2ನೇ ಡೋಸ್ ಲಸಿಕೆ ಮನೆ ಮನೆಗೆ ಹೋಗಿ ನೀಡಿ

: ಟಿ.ಕೃಷ್ಣಮೂರ್ತಿ
Kannadanet ): 2ನೇ ಡೋಸ್ ಲಸಿಕೆಯನ್ನು ಪಡೆಯದಿ ಉಳಿದಿರುವವರ ಮನೆ ಮನೆಗೆ ಹೋಗಿ ಲಸಿಕೆಯನ್ನು ನೀಡಿ ಎಂದು ತಾಲೂಕ ಪಂಚಾಯತಿ ಆಡಳಿತಾಧಿಕಾರಿ ಟಿ.ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ತಾಲೂಕ ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ (ಡಿ.30) ಹಮ್ಮಿಕೊಳ್ಳಲಾಗಿದ್ದ ತಾ.ಪಂ ಸಾಮಾನ್ಯಸಭೆ/ ಕರ್ನಾಟಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ವಿವಿಧ  ಇಲಾಖೆಗಳ ಇಲ್ಲಿಯವರೆಗಿನ ಪ್ರಗತಿಯನ್ನು ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದರು. ಆರೋಗ್ಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಮಂಡಿಸಿದ ಸಂಧರ್ಭದಲ್ಲಿ ಓಮಿಕ್ರಾನ್ ಆತಂಕ ಜನರಲ್ಲಿ ಕಾಡುತ್ತಿರುವದರಿಂದ ಈಗಾಗಲೇ 1ನೇ ಡೋಸ್ ಲಸಿಕೆ ಪಡೆದವರಿಗೆ 2ನೇ ಡೋಸ್ ಲಸಿಕೆಯನ್ನು ಮನೆ ಮನೆಗೆ ಹೋಗಿ ಅಭಿಯಾನ ರೂಪದಲ್ಲಿ ಯಶಸ್ವಿಗೊಳಿಸಲು ಎಲ್ಲಾ ಹಂತದ ಅಧಿಕಾರಿಗಳು ಹಾಗು ಸಿಬ್ಬಂದಿಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕೆಂದು ಆಡಳಿತಾಧಿಕಾರಿಗಳು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
2ನೇ ಡೋಸ್ ಲಸಿಕೆ ಪಡೆದವರಿಗೆ 08 ತಿಂಗಳು ನಂತರ ಬೂಸ್ಟರ್ ಡೋಸ್  ಲಸಿಕೆ ನೀಡುವ ಬಗ್ಗೆ ಹಾಗೂ ಶಾಲಾ ಮಕ್ಕಳಲ್ಲಿ ಮತ್ತು ಅವರ ಪಾಲಕರಲ್ಲಿ ಲಸಿಕೆ ಹಾಕಿಕೊಳ್ಳುವಲ್ಲಿ ಅರಿವು ಮೂಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯವರು ವಿವರಿಸಿದರು.
ನಂತರ ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದು, ಇಲಾಖೆಯವರಿಗೆ ಬೆಳೆ ಹಾನಿಯಿಂದ ಒಳಗಾದ ರೈತರ ಗ್ರಾಮ ಪಂಚಾಯತಿವಾರು, ಗ್ರಾಮವಾರು ಮತ್ತು ಬೆಳೆವಾರು ಮಾಹಿತಿ ನೀಡಬೇಕು. ಇಲಾಖೆಯಿಂದ ರೈತರಿಗೆ ದೊರಕುವ ಯೋಜನೆಯ ಬಗ್ಗೆ ಪ್ರಚಾರ ಕೈಗೊಂಡು, ಎಲ್ಲಾ ಇಲಾಖೆಯ ಅನುಷ್ಠಾನ ಅಧಿಕಾರಿಗಳಿಗೆ ಗ್ರಾಮವಾರು, ಗ್ರಾಮ ಪಂಚಾಯತಿವಾರು ಇಲಾಖೆಯ ಪ್ರಗತಿ ವರದಿಯನ್ನು ಮುಂದಿನ ಸಭೆಯಲ್ಲಿ ಸ್ಪಷ್ಟವಾಗಿ ಮಂಡಿಸುವAತೆ ಆಡಳಿತಾಧಿಕಾರಿಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.  
ಸಭೆಯಲ್ಲಿ ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಎಚ್., ತಾಲೂಕ ಯೋಜನಾಧಿಕಾರಿ ರಾಜೇಸಾಬ ನಧಾಪ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎನ್.ಎಚ್., ಮಹಾತ್ಮಾ ಗಾಂಧಿ ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಸೌಮ್ಯ ಕೆ. ಸೇರಿದಂತೆ ತಾಲ್ಲೂಕ ಮಟ್ಟದ ಅಧಿಕಾರಿಗಳು ಮತ್ತು ನಾಮ ನಿರ್ದೇಶಿತ ತಾಲೂಕ ಪಂಚಾಯತಿ ಕೆಡಿಪಿ ಸದಸ್ಯರು, ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.

Please follow and like us: