ಸತತ 4ನೇ ಬಾರಿ ಗೆಲುವಿನ ಕುದುರೆಯೇರಿದ ಹೊನ್ನೂರಸಾಬ್ ಬೈರಾಪೂರ

ಭಾಗ್ಯನಗರ : ಭಾಗ್ಯನಗರ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಸತತ ೪ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ ಹೊನ್ನೂರಸಾಬ್ ಬೈರಾಪೂರ‌. ಇಡೀ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟ ದಾಖಲೆಯಾಗಿದೆ.

ಎರಡು ಸಲ ಗ್ರಾಮ ಪಂಚಾಯತಿ ಸದಸ್ಯರಾಗಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಹೊನ್ನೂರಸಾಬ್ ಬೈರಾಪೂರ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ದಾಖಲೆ ಮಾಡಿದ್ದರು. ಈ ಸಲ ಮತ್ರೊಮ್ಮೆ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸತತ ೪ನೇ ಬಾರಿ ಆಯ್ಕೆಯಾದ ದಾಖಲೆ ಮಾಡಿದ್ದಾರೆ. ಹೊನ್ನೂರಸಾಬ್ ಬೈರಾಪೂರರ ಈ ದಾಖಲೆ ಗೆಲುವಿಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು, ಅದ್ಯಕ್ಷರು ಹಾಗೂ ಪಟ್ಟಣದ ನಾಗರೀಕರು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

Please follow and like us: