ಭಾಗ್ಯನಗರ ಪ.ಪಂಚಾಯತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ !

ಕನ್ನಡನೆಟ್ ನ್ಯೂಸ್ : ಭಾಗ್ಯನಗರ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಇಂದು ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿತ್ತು. ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ 14ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಧಾ ಕನಕಪ್ಪ ಚಲವಾದಿ ಇವರ ನಾಮಪತೃವನ್ನು ತಿರಸ್ಕೃರಿಸಲಾಗಿದೆ. ಇವರ ನಾಮಪತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಸ್ತೂರಿ ಚಿದಾನಂದಪ್ಪ ಹಂಚಿನಮನಿ ತಕರಾರು ಅರ್ಜಿ ಸಲ್ಲಿಸಿದ್ದರು.ಬಿಜೆಪಿ ಅಭ್ಯರ್ಥಿ ರಾಧಾ ಕನಕಪ್ಪ ಚಲವಾದಿ ಕೊಪ್ಪಳ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ ಮತ್ತು ಇವರು ಭಾಗ್ಯನಗರದ ಮತದಾರರು ಅಲ್ಲ ಎಂದು ತಕರಾರು ಸಲ್ಲಿಸಿದ್ದರು. ರಾಧಾ ಕನಕಪ್ಪ ಚಲವಾದಿ ಕೊಪ್ಪಳ ನಗರಸಭೆಯ ಮತದಾರರಾಗಿದ್ದು ನಗರಸಭೆಯ ಎಲ್ಲ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ವಾದಿಸಿದ್ದರು. ಕಾನೂನಿನ ಅಡಿಯಲ್ಲಿ ಒಂದೆ ಸಲಕ್ಕೆ ಎರಡು ಕಡೆ ಮತದಾರರು ಆಗಲು ಸಾಧ್ಯವಿಲ್ಲ ಹೀಗಾಗಿ ಇವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಚುನಾವಣಾಧಿಕಾರಿ ರವಿರಾಜ್ ದಿಕ್ಷಿತ್ ರಾಧಾ ಕನಕಪ್ಪ ಚಲವಾದಿಯವ ನಾಮಪತ್ರವನ್ನು ತಿರಸ್ಕೃತಗೊಳಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ನಾಮಪತ್ರವನ್ನು ತಿರಸ್ಕರಿಸಬಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ಹೀಗಾಗಿ ಚುನಾವಣೆ ನಡೆಯುವ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಮೇಲುಗೈ ಸಾಧಿಸಿದಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಪರ ವಕೀಲರಾದ ಐ.ಆರ್.ಬಿಸರಳ್ಳಿ ತಕರಾರು ಮಂಡಿಸಿದ್ದರು.