Koppal ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

Kannadanet ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ದಿ:01-01-2022 ರ ಅರ್ಹತಾ ದಿನಾಂಕದ ಆಧಾರದ ಮೇಲೆ ಕೈಗೊಳ್ಳಲಾದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬAಧಿಸಿದAತೆ ಜನವರಿ 13 ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಿಳಿಸಿದ್ದಾರೆ.



60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 118711-ಪುರುಷ ಮತದಾರರು, 117548-ಮಹಿಳಾ ಮತದಾರರು, 11-ಇತರೆ ಸೇರಿದಂತೆ ಒಟ್ಟು 236270 ಮತದಾರರು, 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 109887-ಪುರುಷ ಮತದಾರರು, 112924-ಮಹಿಳಾ ಮತದಾರರು, 4-ಇತರೆ ಸೇರಿದಂತೆ ಒಟ್ಟು 222815 ಮತದಾರರು, 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 100300-ಪುರುಷ ಮತದಾರರು, 101575-ಮಹಿಳಾ ಮತದಾರರು, 7-ಇತರೆ ಸೇರಿದಂತೆ ಒಟ್ಟು 201882 ಮತದಾರರು, 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 109827-ಪುರುಷ ಮತದಾರರು, 108869-ಮಹಿಳಾ ಮತದಾರರು, 7 ಇತರೆ ಸೇರಿದಂತೆ ಒಟ್ಟು 218703 ಮತದಾರರು ಹಾಗೂ 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 125402-ಪುರುಷ ಮತದಾರರು, 126819-ಮಹಿಳಾ ಮತದಾರರು, 14-ಇತರೆ ಸೇರಿದಂತೆ ಒಟ್ಟು 252235 ಮತದಾರರು ಇದ್ದು, ಜಿಲ್ಲೆಯಲ್ಲಿ ಒಟ್ಟು 564127-ಪುರುಷ ಮತದಾರರು, 567735-ಮಹಿಳಾ ಮತದಾರರು ಹಾಗೂ 43-ಇತರೆ ಸೇರಿದಂತೆ ಒಟ್ಟು 1131905 ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.




ಅಂತಿಮ ಮತದಾರರ ಪಟ್ಟಿಯನ್ನು ಸಂಬAಧಪಟ್ಟ ತಹಶೀಲ್ದಾರರ ಕಚೇರಿಗಳಲ್ಲಿ ಮತ್ತು ಮತಗಟ್ಟೆಗಳಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: