ಕುಕನೂರಿನಲ್ಲಿ ಹಾಲಪ್ಪ ಆಚಾರ್ ಗೆ ಮುಖಭಂಗ

ಕುಕನೂರ : ತೀವ್ರ ಜಿದ್ದಾಜಿಧ್ದಿಗೆ ಕಾರಣವಾಗಿದ್ದ ಕುಕನೂರ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಜಯದ ನಗು ಬೀರಿದರೆ ಸ್ವಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ ಮುಖಭಂಗ ಅನುಭವಿಸಿದ್ದಾರೆ. ಕೊನೆಯ ಕ್ಷಣದ ತನಕ ಬಿಜೆಪಿಯ ಗೆಲುವು ಖಚಿತ ಎಂದು ಹೇಳಲಾಗುತ್ತಿತ್ತು.

ಆದರೆ ಬಿಜೆಪಿಯ ಘಟಾನುಘಟಿ ನಾಯಕರು ಸೋಲನ್ನಭವಿಸಿದ್ದಾರೆ. ಶಂಭೂ ಜೋಳದ ಸೇರಿದಂತೆ ಇತರರ ಸೋಲು ಕುಕನೂರ ಪಟ್ಟಣ ಪಂಚಾಯತ್ ಬಿಜೆಪಿ ಕೈ ತಪ್ಪಲು ಕಾರಣವಾಗಿದೆ.

ಚುನಾವಣೆಯ ಆರಂಭದೊಂದಿಗೆ ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಕ್ಷೇತ್ರದಲ್ಲಿ ಸೀರಿಯಸ್ ತೊಡಗಿಸಿಕೊಂಡಿದ್ದು ಗ್ರೌಂಡ ವರ್ಕ ಮಾಡಿದ್ದು ಕಾಂಗ್ರೆಸ್ ಗೆಲುವು ಸುಲಭವಾಗಿಸಿತು. ಸ್ವಲ್ಪ ನಿರ್ಲಕ್ಷ್ಯ ತೋರಿದ್ದರೂ ಬಿಜೆಪಿ ಮೇಲುಗೈ ಸಾಧಿಸುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ‌

Please follow and like us: