ಕೊಪ್ಪಳ : ಕೊಪ್ಪಳ ವಿಧಾನಸಭಾ ವ್ಯಾಪ್ತಿಯ ಭಾಗ್ಯ ನಗರದ ಪಟ್ಟಣ ಪಂಚಾಯತ್ ಫಲಿತಾಂಶ ಅತಂತ್ರವಾಗಿದ್ದು ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳರ ತಂತ್ರ ಕೈಕೊಟ್ಟಿದ್ದು ಬಹುಮತ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ೯ ಕಾಂಗ್ರೆಸ್ ೮ ಮತ್ತು ೨ ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿ ಎಡವಿತ್ತು ಎನ್ನುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಣತಂತ್ರ ಎಣೆದ ಸಂಸದ ಕರಡಿ ಸಂಗಣ್ಣ ನೇತೃತ್ವದ ತಂಡ ಗೆಲುವಿಗಾಗಿ ಸಾಕಷ್ಟು ಶ್ರಮಿಸಿತ್ತು.
ಅವಿರೋಧವಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ೧೪-೧೫ ಸ್ಥಾನಗಳನ್ನು ಪಡೆಯುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ನ ಅತಿಯಾದ ಆತ್ಮವಿಶ್ವಾಸವೇ ಹಿನ್ನಡೆಗೆ ಕಾರಣ ಇಲ್ಲವಾದಲ್ಲಿ ಸರಳ ಬಹುಮತ ಪಡೆಯುತ್ತಿತ್ತು ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ.
ಇನ್ನೊಂದೆಡೆ ಸಿ.ವಿ.ಚಂದ್ರಶೇಖರ್, ಅಮರೇಶ ಕರಡಿ, ರಾಘವೇಂದ್ರ ಪಾನಘಂಟಿ ನೇತೃತ್ವದಲ್ಲಿ ಬಿಜೆಪಿಯ ಸಂಘಟನೆ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಕಳೆದ ಸಲ ೧೦ ಸ್ಥಾನ ಪಡೆದಿದ್ದ ಬಿಜೆಪಿ ೯ಕ್ಕೆ ಇಳಿದಿದೆ. ಕಾಂಗ್ರೆಸ್ ಕಳೆದ ಸಲದಂತೆ ೮ ಸ್ಥಾನಗಳನ್ನು ಪಡೆದುಕೊಂಡಿದೆ.
ಕಾಂಗ್ರೆಸ್ನ ಸೋಲಿಗೆ ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಹ ಕಾರಣ ಎಂದು ಹೇಳಲಾಗುತ್ತಿದೆ ಒಟ್ಟಾರೆಯಾಗಿ ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕವಾಗಿದ್ದು ಅವರು ಎತ್ತ ವಾಲುತ್ತಾರೆ ಎನ್ನುವುದು ಕಾದುನೋಡಬೇಕಿದೆ
ಗೆದ್ದ ಬಿಜೆಪಿಯ ಅಭ್ಯರ್ಥಿಗಳು
ಭಾಗ್ಯನಗರ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ,
ವಾರ್ಡ ಸಂಖ್ಯೆ
1-ಕೊಟೇಶ್ವರಾವ್ -ಸೋಲು
2-ನೀಲಕಂಠ ಮೈಲಿ-ಸೋಲು
3-ವಾಸು ಮೇಘರಾಜ್ -ಗೆಲುವು
5-ಮಂಜವ್ವ ಮ್ಯಾಗಳಮನಿ-ಗೆಲುವು
6-ಲಕ್ಷ್ಮಣ ಚಳಮರದ- ಸೋಲು
7- ಪರುಶರಾಮ ನಾಯಕ ಗೆಲುವು
8-ರಾಜೇಶ ತಟ್ಟಿ-ಸೋಲು
9-ಗೌರಮ್ಮ ಉಂಕಿ-ಗೆಲುವು
10-ಶ್ರೀಧರ ಹುರಕಡ್ಲಿ-ಸೋಲು
11-ಸುರೇಶ ಡಾಣಿ-ಸೋಲು
12-ಜಯಲಕ್ಷ್ಮಿ ಶೆಡ್ಮಿ-ಗೆಲುವು
13-ಪರುಷರಾಮ ಹಾದಿಮನಿ-ಸೋಲು
15- ಸರಸ್ವತಿ ಈರಣ್ಣ-ಸೋಲು
16-ಮಂಜುಳಾ ಶ್ಯಾವಿ-ಗೆಲುವು
17-ರೋಷನ ಅಲಿ-ಗೆಲುವು
18-ಜಗದೀಶ ಮಾಲಗಿತ್ತಿ-ಗೆಲುವು
19-ಲಲಿತಾ ಡಂಬಳ-ಗೆಲುವು
ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು
1 ಶಿವರಾಮ ಮ್ಯಾಗಳಮನಿ
೨ ಹೊನ್ನೂರಸಾಬ ಭೈರಾಪೂರ
೪ ಸರಸ್ವತಿ ಕೃಷ್ಣ ಇಟಂಗಿ
೮ ರಮೇಶ ಹ್ಯಾಟಿ
13 ತುಕಾರಾಮಪ್ಪ ಗಡಾದ
ಗವಿಸಿದ್ದಪ್ಪ ಮಗಿಮಾವಿನಹಳ್ಳಿ
ಕಸ್ತೂರಿ ಜಿ ಅಂಜಿನಮನಿ
ಪಾಲಾಕ್ಷಮ್ಮ ದಾನಪ್ಪ ಕವಲೂರ
ಗೆಲುವು ಬಿಜೆಪಿ= 09
ಕಾಂಗ್ರೆಸ್=08
ಪಕ್ಷೇತರ= 02

ಪಕ್ಷೇತರರು
೬ ಮೋಹನ್ ಅರಕಲ್



ಸ್ವಾಮಿ