ಗವಿಮಠ ಜಾತ್ರಾ ಮಹೋತ್ಸವ -2022 ಎಲ್ಲಾ ಕಾರ್ಯಕ್ರಮಗಳು ಸಂಪೂರ್ಣವಾಗಿ ರದ್ದು

Gavimath Jatra Nees ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – 2022 ಸಂಸ್ಥಾನ ಶ್ರೀಗವಿಮಠ , ಕೊಪ್ಪಳ , ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್ -19 / ಓಮಿಕಾನ್ ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ನಾಡಿನ ಸದ್ದಭಕ್ತರ ಆರೋಗ್ಯ ದೃಷ್ಟಿಯಿಂದ ಜಾತ್ರಾ ಮಹೋತ್ಸವ -2022 ರ ಎಲ್ಲಾ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಪಡಿಸಿದೆ . ಪೂಜ್ಯರು , ಶ್ರೀಮಠದ ಸದ್ಭಕ್ತರು , ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ .

ಸಂಪ್ರದಾಯ ಮುರಿಯದಂತೆ ಸರಳವಾಗಿ ಕೇವಲ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ . ಒಂದು ವೇಳೆ ಸೋಂಕು ಉಲ್ಬಣಗೊಂಡಲ್ಲಿ ಶ್ರೀಮಠದ ಪ್ರವೇಶವನ್ನು ಸಹ ನಿರ್ಬಂಧಿಸಲಾಗುವುದು . ಜಾಗತಿಕವಾಗಿ ಹರಡಿರುವ ಕೋಡ್ -19 ಓಮಿಕಾನ್ ಸಾಂಕ್ರಾಮಿಕ ಕಾಯಿಲೆ ಕೊನೆಗೊಂಡು ಸಮಾಜದಲ್ಲಿ ಸ್ವಸ್ಥ ವಾತಾವರಣ ನಿರ್ಮಾಣವಾಗಿ ಸರ್ವರಿಗೂ ಶ್ರೀ ಗವಿಸಿದ್ಧೇಶ್ವರನು ಆರೋಗ್ಯ , ಆಯುಷ್ಯ , ಆನಂದ ಸದಾ ಕರುಣಿಸಲೆಂದು ಪ್ರಾರ್ಥಿಸೋಣ . ಶ್ರೀಮಠದ ಈ ಅಧಿಕೃತ ಪ್ರಕಟಣೆಗೆ ಸದ್ಭಕ್ತರೆಲ್ಲರೂ ಸಹಕರಿಸಬೇಕೆಂದು

ಸಂಸ್ಥಾನ ಶ್ರೀಗವಿಮಠ ದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ

Please follow and like us: