MLC ಚುನಾವಣೆ : ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ತಂಡಕ್ಕೆ ಸನ್ಮಾನ

Kannadanet NEWS ಕರ್ನಾಟಕ ವಿಧಾನ ಪರಿಷತ್ತಿನ ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ-2021ರ ನಿಮಿತ್ತ ಇಂದು (ಡಿ.10) ನಡೆದ ಮತದಾನ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ ಮತಗಟ್ಟೆ ಸಂಖ್ಯೆ 225 (ಕೊಪ್ಪಳ ನಗರಸಭೆ)ಯ ಮತಗಟ್ಟೆ ಸಿಬ್ಬಂದಿ ತಂಡವು ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿರುವ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಸಂಜೆ 4-15ರ ವೇಳೆಗೆ ಆಗಮಿಸಿತು. ಈ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ್ ಅಂಬರೀಶ್ ಬಿರಾದಾರ್, ತಾಲ್ಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ್, ಸೆಕ್ಟರ್ ಅಧಿಕಾರಿ ಹಾಗೂ ಮತಗಟ್ಟೆ ಸಿಬ್ಬಂದಿ ತಂಡ ಉಪಸ್ಥಿತರಿದ್ದರು.



Please follow and like us: