ಹನಿ ನೀರಾವರಿ ಪದ್ದತಿ ಕೈಬಿಟ್ಟು ಕಾಲುವೆ ಮೂಲಕ ನೀರು ಪೊರೈಸಿ-ವೈ.ಎನ್.ಗೌಡರ್

ಸಿಂಗಟಾಲೂರು ಏತ ನೀರಾವರಿ ಯೋಜನೆ

ಕೊಪ್ಪಳ, : ಜಿಲ್ಲೆಯ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕು ಸೇರಿದಂತೆ ಪಕ್ಕದ ಗದಗ ಜಿಲ್ಲೆಯ ಮುಂಡರಿಗಿ ತಾಲೂಕುಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಕಾರ್ಯ ಸಾದುವಲ್ಲದ ಸೂಕ್ಷ್ಮ ಹನಿ ನೀರಾವರಿ ಪದ್ದತಿಯು ಅಳವಡಿಸುತ್ತಿದ್ದು, ರೈತರ ಹಾಗೂ ಈ ಯೋಜನೆಯ ಹಿತ ದೃಷ್ಟಿಯಿಂದ ಹನಿ ನೀರಾವರಿ ಪದ್ದತಿಯನ್ನು ಕೈಬಿಟ್ಟು ಕಾಲುವೆ ಮೂಲಕ ನೀರನ್ನು ಪೊರೈಸಿ, ನೀರಾವರಿ ಕಲ್ಪಸಿ ಕೊಡಬೇಕು ಎಂದು ಮುಂಡರಗಿ ತಾಲೂಕ ಅಭಿವೃದ್ದಿ ಹೋರಾಟ ವೇದಿಕೆಯ ಅದ್ಯಕ್ಷ ವೈ.ಎನ್ .ಗೌಡರ್ ರವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಎರಡು ಅವಳಿ ಜಿಲ್ಲೆಯ ಬಹು ಭಾಗ ಒಣ ಭೂಮಿಗಳಿಗೆ ನೀರು ಉಣಿಸಿಸುವ ಯೋಜನೆ ಅಸಮರ್ಪಕವಾಗಿ ಕಾರ್ಯ ನಡೆಯುತ್ತಿರುವರಿಂದ ರೈತರಿಗೆ ಅನೂಕೂಲಕ್ಕಿಂತ ಅನಾನೂಕೂಲವೇ ಹೆಚ್ಚಾಗಿವೆ. ಯಾವದೇ ಸರ್ಕಾರ ಬರಲಿ, ಆ ಸರ್ಕಾದ ಸಚಿವರು, ಶಾಸಕರು ಇದರ ಬಗ್ಗೆ ಅವಲೋಕನ ಮಾಡುತ್ತಿಲ್ಲ, ಕೋಟ್ಯೆಂತರ ಹಣ ಕೀಕ್ ಬ್ಯಾಕ್ ಆಗಿ ಗುತ್ತೆದಾರ ಮತ್ತು ರಾಜಕಾರಣಿಗಳ ಅಪಮೈತ್ರಿಯಿಂದ ಲೋಟಿ ಹೊಡೆದ್ದು ಜೇಬು ತುಂಬಿಸಿ ಕೊಳ್ಳವ ಯೋಜನೆ ಇದಾಗಿದೆ. ಸಾಕಷ್ಟು ಬೃಹತ ಪ್ರಮಾಣದ ಹಣ ಇದರಲ್ಲಿ ಪೂಲಾಗಿದೆ ಎಂದು ಒತ್ತಾಯಿಸಿದ ಅವರು ಸರ್ಕಾರಕ್ಕೆ ಮತ್ತು ಕೊಪ್ಪಳ ಸಂಸದರಿಗೆ ಮನವಿ ಪತ್ರ ಅರ್ಪಿಸಿ ಸರ್ಕಾರದ ಗಮನ ಸೆಳೆಯಲು ನಿರಂತರ ಹೋರಾಟ ಮಾಡುದಾಗಿ ಮುಂಡರಗಿ ತಾಲೂಕ ಅಭಿವೃದ್ದಿ ಹೋರಾಟ ವೇದಿಕೆಯ ಆದ್ಯಕ್ಷ ವೈ.ಎನ್.ಗೌಡರ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ಮುಂಡರಿಗಿ ತಾಲೂಕು ಹಾರೋಗೇರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಹೊಲಗೇರಿ ಉಪಸ್ಥಿರಿದ್ದರು.