ವಿದ್ಯಾರ್ಥಿಗಳ ಸಮಸ್ಯೆಗಳು ಸಲಹೆ, ಮಾರ್ಗದರ್ಶನದಿಂದ ಪರಿಹಾರ

ಕೊಪ್ಪಳ: ವಿದ್ಯಾರ್ಥಿಗಳಲ್ಲಿ ಒದು, ಬರವಣಿಗೆ ಮತ್ತು ಜೀವನದ ಗುರಿ ಸಾಧನೆಗೆ ಅನೇಕ ಅಡ್ಡಿ ಆತಂಕಗಳು ಇರುವುದು ಸಹಜ. ತಮ್ಮಲ್ಲಿರುವ ಆತಂಕ, ಸಮಸ್ಯೆಗಳನ್ನು ಸೂಕ್ತವಾದ ಸಲಹೆ ಮತ್ತು ಮಾರ್ಗದರ್ಶನದಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಕೊಪ್ಪಳ ಅಥ್ಲೇಟಿಕ್ ತರಬೇತುದಾರರಾದ ಬಾಲಕೃಷ್ಣ ಅವಲಕ್ಕಿ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳ, ಆಂತರಿಕ ಗುಣಮಟ್ಟ ಭರವಶ ಕೋಶ ಅಡಿಯಲ್ಲಿ ಹಮ್ಮಿಕೊಂಡ ಮಹಾವಿದ್ಯಾಲಯದ ಕಲಾಸಂಗಮ-೨೦೨೧ ಘಟಕ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಇಂಡಕ್ಷನ್ ಉಧ್ಘಾಟನಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.ಕೊಪ್ಪಳದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂಧನ ಜಿಲ್ಲಾ ಯುವ ಸಮಾಲೋಚಕರಾದ ಭೀಮೇಶ್ ಕುರಿ ‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅನೂಕೂಲಗಳು’ ವಿ?ಯದ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅವರ ಆರೋಗ್ಯ, ಸರಿಯಾದ ಜೀವನಶೈಲಿ, ಉತ್ತಮ ಸಂಬಂಧಗಳು ಜೊತೆಗೆ ಶಿಕ್ಷಣ ಬಹಳ ಮುಖ್ಯವಾದವುಗಳಾಗಿವೆ. ಯುವ ಜನರಿಗೆ ಉಚಿತ ಮಾರ್ಗದರ್ಶನ, ಸೇವೆಗಾಗಿ ಯುವಸ್ಪಂದನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದರ ಸದುಪಯೋಗವನ್ನು ತಾವೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚನ್ನಬಸವ ಮಾತನಾಡಿದರು. ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ವಿನೋದ ಮುದಿಬಸನಗೌಡರ್ ಹಾಗೂ ಗ್ರಂಥಪಾಲಕರಾದ ಮಹೇಶ್ ಬಿರಾದಾರ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾ ಸಂಗಮ ವಿಭಾಗ ಮುಖ್ಯಸ್ಥರಾದ ಡಾ. ನಾಗರಾಜ ದಂಡೋತಿ ಸ್ವಾಗತ ಕೋರಿ ಪ್ರಾಸ್ತಾವಿಕವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಮಂಡಳಿಯ ಕಾರ್ಯಧ್ಯಕ್ಷರಾದ ಡಾ. ರಾಜು ಹೊಸಮನಿ, ಆಂತರಿಕ ಗುಣಮಟ್ಟ ಭರವಶ ಕೋಶದ ಸಂಯೋಜಕರಾದ ಅರುಣಕುಮಾರ ಎ.ಜಿ ಪ್ರಾಧ್ಯಾಪಕರಾದ ಪ್ರವೀಣ ಹಾದಿಮನಿ. ವೆಂಕಟೇಶ್ ನಾಯಕ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಸವರಾಜ ಮಡಿವಾಳ ಪ್ರಾರ್ಥಿಸಿದರು, ಅಜ್ಜಯ್ಯ ವಂದಿಸಿದರು