ಸಿದ್ದರಾಮಯ್ಯ ರಾಜ್ಯದ ಯಾವ ಮೂಲೆಯಲ್ಲಿ ನಿಂತರೂ ಗೆಲ್ತಾರೆ-ರಾಘವೇಂದ್ರ ಹಿಟ್ನಾಳ

Kannadanet NEWSವಿಧಾನ ಪರಿಷತ್ ಚುನಾವಣೆ ಹಿನ್ನೆಯಲ್ಲಿ ಕೊಪ್ಪಳದ ನಗರಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ & ಸದಸ್ಯರು ಮತಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಕೊಪ್ಪಳ ಕ್ಷೇತ್ರದಲ್ಲಿ ಗೆಲವು ಶತಸಿದ್ದ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು. ಕೂಕನಪಳ್ಳಿ ಸಂತೆಯ ತಡೆಯಾಜ್ಞೆಯ ಕುರಿತು ಮಾತನಾಡಿದ ಅವರು ನಾವಂತೂ ಸೇಲ್ ಮಾಡೋರಲ್ಲ ಖರೀದಿ ಮಾಡೋರಲ್ಲ. ಇದು ಅವರಿಗೆ ಸಂಬಂಧಿಸಿದ ವಿಚಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷತೆ ಲತಾ ಗವಿಸಿದ್ದಪ್ಪ ಚಿನ್ನೂರ, ಉ

ಪಾಧ್ಯಕ್ಷೆ ಅರಗಂಜಿ, ಸದಸ್ಯರಾದ ಅಜೀಮ್ ಅತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.https://fb.watch/9OOm2iNZm3/

Please follow and like us: