ಪುಸ್ತಕಗಳು ಜ್ಞಾನ ತುಂಬಿ ಸುಂದರ ಜೀವನ ನಿಮಿಸುತ್ತವೆ: ಡಾ. ಆರ್ ಮರೇಗೌಡ



ಪುಸ್ತಕಗಳು ಪರಿಕ್ಷೇಯ ಓದುಗಾರಿಕೆಗೆ ಮಾತ್ರ ಸಹಾಯವಾಗಿರದೆ ಜ್ಞಾನ ತುಂಬಿ ಸುಂದರ ಜೀವನ ನಿರ್ಮಿಸುತ್ತವೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಒದುವುದಕ್ಕಾಗಿ ಮೀಸಲಿಡಬೇಕು ಎಂದು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಹೇಳಿದರು.
ನಗರದ ಶ್ರೀ ಗವಿಸಿದದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಾರಂಗ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಹಾಗೂ ಶ್ರಿಗವಿಸಿದ್ಧೇಶ್ವರ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ನಡೆದ ಹೊಸ ಶಿಕ್ಷಣ ನೀತಿ-೨೦೨೦ ಪಠ್ಯಕ್ರಮ ಆಧಾರಿತ ಕಲಾ ವಿಭಾಗದ ಬಿ.ಎ ಪ್ರಥಮ ಸೆಮಿಸ್ಟರಿನ ವಿದ್ಯಾರ್ಥಿಗಳಿಗಾಗಿ ಡಾ. ಬಸವರಾಜ ಪೂಜಾರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ. ಮಲ್ಲಿಕಾರ್ಜುನ ಎಚ್ ಮತ್ತು ಯಮನೂರಪ್ಪ ತಳವಾರ ಉಪಸಂಪಾದಕತ್ವದಲ್ಲಿ ಸಿದ್ಧಗೊಂಡ, ಪ್ರಸಾರಂಗ ಮತ್ತು ವಸಂತ ಪ್ರಕಾಶನ ಪ್ರಕಟಿಸಿದ ಕಲಾವಿಜಯ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉಧ್ಘಾಟಿಸಿ, ಪುಸ್ತಕ ಬಿಡುಗಡೆಗೂಳಿಸಿ ಮಾತನಾಡಿದ ಅವರು ಕಲಾವಿಜಯ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕವಾಗಿದೆ ಜೊತೆಗೆ ನಾಡಿನ ಅನೇಕ ಹಿರಿಯ ವಿದ್ವಾಂಸರು, ಸಾಹಿತಿಗಳು ರಚಿಸಿರುವ ಬರಹಗಳಿಂದ ತುಂಬಿದ ಉತ್ತಮ ಜ್ಞಾನದ ದೀವಿಗೆಯಾಗಿದೆ. ತಾವೇಲ್ಲರು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜ್ಞಾನ ಮತ್ತು ಅಂಕಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.



ವಿಜಯನಗರ ಶ್ರೀ ಕೃಷ್ಣದೇವರಾಯ ವಿಧ್ವವಿದ್ಯಾಲಯ, ಬಳ್ಳಾರಿ ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರು ಅವರು ಮಾತನಾಡಿ ಪ್ರಸಾರಂಗವು ವಿಶ್ವವಿದ್ಯಾಲಯದ ಹೃದಯವಿದ್ದಂತೆ. ಓದು ಜೀವನದ ಅವಿಭಾಜ್ಯ ಅಂಗವಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಓದುಗಾರಿಕೆಯೇ ಮಹತ್ವ. ಇಂದಿನ ವಿದ್ಯಾಥಿಗಳ ಓದಿನ ವಿಷಯದಲ್ಲಿನ ನಿರಾಸಕ್ತಿ ಕುರಿತು ಕಳವಳ ವ್ಯಕ್ಪಡಿಸಿದ ಅವರು ಅಧ್ಯಯನವಿಲ್ಲದೇ ಯಾವುದೇ ಸಾಧನೆಯಾಗುವುದಿಲ್ಲ. ಸುಂದರ ಬದುಕಿನ ನಿರ್ಮಾಣ ಮತ್ತು ಸಾಧನೆಗೆ ಉತ್ತಮ ಓದುಗಾರಿಕೆಯೇ ಮದ್ದು ಆದ್ದರಿಂದ ತಾವೇಲ್ಲರು ಓದುಗಾರಿಕೆಯ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.




ಉಪಸಂಪಾದಕ ಡಾ. ಮಲ್ಲಿಕಾರ್ಜುನ ಎಚ್. ಪುಸ್ತಕದ ಕುರಿತು ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ದಯಾನಂದ ಸಾಳುಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಪ್ರಕಾಶನ ಪ್ರತಿನಿಧಿ ಬಸವರಾಜ ಸಂಕನಗೌಡರ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ನಾಗರಾಜ ಜೆ. ದಂಡೋತಿ ನಿರೂಪಿಸಿದರು. ಡಾ. ರಾಜು ಹೊಸಮನಿ ವಂದಿಸಿದರು. ಕು. ವೈದೇಹಿ ಪ್ರಾರ್ಥಿಸಿದರು.

Please follow and like us: