ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು- ಹಾಲಪ್ಪ ಆಚಾರ್


ಕನ್ನಡನೆಟ್ : ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗಬೇಕು ಮತ್ತು ಹಿಂದಿನ ವರ್ಷದ ಯಾವುದೇ ಕೆಲಸ ಮತ್ತು ಕಾಮಗಾರಿಗಳನ್ನು ಉಳಿಯದಂತೆ ಮುಂದಿನ ಮೂರು ತಿಂಗಳ ಒಳಗಾಗಿ ಮುಗಿಯಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಸಚಿವರಾದ ಹಾಲಪ್ಪ ಆಚಾರ್ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ನಡೆದ 2021-22ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೋವಿಡ್ ಬಾದೆಯಿಂದಾಗಿ ಬಹಳ ದಿನಗಳ ನಂತರ ನಾವೆಲ್ಲರೂ ಸೇರಿದ್ದೆವೆ ನಮ್ಮ ಕೆಲಸವನ್ನು ಜನ ಸ್ನೆಹಿಯಾಗಿ ಮಾಡಿದಾಗ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಜನರ ಪ್ರೀತಿಗೆ ಅಧಿಕಾರಿಗಳು ಪಾತ್ರರಾಗಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದAತೆ ಈ ಕೋವಿಡ್ ಸಂದರ್ಭದಲ್ಲಿ ನಾವು ನೋಡಿಕೊಳ್ಳಬೇಕಾಗಿದ್ದು ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂ,ಬಿ,ಬಿ,ಎಸ್ ವೈದ್ಯರ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿದ್ದು ಮುಂದೆ ಹಾಗಾಗಬಾರದು ಅವರು ತಮ್ಮ ಜೀವನವನ್ನೆ ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುತ್ತಾರೆ ಹಾಗಾಗಿ ಇನ್ನೂ ಮುಂದೆ ಇಂತಹ ಯಾವುದೇ ಸಣ್ಣ ದೂರ ಬರಬಾರದು ಬಂದಿದೆ ತಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳಬೇಕಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ 15 ಲಕ್ಷ್ಯ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡುಗಳು ವಿತರಣೆಯಾಗಬೇಕಿದ್ದು ಅದರ ವಿತರಣೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯಿಂದ ರೈತರಿಗೆ ಸರಿಯಾದ ಸೌಲಭ್ಯಗಳನ್ನು ಸಿಗಬೇಕಾದರೆ ಸಹಕಾರ ಸಂಘಗಳಿಗೆ ಬೀಜ ಗೊಬ್ಬರವನ್ನು ನೀಡಬೇಕು ಅದನ್ನು ಬಿಟ್ಟು ನೀವು ಖಾಸಗಿಯವರಿಗೆ ನೀಡಿದರೆ ಹೇಗೆ ಮತ್ತು ಜಿಲ್ಲೆಗೆ ಬೇಕಾಗುವ ಗೊಬ್ಬರ ಮತ್ತು ಅದರ ಸ್ಟಾಕ್ ಮಾಹಿತಿ ತಮಲ್ಲಿ ಸರಿಯಾಗಿ ಇರಬೇಕು ಹೆಚ್ಚಿನ ಗೊಬ್ಬರ ಬೇಡಿಕೆ ಏನಾದರೂ ಬೇಕಾದರೆ ರೈತರ ಅಗತ್ಯಕ್ಕೆ ತಕ್ಕಂತೆ ಅವರಿಗೆ ಒದಗಿಸುವ ಕೆಲಸ ಮಾಡಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೆಶಕರಿಗೆ ಸೂಚಿಸಿದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ಎಷ್ಟು ಆಕ್ಸಿಜನ್ ಪ್ಲಾಂಟಗಳು ಜಿಲ್ಲೆಯ ಆಸ್ಪತ್ರೆಗಳಲ್ಲಿವೆ ಮತ್ತು ಅವುಗಳ ಕಾರ್ಯನಿರ್ವಹಣೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ಪ್ರಾಣಿಗಳು ಹಾಳುಮಾಡಿದ್ದು ಅವುಗಳಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ ಮತ್ತು ಚಿಕ್ಕು ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಪರಿಹಾರ ನೀಡುವದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ಪ್ರಶ್ನಿಸಿದಾಗ ಇದಕ್ಕೆ ಪರಿಹಾರವನ್ನು ಅರಣ್ಯ ಇಲಾಖೆಯವರು ನೀಡುತ್ತಾರೆ ಎಂದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಈ ವರೆಗೆ ಜಿಲ್ಲೆಯಲ್ಲಿ 7 ಲಕ್ಷ್ಯ ಪರಿಹಾರ ನೀಡಲಾಗಿದ್ದು ಚಿಕ್ಕು ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಪರಿಹಾರ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಉಪ ನಿರ್ದೆಶಕರಾದ ಡಾ, ಹೆಚ್, ನಾಗರಾಜ ಅವರು ಸಭೆಗೆ ಮಾಹಿತಿ ನೀಡಿ ಆತ್ಮ ನಿರ್ಭರ ಯೋಜನೆ ಅಡಿ ಜಿಲ್ಲೆಯಲ್ಲಿ 32 ಜನ ಫಲಾನುಭವಿಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾಂಸ ಹಾಗೂ ಮಾಂಸದ ಉತ್ಪನ್ನಗಳು ಕುರಿತು ಅವರಿಗೆ ತರಬೇತಿ ಆಯ್ಕೆಮಾಡಿದ್ದರು ಅವರಿಗೆ ಯಾವುದೇ ಸಬ್ಸಿಡಿ ಸಿಗದಿರುವುದರಿಂದ ಅವರು ಮುಂದೆ ಬರುತ್ತಿಲ್ಲ ಮತ್ತು ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಡೆತ್ ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಎಷ್ಟು ಪರಿಹಾರ ನೀಡಲಾಗಿದೆ ಎಂದು ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಪ್ರಶ್ನಿಸಿದಾಗ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 527 ಜನರು ಕೋವಿಡ್ ನಿಂದ ಮೃತಪಟ್ಟಿದ್ದು 379 ಕ್ಕೆ ಪರಿಹಾರ ನೀಡಲಾಗಿದ್ದು 63 ಬಾಕಿ ಇವೆ ಇದರ ಹೊರತಾಗಿ ಆಯಾ ತಾಲ್ಲೂಕಿನ ತಹಶೀಲ್ದಾರರು ಪರಿಹಾರ ವಿತರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಿಂದ ರಾಯಚೂರು ಜಿಲ್ಲೆ ದಾಟಿ, ಅಕ್ರ ಮದ್ಯ ಸಾಗಾಣಿಕೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಇನ್ನೂ ನಡೆಯುತ್ತಾನೆ ಇದೆ. ಅಲ್ಲದೇ ಅಬಕಾರಿ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ. ಇದರ ಬಗ್ಗೆ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ತಡೆಗೆ ಸಂಬAಧಿಸಿದAತೆ ಗೋಡಾಮುಗಳಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳು ಸುರಕ್ಷಿತವಾಗಿ ಆಗಬೇಕು. ಈ ನಿಟ್ಟಿನಲ್ಲಿ ಟೆಂಡರ್ ಕರೆಯುವಾಗ ವಾಹನಗಳಿಗೆ ಕಡ್ಡಾಯ ಜಿಪಿಎಫ್ ಅಳವಡಿಕೆ, ವೇಬ್ರೀಡ್ಜ್ ಗಳ ನಿಯಮ ಹಾಗೂ ಅಗತ್ಯ ಷರತ್ತುಗಳನ್ನು ತನ್ನಿ ಮತ್ತು ಅಕ್ರಮ ಪಡಿತರ ಸಾಗಾಣಿಕೆ ಮಾಡುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವುದರ ಜೊತೆಗೆ ಪ್ರಕಟಣೆ ಹೊರಡಿಸಿ, ಸಾರ್ವಜನಿಕರಿಗೆ ಅನುಕೂಲಮಾಡಿಕೊಡಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದ ರಸ್ತೆ ಸೇತುವೆ ಹಾನಿಯಾಗಿದ್ದು, ಇದರ ದುರಸ್ತಿಗೆ ಸುಮಾರು ರೂ. 4 ಕೋಟಿ ಬಿಡುಗಡೆಯಾಗಿದ್ದು, ಶೀರ್ಘ ಕಾಮಗಾರಿ ಪ್ರಾರಂಭಿಸಬೇಕು. ಕೊಪ್ಪಳ ಹಾಗೂ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕೆರೆ ತುಂಬಿಸುವ ಯೋಜನೆಯಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಯನ್ನು ಅದೆಷ್ಟು ಬೇಗ ಮುಗಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಟ್ರಿಕ್ ನಂತರ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸಮಸ್ಯೆಗಳ ಕುರಿತು ದೂರು ಬರುತ್ತಿವೆ. ಬಾಡಿಗೆ ರೂಪದಲ್ಲಿ ಕಟ್ಟಡ ಪಡೆಯಲು ನಿಮಗೆ ಅವಕಾಶವಿದ್ದು, ಎಲ್ಲಿ ವಿದ್ಯಾರ್ಥಿ ನಿಲಯಗಳ ಬೇಡಿಕೆ ಇದೆಯೋ ಅಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯನ್ನು ಎಂಟು ದಿನಗಳೊಳಗೆ ಮಾಡಿಕೊಡಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದಿಂದ ಹೊಸ ಬೆಳಕು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಹೆಚ್ಚು ಜನರಿಗೆ ಮಾಹಿತಿಯೇ ಇಲ್ಲ. ಆದ್ದರಿಂದ ವಿದ್ಯುತ್ ಇಲಾಖೆಯವರು ಕೂಡಲೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಯೋಜನೆಯ ಸದುಪಯೋಗವನ್ನು ಅರ್ಹರಿಗೆ ತಲುಪಿಸಬೆಕು ಎಂದು ಜೆಸಕಾಂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ನಗರದ 7ನೇ ವಾರ್ಡಿನ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಬಡ ಕುಟುಂಬದವರ ಮನೆಗಳಿಗೆ ಜೆಸ್ಕಾಂ ನಿರ್ಲಕ್ಷö್ಯದಿಂದ ವಾರ್ಡಿನಲ್ಲಿ ಸುಮಾರು 50 ಲಕ್ಷದವರೆಗೆ ವಿದ್ಯುತ್ ಬಿಲ್ ಬಂದಿದೆ. ಬಿ.ಪಿ.ಎಲ್ ಪಡಿತರದಾರರು ಇಷ್ಟೋಂದು ಮೊತ್ತವನ್ನು ಪಾವತಿಸುವುದು ಹೇಗೆ ಸಾಧ್ಯ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು.
ಜೆಸ್ಕಾಂ ಇಲಾಖೆ ಅಧಿಕಾರಿಗಳು ಮಾತನಾಡಿ, ಈ ಸಮಸ್ಯೆಯು ಮೀಟರ್ ರೀಡಿಂಗ್ ನಿಂದಾಗಿದೆ. ಈ ಸಮಸ್ಯೆ ಒಂದು ವರ್ಷದ ಹಿಂದಿನದ್ದಾಗಿದೆ. ಗ್ರಾಹಕರಿಗೆ ಕಂತಿನ ಮೇಲೆ ಬಿಲ್ ಪಾವತಿಸಲು ಅವಕಾಶ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಚಿವರು ಮಾತನಾಡಿ, ಸಮಸ್ಯೆ ಇಲಾಖೆಯ ಅಧಿಕಾರಿಗಳದ್ದೋ ಅಥವಾ ಮೀಟರ್ ರೀಡಿಂಗ್‌ದೋ ಗೊತ್ತಿಲ್ಲ. ಸಾರ್ವಜನಿಕರು ಇಷ್ಟೋಂದು ಮೊತ್ತ ಪಾವತಿಸುವುದು ಹೇಗೆ ಸಾಧ್ಯ. ಈ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆದು, ಈ ಸಮಸ್ಯೆ ಮೀಟರ್ ರೀಡಿಂಗ್‌ನಿAದಾಗಿದೆ ಬದಲಾಗಿ ಗ್ರಾಹಕರ ಯಾವುದೇ ತಪ್ಪುಗಳು ಇರುವುದಿಲ್ಲ ಎಂದು ತಿಳಿಸುವ ವರದಿ ಸಲ್ಲಿಸಿ. ಅವಶ್ಯವಿದ್ದಲ್ಲಿ ನಾನು ನಿಮ್ಮ ಕೇಂದ್ರ ಕಚೇರಿಗೆ ಮಾತನಾಡುತ್ತೇನೆ ಎಂದರು.
ಅಕ್ರಮ ಮರುಳು ಸಾಗಾಣಿಕೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಡಿಎಂಎಫ್‌ನ ಅನುದಾನವನ್ನು ಬಳಕೆ ಮಾಡಿಕೊಂಡು, ತೀವ್ರ ನೀಗಾವಹಿಸಲು ತನಿಕಾ ಹಾಗೂ ಅಗತ್ಯ ತಂಡಗಳನ್ನು ರಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ಕೊರತೆ ಬಗ್ಗೆಯೂ ಸಹ ದೂರುಗಳ ಬರುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯವರು ಅವಶ್ಯವಿರುವ ಕಡೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರುಗಳಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಬಸವರಾಜ ಧಢೇಸೂಗೂರು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಕುಮಾರ್, ಅಪಾರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us: