ಮೈನಳ್ಳಿಯಲ್ಲಿ ಅಸ್ಪೃಶ್ಯತಾ ಆಚರಣೆಯ ನಿರ್ಮೂಲನೆ ಅರಿವು ಕಾರ್ಯಕ್ರಮ

ಅಸ್ಪೃಶ್ಯತಾ ಆಚರಣೆಯ ನಿರ್ಮೂಲನೆ ಕುರಿತು ಶುಕ್ರವಾರ (ನ.26) ತಾಲ್ಲೂಕಿನ ಮೈನಳ್ಳಿ ಗ್ರಾಮದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಅಳವಂಡಿಯ ಉಪತಹಶೀಲ್ದಾರ ಶರಣಬಸವೇಶ್ವರ ಕಳ್ಳಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಸ್ಪೃಶ್ಯತೆ ಆಚರಣೆಯು ಮಾನವ ಜನಾಂಗಕ್ಕೆ ಒಂದು ಶಾಪವಾಗಿದ್ದು. ಇದನ್ನು ಎಲ್ಲರೂ ಕೂಡಿ ಹೋಗಲಾಡಿಸಬೇಕು ಎಂದರು.
ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಮನವಜನಾಂಗ ಕುಡಿಯುವ ನೀರು ಒಂದೇ ಸೇವಿಸುವ ಗಾಳಿ ಒಂದೇ ತಿನ್ನುವ ಅನ್ನ ಒಂದೇ ಆಗಿರುವುದದರಿಂದ ಮಾನವ ಜನಾಂಗದಲ್ಲಿ ಬೇಧಭಾವವೇಕೆ ಎಲ್ಲರೂ ಗ್ರಾಮದಲ್ಲಿ ಒಂದೇ ಕುಟುಂಬದAತೆ ಹೊಂದಿಕೊAಡು ಅನ್ಯೂನ್ಯವಾಗಿ ಜೀವನ ಮಾಡಬೇಕು ಎಂದರು.ಅಲ್ಲದೇ ಸುಮಾರು 5000 ವರ್ಷಗಳ ಹಿಂದಿನಿAದಲೂ ಆಚರಿಸುತ್ತ ಬಂದAತಹ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಗೌತಮ ಬುದ್ಧ ಹಾಗೂ 12ನೇ ಶತಮಾನದಲ್ಲಿ ಬಸವೇಶ್ವರರು ಸಾಕಷ್ಟು ಪ್ರಯತ್ನ ಪಟ್ಟರು. ಹಾಗೆಯೇ 21ನೇ ಶತಮಾನದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಸಮಾಜದಲ್ಲಿರುವ ಅನಿಷ್ಟ ಪದ್ದತಿಯಾದ ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಹಗಲಿರುಳು ಅಭ್ಯಸಿಸಿ ಭಾರತದ ಜನರಿಗೆ ಎಲ್ಲಾ ವರ್ಗದವರಿಗೆ ಅನುಕೂಲವಾಗುವ ಹಾಗೇ ಸಂವಿಧಾವನ್ನು ನೀಡಿದ್ದಾರೆ. ಅದನ್ನು ಪ್ರತಿಯೊಬ್ಬರು ಮನೆ ಮನೆಗಳಲ್ಲಿ ಇಟ್ಟುಕೊಂಡು ಅದೇ ರೀತಿಯಾಗಿ ನಡೆದುಕೊಂಡರೆ ಯಾವುದೇ ಜನಾಂಗ ಹಾಗೂ ಲಿಂಗ ಬೇಧವಿಲ್ಲದೇ ಸರಿ ಸಮನಾಗಿ ಶಾಂತದಿAದ ಜೀವನ ಸಾಗಿಸಬಹುದು ಎಂದು ಹೇಳಿದರು.
ಅಳವಂಡಿ ಪೊಲೀಸ್ ಠಾಣೆಯ ಹವಾಲ್ದಾರ ಮಾರುತಿ ಪೂಜಾರಿ ಅವರು, ಕಾನೂನು ಅಸ್ಪೃಶ್ಯೆತೆ ಆಚರಣೆ ಮಾಡುವವರ ವಿರುದ್ಧ ಯಾವ ರೀತಿ ಕಠಿಣವಾದ ಶಿಕ್ಷೆಇದೆ ಎಂಬುದರ ಕುರಿತು ಮಾತನಾಡಿ, ಯಾರೂ ಹೇದರಬೇಕಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್ ಸೋಮಪ್ಪ ಜೋಗಿನ, ಪಿ.ಡಿ.ಓ ಶಿವಕುಮಾರ ಹಾಗೂ ಅಂಗನವಾಡಿ ಮೇಲ್ವಿಚಾರಕರು ಮತ್ತು ಗ್ರಾಮದ ಗುರು ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು.Please follow and like us: