ಡಾ. ಸಿದ್ಧಲಿಂಗಯ್ಯನವರ ಬದುಕು-ಬರಹ ವಿಚಾರಸಂಕಿರಣ : ಪ್ರಬಂಧಗಳಿಗೆ ಆಹ್ವಾನ


ಕೊಪ್ಪಳ, ): ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಸಿದ್ಧಲಿಂಗಯ್ಯನವರ ಬದುಕು-ಬರಹ ವಿಚಾರಸಂಕಿರಣಕ್ಕೆ ಪ್ರಬಂಧಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇದೇ ಜನವರಿ 21 ಮತ್ತು 22 ರಂದು “ಡಾ. ಸಿದ್ಧಲಿಂಗಯ್ಯನವರ ಬದುಕು-ಬರಹ’’ ಎಂಬ ರಾಜ್ಯಮಟ್ಟದ ವಿಚಾರಸಂಕಿರಣಯನ್ನು ಹಮ್ಮಿಕೊಂಡಿದೆ.  ಈ ವಿಚಾರಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು ನಡೆಯಲಿವೆ. ಈ ಗೋಷ್ಠಿಯಲ್ಲಿ ಡಾ. ಸಿದ್ಧಲಿಂಗಯ್ಯನವರ ಬದುಕು-ಬರಹ ಕುರಿತಾಗಿ ಪ್ರಬಂಧ ಮಂಡಿಸುವವರು ಅರ್ಜಿಯೊಂದಿಗೆ ಪ್ರಬಂಧವನ್ನು ಸಲ್ಲಿಸಬೇಕು.
ಪ್ರಬಂಧ ಸಲ್ಲಿಸಲು ಜ. 12 ಕೊನೆಯ ದಿನವಾಗಿದ್ದು, ಇದರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಲು ಕೋರಿದೆ.  ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್  http://sahithyaacademy.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Please follow and like us: