ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೊಪ್ಪಳ ಜಿಲ್ಲೆ ಶೇ. 73.81% ಮತದಾನ

ಕನ್ನಡನೆಟ್ ನ್ಯೂಸ್

ಕೊಪ್ಪಳ : ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಸಂಬಂಧ ‌ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 73.81% ರಷ್ಟು ಮತದಾನವಾಗಿದೆ.
ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯತ್ಗೆ 71.75% ರಷ್ಟು ಮತದಾನವಾಗಿದ್ರೆ, 5563 ಪುರಷರು, 5346 ಮಹಿಳೆಯರು ಮತದಾನ ಮಾಡಿದ್ದಾರೆ.
ಕಾರಟಗಿ ಪುರಸಭೆಗೆ 73.80% ಮತದಾನವಾಗಿದ್ದು, 8721 ಪುರುಷರು, 8720 ಮಹಿಳೆಯರು ಮತ ಚಲಾಯಿಸಿದ್ದಾರೆ.

ಕನಕಗಿರಿ ಪಟ್ಟಣ ಪಂಚಾಯತ್ಗೆ ಶೇಕಡಾ 83.06% ರಷ್ಟು ಮತದಾನವಾಗಿದ್ದು, 5855 ಪುರುಷರು, 5679 ಮಹಿಳೆಯರು ಮತಚಲಾವಣೆ ಮಾಡಿದ್ದಾರೆ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಪಂಚಾಯತ್ಗೆ ಶೇಕಡಾ 80.69% ರಷ್ಟು ಮತದಾನವಾಗಿದ್ದು, 4426 ಪುರುಷರು, 4357 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದರು.

ಇನ್ನು ಕುಕನೂರು ಪಟ್ಟಣ ಪಂಚಾಯತ್ಗೆ ಶೇಖಡಾ 61.47 % ರಷ್ಟು ಮತದಾನವಾಗಿದೆ. ಈ ಪೈಕಿ 5581 ಪುರುಷರು, 4688 ಮಹಿಳೆಯರು ಮತದಾನ ಮಾಡಿದ್ದಾರೆ.
ಒಟ್ಟಾರೆ ಜಿಲ್ಲೆಯಾದ್ಯಂತ 94 ಮತಗಟ್ಟೆ ಸ್ಥಾಪಿಸಲಾಗಿತ್ತು. ಒಟ್ಟು 57316 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ..

Please follow and like us: