋಕ ಶಾಸನ ಮತ್ತು ಪಾಲ್ಕಿಗುಂಡು ಅಶೋಕ ಶಿಲಾ ಶಾಸನಗಳನ್ನು ರಕ್ಷಣೆ ಮಾಡಬೇಕು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಘನತೆ ಗೌರವದ ಪ್ರಶ್ನೆ ಕೂಡ ಆಗಿದೆ.
ವಿಕ್ಷಣೆಗೆ ಹೋಗುವ ಪ್ರವಾಸಿಗರಿಗೆ ಸರಿಯಾದ ದಾರಿ ಸಿಗದೆ ಪರದಾಡುವ ಹಾಗೆ ದಾರಿಗಳ ಸ್ಥಿತಿ ಅದೆಗೆಟ್ಟಿದೆ ಆದ ಕಾರಣ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಮುಂದಾಗಬೇಕಿದೆ ಭಾರತ ದೇಶವನ್ನು ಮೊಟ್ಟಮೊದಲ ಬಾರಿಗೆ ಅಖಂಡ ಭಾರತವನ್ನಾಳಿದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಸಾಮ್ರಾಜ್ಯಕ್ಕೆ ಸಂಬಂದಿಸಿದ ಶಾಸನಗಳು ಸರಿಯಾದ ರಕ್ಷಣೆ ಇಲ್ಲದೆ ಆಳಾಗುತ್ತಿವೆ ಮತ್ತು ಕೊಪ್ಪಳದ ಕೋಟೆಗಳಾದ ಕೀಲೆ ಕೋಟ ಹಾಗೂ ಬಾಹೂದ್ದುರ್ ಬಂಡಿ ಕೋಟೆಗಳಲ್ಲಿ ಅಕ್ರಮ ಚಟುವಟಿಕೆಗಳು ಕೂಡ ನಡೆಯುತ್ತಿವೆ ಆದ ಕಾರಣ ತಾವುಗಳು ಈ ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಮುಂದಾಗಬೇಕು ಮತ್ತು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಪ್ರವೇಶಕ್ಕೆ ಅನೂಕುಲವಾಗುವಂತೆ ಅಭಿವೃದ್ಧಿ ಪಡಿಸಬೇಕೆಂದು ಭೀಮ್ ಆರ್ಮಿ ಕೊಪ್ಪಳ ಜಿಲ್ಲಾ ಸಮಿತಿಯು ಕೊಪ್ಪಳ ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾ ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರು ರಾಘು ಚಾಕ್ರಿ ಖಜಾಂಚಿ ಮಾರ್ಕೇಂಡಪ್ಪ ಬೆಲ್ಲದ್ ಮತ್ತು ಆನಂದ್ ಬೆಲ್ಲದ್. ಉಪಸ್ಥಿತರಿದ್ದರು