ದೊಡ್ಡವರಾದ ಮೇಲೆ ಅಲ್ಪ ಮಾನವರಾಗಿದ್ದೇವೆ-ಡಾ.ಶಿವಕುಮಾರ್ ಮಾಲಿಪಾಟೀಲ್

ಸಣ್ಣವರಿದ್ದಾಗ ಜೇಬಿನಲ್ಲಿ ಚಿಲ್ಲರೆ ಕಾಸು ಇರುತ್ತಿತ್ತು
ದೊಡ್ಡವರಾದ ಮೇಲೆ ಚಿಲ್ಲರೆ ಯೋಚನೆಗಳು ಬರುತ್ತಿವೆ

ಸಣ್ಣವರಿದ್ದಾಗ ಬಟ್ಟೆಗಳು ಮಸಿಯಾಗಿದ್ದವು
ಮನಸ್ಸು ಶುಭ್ರವಾಗಿತ್ತು
ದೊಡ್ಡವರಾದ ಮೇಲೆ ಮನಸ್ಸು ಮಸಿಯಾಗಿದೆ

ಸಣ್ಣವರಿದ್ದಾಗ ಸುಮ್ಮನೆ ನಗುತ್ತಿದ್ದೆವು
ದೊಡ್ಡವರಾದ ಮೇಲೆ ಹಣ ಕೊಟ್ಟು ನಗಲು ಆಗುತ್ತಿಲ್ಲ

ಸಣ್ಣವರಿದ್ದಾಗ ಮೈ ಮೇಲೆ ಗಾಯ ಆಗುತ್ತಿದ್ದವು
ದೊಡ್ಡವರಾದ ಮೇಲೆ ಮನಸ್ಸಿನ ಮೇಲೆ ಗಾಯವಾಗುತ್ತಿದೆ

ಸಣ್ಣವರಿದ್ದಾಗ ಶಾಲೆ ಪಾಟಿ ಚೀಲ ಬಾರ ಇರುತ್ತಿತ್ತು
ದೊಡ್ಡವರಾದ ಮೇಲೆ ಚಿಂತೆಗಳು ,ಯೋಚನೆಗಳು ಭಾರವಾಗಿವೆ

ಸಣ್ಣವರಿದ್ದಾಗ ಮಳೆಯಲ್ಲಿ ನೆನೆಯುತ್ತಿದ್ದೆವು
ದೊಡ್ಡವರಾದ ಮೇಲೆ ಬೆವರು, ಕಣ್ಣೀರಿನಲ್ಲಿ ನೆನೆಯುತ್ತೆವೆ

ಸಣ್ಣವರಿದ್ದಾಗ ಕೆರೆ ಬಾವಿಯಲ್ಲಿ ಮೋಜು ಮಸ್ತಿ ಈಜಾಟ
ದೊಡ್ಡವರಾದ ಮೇಲೆ ಜೀವನ ಸಾಗರದಲ್ಲಿ ಗೋಳಾಟ

ಸಣ್ಣವರಿದ್ದಾಗ ಗುಣ ನೋಡಿ ಗೆಳೆತನ ಮಾಡುತ್ತಿದ್ದೇವು
ದೊಡ್ಡವರಾದ ಮೇಲೆ ಹಣ,ಲೆವೆಲ್ ನೋಡಿ ಗೆಳೆತನ ಮಾಡುತ್ತೆವೆ

ಸಣ್ಣವರಿದ್ದಾಗ ತೊದಲು ನುಡಿಗಳು ಜನರಿಗೆ ಅರ್ಥ ಆಗುತ್ತಿದ್ದವು
ದೊಡ್ಡವರಾದ ಮೇಲೆ ಹೇಗೆ ಮಾತನಾಡಿದರೂ ತಪ್ಪಾಗಿ ಅರ್ಥೈಸಲಾಗುತ್ತದೆ

ಸಣ್ಣವರಿದ್ದಾಗ ಗಣಿತ ವಿಜ್ಞಾನ ತಿಳಿಯಲಿಲ್ಲ
ದೊಡ್ಡವರಾದ ಮೇಲೆ ಸಮಾಜ ತಿಳಿತಾ ಇಲ್ಲ

ಸಣ್ಣವರಿದ್ದಾಗ ಎಲ್ಲರ ಜೊತೆಗೆ ಬೆರೆಯುತ್ತಿದ್ದೆವು
ದೊಡ್ಡವರಾದ ಮೇಲೆ ಜಾತಿ ,ಧರ್ಮ
ನೋಡಿ ಬೆರೆಯುತ್ತೆವೆ

ಸಣ್ಣವರಿದ್ದಾಗ ಸ್ನೇಹ ಸಂಬಂಧಗಳಿಗೆ ಬೆಲೆ ಇತ್ತು
ದೊಡ್ಡವರಾದ ಮೇಲೆ ಆಸ್ತಿ ಅಂತಸ್ತಿಗೆ ಮಾತ್ರ ಬೆಲೆ

ಸಣ್ಣವರಿದ್ದಾಗ ವಿಶ್ವ ಮಾನವರಾಗಿದ್ದೆವು
ದೊಡ್ಡವರಾದ ಮೇಲೆ ಅಲ್ಪ ಮಾನವರಾಗಿದ್ದೆವೆ

ಡಾ.ಶಿವಕುಮಾರ್ ಮಾಲಿಪಾಟೀಲ ದಂತ ವೈದ್ಯರು ಗಂಗಾವತಿ
9448302775

Please follow and like us: