ಅಸ್ಪೃಶ್ಯತೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ : ಡಾ. ಅರವಿಂದ ಲಂಬು

ಅರಸನಕೇರಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಅರಿವು ಕಾರ್ಯಕ್ರಮ


Kannadanet : ಅಸ್ಪೃಶ್ಯತೆ ಆಚರಣೆಯು ತುಂಬಾ ಅಮಾನವೀತವಾಗಿದ್ದು, ಇದರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಎಂದು ಕೊಪ್ಪಳ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್-1) ಡಾ. ಅರವಿಂದ ಲಂಬು ಅವರು ಹೇಳಿದರು.
ಕೊಪ್ಪಳ ತಾಲ್ಲೂಕ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ (ಡಿ.24) ಅರಸನಕೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಸ್ಪೃಶ್ಯತಾ ನಿವಾರಣಾ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ಶ್ರೇಣಿಕೃತ ವಿಂಗಡಣೆಯAತೆ ವಿಭಾಗಿಸಲಾಗಿದ್ದು, ಕೆಳ ಜಾತಿಯವರಿಗೆ ಅತ್ಯಂತ ಹೀನಾಯ ದೃಷ್ಠಿಯಿಂದ ನೋಡಿಕೊಂಡು ಅಸ್ಪೃಶ್ಯತೆ ಆಚರಣೆಯೂ ಜಾರಿಯಲ್ಲಿತ್ತು. ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮ ದೇಶ ಬ್ರೀಟಿಷರ ಕೈಯಲ್ಲಿ ಇದ್ದು, ಗುಲಾಮರಂತೆ ನಮ್ಮ ಭಾರತೀಯರನ್ನು ಬಂದಿಯAತೆ ನಡೆದುಕೊಂಡ ಬಂದು ಸಾಕಷ್ಟು ಹಿಂಸೆಗೆ ಒಳಪಡಿಸುತ್ತಿದ್ದರು. ಈ ದೇಶವನ್ನು ಬ್ರೀಟಿಷರ ಕಪಿಮುಷ್ಠಿಯಿಂದ ಬಿಡಿಸಲು ಅನೇಕ ಮಹಾಪುರುಷರು ಹೋರಾಟ ಮಾಡಿದರು. ಅಂತವರಲ್ಲಿ ಮಹಾತ್ಮ ಗಾಂಧೀಜಿ, ವಲ್ಲಭಾಯಿ ಪಟೇಲ್, ರಾಜೇಂದ್ರಪ್ರಸಾದ, ಇನ್ನೂ ಅನೇಕ ಮಹನೀಯರ ಹೋರಾಟರದ ಪರವಾಗಿ ಸಾತಂತ್ರ‍್ಯ ಸಿಕ್ಕಿತು. ಆದರೆ ಆಂತರೀಕವಾಗಿ ಸನಾತನ ಕಾಲದಿಂದಲೂ ನಡೆದುಕೊಂಡು ಆಚರಿಸುತ್ತಾ ಬಂದಿರುವ ಈ ಅನಿಷ್ಠ ಪದ್ದತಿಯಿಂದ ಅಸ್ಪೃಶ್ಯತಾ ಆಚರಣೆಯಲ್ಲಿದ್ದು, ಸಹೋದರತೆ, ಬಾತೃತ್ವಕ್ಕೆ ಕುಂದು ತರುವಂತಿತ್ತು. ಇಂತಹ ಸಂದರ್ಭದಲ್ಲಿ ಭಾರತದ ಸಂವಿಧಾನವನ್ನು ಬರೆದುಕೊಡಿ ಎಂದು ಬ್ರೀಟಿಷರ ಕಡೆ ಹೋದಾಗ ಅವರು ನಿಮ್ಮ ದೇಶದಲ್ಲಿ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆ ಅವರ ಹತ್ತಿರ ಬರೆಸಿ ಎಂದು ಹೇಳಿ, ಡಾ. ಬಿ.ಆರ್ ಅಂಬೇಡ್ಕರ್ ರವರ ಹೆಸರು ಸೂಚಿಸಿದರು. ತದನಂತರ ದಲಿತರ ಧಮನಿತರ ರಕ್ಷಣೆಗೆ ಕಾನೂನು ರಚಿತವಾಯಿತು ಎಂದರು.
ಸನಾತನ ಕಾಲದಿಂದ ಅನ್ಯಾಯಕ್ಕೊಳಗಾದ ದಲಿತರು ಮಹಿಳೆಯರು ಮಕ್ಕಳು ಇವರಿಗೆ ಭಾರತದ ಸಂವಿಧಾನದಲ್ಲಿ ರಕ್ಷಾ ಕವಚದಂತೆ ಕಾಯ್ದೆಗಳನ್ನು ಬರೆದಿಡಲಾಯಿತು. ಆದಾಗ್ಯೂ 21ನೇ ಶತಮಾನದಲ್ಲಿ ಇನ್ನೂ ಜಾರಿಯಲ್ಲಿದ್ದ ಅನಿಷ್ಟ ಪದ್ದತಿಯಾದ ಅಸ್ಪೃಶ್ಯತೆ ಆಚರಣೆಯು ತುಂಬಾ ಅಮಾನವೀತ ಅದನ್ನು ಹೋಗಲಾಡಿಸಲು ದೌರ್ಜನ್ಯ ಕಾಯ್ದೆ ಜಾರಿಯಲ್ಲಿ ತಂದರು ಈ ಕಾಯ್ದೆಯು ಅಂತಹ ಆಚರಣೆಗೆ ಕುಮ್ಮಕ್ಕು ನೀಡುವವರಿಗೆ ತುಂಬಾ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ನಿಮ್ಮ ಗ್ರಾಮದಲ್ಲಿ ಎಲ್ಲರೂ ಅನ್ಯೂನ್ಯವಾಗಿ ಸಹೋದರತ್ವ ಮೆರೆದು ಗ್ರಾಮವನ್ನು ಅಸ್ಪೃಶ್ಯತಾ ಮುಕ್ತಗ್ರಾಮವನ್ನಾಗಿ ಮಾಡಲು ಎಲ್ಲರೂ ನನಗೆ ಮಾತುಕೊಡಿ ಎಂದು ಪ್ರಮಾಣ ಪಡೆದುಕೊಂಡರು.
ವಣಬಳ್ಳಾರಿ ಗ್ರಾಮ ಪಂಚಾಯತ ಅಧ್ಯಕ್ಷ ಬಾಳಪ್ಪ ಹನುಮಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಅರಸನಕೇರಿ ಗ್ರಾಮದ ಎಲ್ಲಾ ಜನತೆಯ ಅಣ್ಣ-ತಮ್ಮಂದಿರAತೆ ಅನ್ಯೂನ್ಯವಾಗಿದ್ದು, ಬರುವ ದೇವಿಯ ಜಾತ್ರೆಯನ್ನು ಎಲ್ಲರೂ ಕೂಡಿ ವಿಜೃಂಭಣೆಯಿAದ ಮಾಡುತ್ತೇವೆ ಎಂದು ಹೇಳಿದರು.
ನ್ಯಾಯವಾದಿ ಮಾರುತಿ ಎಂ. ಚಾಮಲಾಪೂರ ರವರು ಮಾತನಾಡಿ, ಮೌರ್ಯ ಸಾಮ್ರಾಜ್ಯವು ಭಾರತದ ಅತ್ಯುನ್ನತ ರಾಜ ಮನೆತನವಾಗಿತ್ತು. ಅಶೋಕನ ಕಾಲದಲ್ಲಿ ಭಾರತ ಬೌದ್ಧಮಯವಾಗಿತ್ತು. ವಿಶಾಲವಾಗಿ ಪಸರಿಸಿದ ಸಾಮ್ರಾಜವು ಕೊನೆಯ ಅರಸ ಬ್ರಹದೃತನನ್ನು ಅದೇ ರಾಜ್ಯದ ಸೇನೆಯ ಮುಖ್ಯಸ್ಥ ಪುಶ್ಯಮಿತ್ರ ಸುಂಗ ಮೋಸದಿಂದ ರಾಜನನ್ನು ಕೊಂದು ರಾಜಮನೆತನವನ್ನು ಅಕ್ರಮಿಸಿ ಹೊಸಕಾಯ್ದೆಯನ್ನು ಸೃಷ್ಟಿಸಿ ವೃತ್ತಿಯ ಆಧಾರದ ಮೇಲೆ ವಿಂಗಡಿಸಿ ದಲಿತರು ದಮನಿತರಿಗೆ ಶೋಷಣೆಗೆ ಒಳಪಡಿಸಿದನು. ಇದರಿಂದಾಗಿ ಶೋಷಣೆ ಒಳಪಟ್ಟ ಜನ ಇಂದಿಗೂ ಹೊರಗುಳಿದರು. ಇದರಿಂದಾಗಿ ಅಸ್ಪೃಶ್ಯತೆ ಆಚರಣೆಗೆ ಬಂದಿತು. ಬುದ್ದ, ಕನಕದಾಸ, ಬಸವ ಸೇರಿದಂತೆ ಅನೇಕರು ಜಾತಿಯತೆ ಅನ್ಯಾಯದ ವಿರುದ್ಧ ಹೋರಾಡಿ ಮಾನವೀಯತೆಗೆ ಆದ್ಯತೆ ನೀಡಲು ಹೇಳಿದರು.
ವಣಬಳ್ಳಾರಿ ಪಿ.ಡಿ.ಓ ಬೆಟದಪ್ಪ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಅನ್ಯೂನ್ಯವಾಗಿದ್ದು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಬರೆದ ಸಂವಿಧಾನದ ಪ್ರಕಾರ ಎಲ್ಲರೂ ಸಮಾನತೆ ಕಾಪಾಡಲು ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ಡನ್ ಗುಂಡಪ್ಪ, ವನಬಳ್ಳಾರಿ ಕಾರ್ಯದರ್ಶಿ ಶ್ರೀಶೈಲಪ್ಪ, ಕೂಕನಪಳ್ಳಿ ವಾರ್ಡನ್ ಕುಮಾರ ಸಂದಾನಿ ಮತ್ತು ಸದಸ್ಯ ನಾಗರಾಜ ಹಾಗೂ ಊರಿನ ಗುರುಹಿರಿಯರು ಉಪಸ್ಥಿತರಿದ್ದರು.

Please follow and like us: