ಹೆಣ್ಣುಮಕ್ಕಳಿಗೆ ಮಹಿಳಾ ಹಕ್ಕುಗಳ ಜ್ಞಾನವಿರಲಿ: ಉಷಾದೇವಿ


,ಕೊಪ್ಪಳ: ಮಹಿಳೆ ಅಬಲೆಯಲ್ಲ, ಈಗ ಸಬಲೆಯಾಗಿದ್ದಾಳೆ. ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಮಹಿಳಾ ಹಕ್ಕುಗಳ ಕುರಿತು ಜ್ಞಾನ ಅಗತ್ಯವಾಗಿದೆ ಎಂದು ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಉಷಾದೇವಿ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಐಕ್ಯೂಎಸಿ ಪ್ರಾಯೋಜಿತ ಜನನಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಜರುಗಿದ ಮಹಿಳಾ ಹಕ್ಕುಗಳ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಈಗ ಜಾಗೃತರಾಗಿದ್ದಾರೆ. ಜಾಗೃತಿಯ ಜೊತೆಗೆ ಕಾನೂನಿನಡಿ ಇರುವ ಮಹಿಳಾ ಹಕ್ಕುಗಳನ್ನು ಅರಿತುಕೊಳ್ಳಬೇಕಾದದ್ದು ಅವಶ್ಯವಾಗಿದೆ. ಅಂದಾಗ ಮಾತ್ರ ಸಮಾಜದಲ್ಲಿ ಮಹಿಳೆಗಿರುವ ಸ್ಥಾನ-ಮಾನ ಅರಿಯಲು ಸಾಧ್ಯ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಚನ್ನಬಸವ.ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜನನಿ ಮಹಿಳಾ ಒಕ್ಕೂಟದ ಮಹತ್ವ ವಿವರಿಸಿದರು. ಕಾರ್ಯಕ್ರಮ ಸಂಯೋಜಿಸಿದ್ದ ಸಹಾಯಕ ಪ್ರಾಧ್ಯಾಪಕಿ ಕು.ಶ್ರೀದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಹನಾ ಪಾಟೀಲ ನಿರೂಪಿಸಿದರು. ವೇದಾ ಸ್ವಾಗತಿಸಿ, ವಂದಿಸಿದರು.

Please follow and like us: