ಮಾಧ್ಯಮಗಳು ಪ್ರಭುತ್ವದ ತುತ್ತೂರಿಯಾದರೆ ಜನತೆ ಸಹಿಸುವುದಿಲ್ಲ
-ಟಿ.ಗುರುರಾಜ

ಕನ್ನಡನೆಟ್ ನ್ಯೂಸ್ :

ಕಲಬುರಗಿ ಜ.04:

ಮಾಧ್ಯಮಗಳು ನಿಷ್ಪಕ್ಷಪಾತವಾಗಿ,ನಿರ್ದಾಕ್ಷಿಣ್ಯವಾಗಿ ವರದಿಗಳನ್ನು ಮಾಡದೆ ,ಜನಸಾಮಾನ್ಯರ ,ರೈತರ ಹೋರಾಟಕ್ಕೆ ಧ್ವನಿಯಾಗದೇ ಕೇವಲ ಪ್ರಭುತ್ವದ ತುತ್ತೂರಿಯಾದರೆ ಜನತೆ ಸಹಿಸುವುದಿಲ್ಲ ಎಂದು ಹಿರಿಯ ಪತ್ರಕರ್ತ ,ಹಲೋ ಮೈಸೂರು ಸಂಪಾದಕ ಟಿ.ಗುರುರಾಜ ಹೇಳಿದರು.

ಇಲ್ಲಿನ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ “ಮಾಧ್ಯಮಗಳು ಮತ್ತು ಸರ್ಕಾರದ ಸವಾಲುಗಳು” ಕುರಿತ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಬಹಳಷ್ಟು ಜನ ಕರಪತ್ರ ಗಾತ್ರದ ಪತ್ರಿಜೆ,ಕ್ಯಾಮೆರಾ ಹಿಡಿದುಕೊಂಡು ಅಧಿಕಾರಿಗಳನ್ನು ಬೆದರಿಸುವ ಪೀತ ಪತ್ರಿಕೋದ್ಯಮವನ್ನು ತಡೆಯಬೇಕು.ನಮ್ಮ ವಾಹನಗಳಿಗೆ ಪ್ರೆಸ್ ಅಂತಾ ಚೀಟಿ ಹಾಕಿಕೊಂಡು ಓಡಾಡುವಾಗ ಯಾರಾದರೂ ಪೊಲೀಸರು ದಾಖಲೆ ಕೇಳಿದರೆ ಅವರ ಮೇಲೆ ಮುಗಿ ಬೀಳುವ ಪ್ರವೃತ್ತಿ ಸರಿಯಲ್ಲ.ಎಲ್ಲ ಕಾನೂನುಗಳನ್ನು ಗೌರವಿಸಿ,ಪಾಲಿಸಬೇಕು ಇಲ್ಲದಿದ್ದರೆ ಜನರು ಮಾಧ್ಯಮ ಪ್ರತಿನಿಧಿಗಳನ್ನು ಅಗೌರವದಿಂದ ಕಾಣುತ್ತಾರೆ.ಪತ್ರಿಕೋದ್ಯಮದ ಘನತೆ,ಗೌರವ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆಕರ್ಷಣೆಯಿಂದ ,ಭ್ರಮೆಯಿಂದ ಹೊಸಪೀಳಿಗೆ ಪತ್ರಿಕಾ ವೃತ್ತಿಗೆ ಬರಬಾರದು.ಸಮಾಜದ ಋಣ ತೀರಿಸುವ ಜವಾಬ್ದಾರಿಯೊಂದಿಗೆ ಈ ರಂಗಕ್ಕೆ ಬರಬೇಕು.ವಿಶೇಷ ಸ್ಥಾನಮಾನ ಬಯಸಬಾರದು. ಬರವಣಿಗೆ,ಅಧ್ಯಯನ ರೂಢಿಸಿಕೊಳ್ಳಬೇಕು ಎಂದರು.

ಬಿ.ವಿ.ಚಕ್ರವರ್ತಿ, ಶಿವಶರಣಪ್ಪ ವಾಲಿ ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶರಣು ಜಿಡಗಾ ಮತ್ತಿತರರು ಉಪಸ್ಥಿತರಿದ್ದರು.

Please follow and like us: