ಸಿ.ಪಿ.ಎಸ್.ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ


ಕೊಪ್ಪಳ: ಸರಕಾರದ ಆದೇಶದಂತೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಮೊಟ್ಟೆ ಸೇವನೆ ಮಾಡುವವರಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಸೇವನೆ ಮಾಡುವವರಿಗೆ ಬಾಳೆಹಣ್ಣು ವಿತರಣೆ ಮಾಡಲಾಯಿತು.
ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ನಿರ್ವಾಹರಣೆ ಮಾಡುವ ನಿಟ್ಟಿನಲ್ಲಿ ೭ ಜಿಲ್ಲೆಗಳಲ್ಲಿ ೧ ರಿಂದ ೮ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಮಾಡುವಂತೆ ತಿಳಿಸಲಾಗಿತ್ತು.ಅದರಂತೆ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡಲಾಯಿತು.ಈ ಯೋಜನೆಯಿಂದ ಮಕ್ಕಳು ದೈಹಿಕವಾಗಿ ಸದೃಡವಾಗಿರುವುದರ ಜೊತೆಗೆ ಆರೋಗ್ಯವಾಗಿರುತ್ತಾರೆ.ಇಂತಹ ಯೋಜನೆಗಳಿಂದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳವಾಗುವುದರ ಜೊತೆಗೆ ಶಾಲೆಗೆ ಗೈರು ಹಾಜರಾಗುತ್ತಿದ್ದ ಮಕ್ಕಳು ಕೂಡಾ ಪ್ರತಿ ದಿನ ಶಾಲೆಗೆ ಬರುವಂತಾಗಿದೆ. ವಾರದಲ್ಲಿ ಮೂರು ದಿನಗಳಾದ ಮಂಗಲವಾರ,ಗುರುವಾರ,ಶನಿವಾರ ವಿತರಣೆ ಮಾಡಲಾಗುತ್ತದೆ.ಆದರೆ ಮೊಟ್ಟೆ ಅಥವಾ ಬಾಳೆಹಣ್ಣು ಖದೀರಿಯನ್ನು ಶಿಕ್ಷಕರಿಗೆ ವಹಿಸುವುದರಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ.ಖರೀದಿಯನ್ನು ಶಿಕ್ಷಕರಿಗೆ ವಹಿಸಿದೆ ಯಾವುದಾದರೂ ಒಂದು ಸಂಸ್ಥೆಗೆ ವಹಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಶಿಕ್ಷಕರಾದ ಆಬೀದ್ ಹುಸೇನ ಅತ್ತಾರ,ವಿರುಪಾಕ್ಷಪ್ಪ ಬಾಗೋಡಿ,ನಾಗಪ್ಪ ನರಿ,ಶ್ರೀನಿವಾಸರಾವ ಕುಲಕರ್ಣಿ,ಶಂಕ್ರಮ್ಮ ಶೆಟ್ಟರ್,ಸುನಂಧಾಬಾಯಿ,ಜಯಶ್ರೀ ದೇಸಾಯಿ,ಶೀಲಾ ಬಂಡಿ,ರತ್ನಾ,ಗAಗಮ್ಮ ತೋಟದ,ಮೋಹಿನಪಾಷಾಬೀ,ಗೌಸೀಯಾಬೇಗಂ ಮುಂತಾದವರು ಹಾಜರಿದ್ದರು.

Please follow and like us: