ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರ್ ಗೆ ಮುಖಭಂಗ : ಕಾರಟಗಿ ಜೆಡಿಎಸ್ ನಿರ್ಣಾಯಕ

ಕನಕಗಿರಿ : ಶಾಸಕ ಬಸವರಾಜ್ ದಡೆಸೂಗೂರಗೆ ಸ್ವಕ್ಷೇತ್ರದಲ್ಲಿಯೇ ಸೋಲು ಕಾಣುವಂತಾಗಿದ್ದು ಕಾಂಗ್ರೆಸ್ ಮುನ್ನಡೆಯಿಂದ ತೀವ್ರ ಮುಖಭಂಗವಾಗಿದೆ.

ಕನಕಗಿರಿಯ ೧೭ ವಾರ್ಡಗಳ ಪೈಕಿ ೧೨ ರಲ್ಲಿ ಕಾಂಗ್ರೆಸ್ ಜಯಬೇರಿ ಸಾಧಿಸಿದ್ದು ೫ರಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಕಾರಟಗಿಯಲ್ಲಿ ಕಾಂಗ್ರೆಸ್ ೧೧ ಮತ್ತು ಬಿಜೆಪಿ ೧೧ ವಾರ್ಡಗಳಲ್ಲಿ ಗೆಲುವು ಸಾಧಿಸಿದ್ದು ಅಚ್ಚರಿ ಎನ್ನುವಂತೆ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದು ನಿರ್ಣಾಯಕವಾಗಿದ್ದಾರೆ.

ನಾಮಪತ್ರ ಸಲ್ಲಿಸುವ, ಪರಶೀಲನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಗಲಾಟೆಗೆ ಕಾರಣವಾಗಿತ್ತು. ಈ ಚುನಾವಣೆ ಮುಂದಿನ ವಿಧಾನಸಭಾ ಚುಮಾವಣೆ ದಿಕ್ಸೂಚಿ ಎಂದೇ ಹೇಳಲಾಗಿತ್ತು. ಇದರಲ್ಲಿ ಸದ್ಯಕ್ಕೆ ಡಿಸಿಸಿ ಅದ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದ್ದಾರೆ.

ಶಾಸಕ ಬಸವರಾಜ್ ದಡೆಸೂಗೂರ್ ಸೋಲಿನ ಕಹಿ ಕಾಣುವಂತಾಗಿದೆ.

Please follow and like us: