ವ್ಯವಹಾರ ಶ್ರೇಷ್ಠತೆ ಸಾಧನೆಗಾಗಿಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಡಿಲಿಗೆ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ

Kannadanet NEWS
ಪುಣೆ, ಭಾರತ- ನವೆಂಬರ್ ೨೯, ೨೦೨೧: ಭಾರತದಅತಿದೊಡ್ಡ ಕಾಸ್ಟಿಂಗ್‌ಗಳು ಮತ್ತು ಬೀಡುಕಬ್ಬಿಣದಉತ್ಪಾದಕರಲ್ಲಿಒಂದಾದಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್‌ಐಎಲ್) (ಬಿಎಸ್‌ಇ:೫೦೦೨೪೫) ವ್ಯವಹಾರದ ಶ್ರೇಷ್ಠತೆಗಾಗಿ ೨೦೨೧ ನೇ ಸಾಲಿನ ಪ್ರತಿಷ್ಠಿತ ಸಿಐಐ-ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದಿನಾಂಕ ೨೬-೧೧-೨೦೨೧ ರಂದು ಹೋಟೆಲ್‌ತಾಜ್‌ಯಶವಂತಪುರದಲ್ಲಿ ನಡೆದ ವೈಭವಯುತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಮತ್ತು ಹಿರಿಯಕಾರ್ಯನಿರ್ವಾಹಕರುಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಒಟ್ಟುಗುಣಮಟ್ಟದ ನಿರ್ವಹಣೆಯ ಪರಿಕಲ್ಪನೆಯೊಂದಿಗೆಉದ್ಯಮದಲ್ಲಿ ಶ್ರೇಷ್ಠತೆಯನ್ನು ಸಾಧಿಸಲುಗುಣಮಟ್ಟಆಂದೋಲನದ ಪ್ರವರ್ತಕರಾದ ದಿವಂಗತ ಶ್ರೀ ರವಿ ಕಿರ್ಲೋಸ್ಕರ್‌ಅವರ ನೆನಪಿಗಾಗಿ ರವಿ ಕಿರ್ಲೋಸ್ಕರ್‌ಗುಣಮಟ್ಟದ ಪ್ರಶಸ್ತಿ ಸ್ಫರ್ಧೆಯನ್ನು ೧೯೮೪ ರಲ್ಲಿಕಿರ್ಲೋಸ್ಕರ್ ಸಮೂಹ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದರೊಂದಿಗೆ ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಕೆಎಫ್‌ಐಎಲ್‌ನ ಪ್ರಯಾಣ ಪ್ರಾರಂಭವಾಯಿತು. ಇದು ಸಮೂಹ ಸಂಸ್ಥೆಗಳಲ್ಲಿನ ಉತ್ಪನ್ನಗಳ ಗುಣಮಟ್ಟ, ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ವ್ಯವಹಾರದಕಾರ್ಯದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿತು ಮತ್ತು ಸಮೂಹ ಸಂಸ್ಥೆಗಳಲ್ಲಿ ಗಮನಾರ್ಹ ಮಟ್ಟವನ್ನು ಸಾಧಿಸಲು ಮತ್ತುಉದ್ಯಮ ಶ್ರೆಷ್ಠತೆಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಅನುಕೂಲವಾಯಿತು.



ಕಿರ್ಲೋಸ್ಕರ್ ಸಮೂಹವು ಸಿಐಐ ಎಕ್ಸಿಮ್ ಬ್ಯಾಂಕ್/ ಇಎಫ್‌ಕ್ಯೂಎಮ್ ಮಾದರಿಯನ್ನು ೨೦೦೦ ರಲ್ಲಿ ಪರಿಚಯಿಸಲ್ಪಟ್ಟಿತು. ಕಿರ್ಲೋಸ್ಕರ್ ಫೆರಸ್ ಸಂಸ್ಥೆಯು ೨೦೦೯-೧೦ ನೇ ಸಾಲಿನಿಂದ ಈ ಸಿಐಐ ಎಕ್ಸಿಮ್‌ನ ಮೌಲ್ಯಮಾಪನ (ಅಸೆಸ್‌ಮೆಂಟ್)ದಲ್ಲಿ ಭಾಗವಹಿಸಲು ಪ್ರಾರಂಭಿಸಿತು. ಕೆಎಫ್‌ಐಎಲ್ ಸಂಸ್ಥೆಯ ವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಸವಾಲಿನ ಗುರಿಯೊಂದಿಗೆ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಪ್ರಗತಿಪರವಾದ ಪ್ರದರ್ಶನವನ್ನು ಮಾಡುತ್ತಾ ಬಂದಿದ್ದು, ಈ ವರ್ಷ ಈ ಅತ್ಯುನ್ನತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುತ್ತದೆ.


ವ್ಯವಹಾರ ಶ್ರೇಷ್ಠತೆಗಾಗಿ ಸಿಐಐ-ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ ಕುರಿತು
ಭಾರತೀಯಉದ್ಯಮದಒಕ್ಕೂಟ ಮತ್ತುರಫ್ತುಅಮದು ಬ್ಯಾಂಕ್‌ಆಫ್‌ಇಂಡಿಯಾಜಂಟಿಯಾಗಿ ಸಿಐಐ-ಎಕ್ಸಿಮ್ ಬ್ಯಾಂಕ್ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ೧೯೯೪ ರಲ್ಲಿ ಸ್ಥಾಪಿಸಿದ್ದು, ಇದು ಭಾರತೀಯ ಕಂಪನಿಗಳು ಆಪೇಕ್ಷಿಸಬಹುದಾದವ್ಯವಹಾರದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದಲ್ಲಿ ನೀಡುವ ಭಾರತದಲ್ಲಿನಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
..೨

-೨-
ಮೌಲ್ಯಮಾಪನವು ಯುರೋಪಿಯನ್ ಫೌಂಡೇಶನ್ ಫಾರ್‌ಕ್ವಾಲಿಟಿ ಮ್ಯಾನೇಜ್‌ಮೆಂಟ್ (ಇಎಫ್‌ಕ್ಯೂಮ್) ಎಕ್ಸಲೆನ್ಸ್ ಮಾದರಿಯನ್ನು ಆಧರಿಸಿದೆ ಮತ್ತು ವಿಶ್ವದರ್ಜೆಯ ಸಂಸ್ಥೆಗಳ ಜೊತೆಯಲ್ಲಿ ಮಾನದಂಡವನ್ನು ಮಾಡುವಕಾರ್ಯವಿಧಾನವನ್ನು ಹೊಂದಿದ್ದು, ಶ್ರೇಷ್ಠತೆಯನ್ನು ಮಾಪನ ಮಾಡಲು ಸಂಪೂರ್ಣಗುಣಮಟ್ಟ ನಿರ್ವಹಣೆ ವಿಧಾನವನ್ನು (ಟಿಕ್ಯೂಎಮ್) ಬಳಸುತ್ತಿದೆ. ಈ ಪ್ರಶಸ್ತಿಯು ಸಂಸ್ಥೆಯ ಮೇಲೆ ಕೇಂದ್ರೀಕರಿಸುವ ಸಮಗ್ರ ಮಾದರಿಯನ್ನು ಆಧರಿಸಿದ್ದು, ಏಳು ವಿಭಿನ್ನ ಮಾನದಂಡಗಳ ಅಡಿಯಲ್ಲಿಕಾರ್ಯಕ್ಷಮತೆ ಮತ್ತು ಪರಿವರ್ತನೆಯನ್ನು ಮಾಪನ ಮಾಡಲಿದ್ದು, ಹಾಗೂ ಇನ್ನೂಇಪ್ಪತೈದು ಭಾಗಗಳಾಗಿ ವಿಂಗಡಿಸಲಾಗಿದೆ.
ನಿರಂತರ ಸುಧಾರಣೆಗಳ ಮೂಲಕ ನಿರ್ವಹಣೆಯಲ್ಲಿ ಶ್ರೇಷ್ಠತೆಯನ್ನುಆಯಾ ವಿಭಾಗಗಳಲ್ಲಿ ಸಾಧನೆಗೈದ ಹಾಗೂ ಮುಂಚೂಣೆಯಲ್ಲಿರುವ ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಈ ಪ್ರಶಸ್ತಿಯ ಮೂಲಕ ಅತ್ಯುನ್ನತ ಮಟ್ಟದ ಮನ್ನಣೆಯನ್ನು ಪಡೆದ ಕೆಲವೇ ಕೆಲವು ಕಂಪನಿಗಳಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.


ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ಕುರಿತು:
೧೯೯೧ ರಲ್ಲಿ ಸ್ಥಾಪನೆಯಾದಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಅತಿದೊಡ್ಡ ಕಾಸ್ಟಿಂಗ್ಸ್ ಮತ್ತು ಬೀಡುಕಬ್ಬಿಣಉತ್ಪಾದಿಸುವುದರಲ್ಲಿಒಂದಾಗಿದೆ. ಕಂಪನಿಯು ಟ್ರ್ಯಾಕ್ಟ್‌ರುಗಳು, ಅಟೋಮೊಬೈಲ್‌ಗಳು ಮತ್ತುಡೀಸೆಲ್ ಎಂಜಿನ್‌ಗಳಂತಹ ವಿವಿಧಉದ್ಯಮ ವಲಯಗಳಿಗೆ ತನ್ನಉತ್ಪಾದನೆಯನ್ನು ಪೂರೈಸುತ್ತದೆ. ಕೊಪ್ಪಳ, ಹಿರಿಯೂರು ಮತ್ತು ಸೊಲ್ಲಾಪುರದ ಘಟಕಗಳು ೩೦೦ ಕೆಜಿವರೆಗೆ ಬೂದುಕಬ್ಬಿಣದ ಕಾಸ್ಟಿಂಗ್ಸ್‌ಗಳನ್ನು ಒಳಗೊಂಡಿರುವ ಉತ್ಪನ್ನಗಳ ಶ್ರೇಣೆಯನ್ನುಉತ್ಪಾದಿಸುವ ವಿಶಿಷ್ಠ ಸಾಮರ್ಥ್ಯವನ್ನು ಹೊಂದಿವೆ. ಕಂಪನಿಯುಎಸ್.ಜಿ.ಗ್ರೇಡ್, ಬೇಸಿಕ್ ಸ್ಟೀಲ್ ಗ್ರೇಡ್ ಮತ್ತು ಫೌಂಡ್ರಿಗ್ರೇಡ್‌ನಂತಹ ವಿವಿಧ ಶ್ರೇಣೆಯ ಬೀಡುಕಬ್ಬಿಣ ಮತ್ತು ಕಾಸ್ಟಿಂಗ್ಸ್‌ಗಳನ್ನು ಉತ್ಪಾದಿಸುತ್ತದೆ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಬೀಡುಕಬ್ಬಿಣ ಮತ್ತು ಕಾಸ್ಟಿಂಗ್ಸ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. ಕಂಪನಿಯು ೩ಡಿ ಮುದ್ರಣ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಉತ್ಪನ್ನಗಳನ್ನು ತ್ವರಿತಗತಿಯಲ್ಲಿಅಭಿವೃದ್ದಿಪಡಿಸುವುದು ಮತ್ತುಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಕ್ರಿಯವಾಗಿದೆ. ಕಂಪನಿಯು ಸಂಪೂರ್ಣವಾಗಿ ಮೆಷಿನೈಜ್ಡ್ ಕಾಸ್ಟಿಂಗ್ಸ್‌ಗಳನ್ನು ಪೂರೈಸುತ್ತಿದೆ ಹಾಗೂ ತ್ಯಾಜ್ಯ-ಶಾಖವನ್ನು ಬಳಸಿ ವಿದ್ಯುತ್ (ವೇಸ್ಟ್ ಹೀಟ್‌ರಿಕವರಿ ಪವರ್) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದಕೋಕ್‌ಓವನ್‌ಘಟಕವನ್ನು ಹೊಂದಿದೆ.



Please follow and like us: