MLC ಶರಣಗೌಡ ಪಾಟೀಲ್ ಬಯ್ಯಾಪುರರಿಗೆ ಕಾಂಗ್ರೆಸ್ ನಾಯಕರ ಅಭಿನಂದನೆ

Kannadanet NEWS ಬೆಳಗಾವಿಯಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆಯ ಆರಂಭಕ್ಕೂ ರಾಯಚೂರು-ಕೊಪ್ಪಳ ವಿಧಾನಪರಿಷತ್ ಚುನಾವಣೆಯ ವಿಜೇತ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪುರನ್ನು ಅಭಿನಂದಿಸಿ ಭವಿಷ್ಯದ ಹಾದಿ ಸುಗಮವಾಗಿರಲಿ ಎಂದು ಅಭಿನಂದಿಸಿ ಶುಭ ಹಾರೈಸಿದರು.

. ಈ ವೇಳೆ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್,ಹಿರಿಯ ನಾಯಕರಾದ ಎಸ್‌.ಆರ್‌. ಪಾಟೀಲ್‌, ಬಿ ಕೆ ಹರಿಪ್ರಸಾದ್, ಬಿ ವಿ ನಾಯಕ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಡಿ ಎಸ್ ಹೂಲಗೇರಿ, ಬಸನಗೌಡ ದದ್ದಲ್, ಎ. ವಸಂತಕುಮಾರ,ರಜಾಕ್, ರಾಮಬಾಬು ಕುಷ್ಟಗಿ , ಹಾಗೂ ಚನ್ನಾರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ಪರಿಷತ್ತಿನ ನೂತನ ಸದಸ್ಯರಾದ ಸುನಿಲ್ ಗೌಡ ಪಾಟೀಲ್, ರವಿ, ಶರಣಗೌಡ ಬಯ್ಯಾಪುರ ಹಾಗೂ ಮಂಜುನಾಥ ಭಂಡಾರಿ ಅವರಿಗೆ ಅಭಿನಂದಿಸಲಾಯಿತು.

Please follow and like us: