ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ : 2023 ರ ವಿಧಾನಸಭಾ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದ್ದು , ಎಲ್ಲಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಸಿದ್ಧ ಮಾಡುತ್ತಿದೆ . ಈ ನಿಟ್ಟಿನಲ್ಲಿ ಡಿಸೆಂಬರ್ 4 , 5 , 11 ಮತ್ತು 12 ನೇ ತಾರೀಕಿನಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಆಕಾಂಕ್ಷಿಗಳ ಸಂದರ್ಶನವನ್ನು ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಮತ್ತು ಉಪಾಧ್ಯಕ್ಷರಾದ ಲಿಂಗೇಗೌಡ ಎಸ್ . ಎಚ್ . ಅವರುಗಳ ನೇತೃತ್ವದ ರಾಜ್ಯ ಸಮಿತಿಯ ಪದಾಧಿಕಾರಿಗಳು ನಡೆಸಿತು
ಒಟ್ಟು 123 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು , ಅವರಲ್ಲಿ 70 ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದರು .ಇವರಲ್ಲಿ ಪ್ರಾದೇಶಿಕ , ಪ್ರಾಮಾಣಿಕ ಮತ್ತು ಜನಪರ ರಾಜಕಾರಣದಲ್ಲಿ ದೃಢವಾದ ನಂಬಿಕೆ ಇಟ್ಟು , ಕೆ.ಆರ್.ಎಸ್ ಪಕ್ಷದ ತತ್ವ , ನೀತಿ ಮತ್ತು ನಿಯಮಗಳ ಅಡಿಯಲ್ಲಿ ಜನಪರವಾಗಿ ಕೆಲಸ ಮಾಡುವವರು ಮೊದಲ ಹಂತದ ಈ ಪ್ರಕ್ರಿಯೆಯಲ್ಲಿ 50 ಸಂಭಾವ್ಯ ಅಭ್ಯರ್ಥಿಗಳು ಆಯ್ಕೆಯಾಗಿದ್ದು , ಅದರಲ್ಲಿ ಪ್ರಥಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ . ಉಳಿದ ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರಕ್ರಿಯೆಯನ್ನು ಹಮ್ಮಿಕೊಂಡು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು . ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವವನ್ನು , ಅಧಿಕಾರ ವಿಕೇಂದ್ರೀಕರಣ ಮತ್ತು ಎಲ್ಲಾ ಹಂತಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಗಟ್ಟಿಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಿದ್ದು , ಪ್ರಸ್ತುತ ಪ್ರಕ್ರಿಯೆಯೂ ಕೂಡ ಇದರ ಭಾಗವಾಗಿದೆ . ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಪ್ರಾಥಮಿಕ ಚುನಾವಣೆಗಳ ಮೂಲಕ ಆಯ್ಕೆ ಮಾಡುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು .ಈ ಸಂಭಾವ್ಯ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕ , ಸ್ವಚ್ಛ , ಜನಪರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮತ್ತು ಚುನಾವಣೆಗಳಲ್ಲಿ ಹಣ , ಹೆಂಡ ಹಂಚದೆ , ಆಮಿಷಗಳನ್ನು ಒಡ್ಡದ ಸ್ಪರ್ಧಿಸಲು ತಯಾರಿ ಮಾಡಲಾಗುವುದು . ಜೊತೆಗೆ ಅವರುಗಳು ಈಗಿನಿಂದಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವರು . ಈ ನಿಟ್ಟಿನಲ್ಲಿ ಈಗಾಗಲೇ ಇಂದು ಪ್ರಕಟಿಸಿರುವ ಸಂಭಾವ್ಯ ಅಭ್ಯರ್ಥಿಗಳಿಗೆ ನಿರ್ದಿಷ್ಟ ಕೆಲಸಗಳನ್ನು ನೀಡಲಾಗಿದೆ . ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ , ಜನಪರ ಕೆಲಸದಲ್ಲಿ ಮತ್ತು ಪ್ರಚಾರದಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳುವರು ಎಂಬ ಆಧಾರದ ಮೇಲೆ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗುವುದು . ರಾಜ್ಯದಲ್ಲಿನ ಭ್ರಷ್ಟ ಜೆ.ಸಿ.ಬಿ ( ಜೆಡಿಎಸ್ , ಕಾಂಗ್ರೆಸ್ , ಬಿಜೆಪಿ ) ಪಕ್ಷಗಳು ಚುನಾವಣೆಗಳಲ್ಲಿ ಅಕ್ರಮಗಳನ್ನು ಎಸಗಿ , ಹಣ , ಹೆಂಡ ಹಂಚಿ , ಆಮಿಷಗಳನ್ನು ಒಡ್ಡಿ , ಜಾತಿ ಓಲೈಕೆ ರಾಜಕಾರಣ ಮತ್ತು ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ . ಇವರ ತಂತ್ರಕ್ಕೆ ಪ್ರತಿಯಾಗಿ , ಸ್ವಚ್ಚ , ಜನಪರ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ನಂಬಿಕೆಯಿಟ್ಟಿರುವ ನಾವು ನಮ್ಮದೇ ರೀತಿಯಲ್ಲಿ ಪ್ರತಿ ತಂತ್ರ ಮಾಡಬೇಕಿದೆ . ಇದಕ್ಕೆ ಬಹಳ ಪರಿಶ್ರಮದ ಅಗತ್ಯವಿದ್ದು , ಅದಕ್ಕಾಗಿ ನಾವು ಮುಂಚಿತವಾಗಿ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೇವೆ . ಜನಪರ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಪರಿಸರ ಸಂರಕ್ಷಿಸುವ ಕೆಲಸ ಇಂದಿನ ತುರ್ತಾಗಿದ್ದು , ಅದಕ್ಕಾಗಿ ಕೆ.ಆರ್.ಎಸ್ ಪಕ್ಷ ಸತತವಾಗಿ ಕೆಲಸ ಮಾಡುತ್ತಿದೆ ಹಾಗು ಹೋರಾಟ ಮಾಡುತ್ತಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆPlease follow and like us: