ಜಗತ್ತಿನ ಸಂವಿಧಾನಗಳಲ್ಲೇ ಭಾರತ ಸಂವಿಧಾನ ವಿಶಿಷ್ಟವಾದ, ಶ್ರೇಷ್ಠವಾದ ಸಂವಿಧಾನ- ರಾಘವೇಂದ್ರ ಪಾನಘಂಟಿ

ಕೊಪ್ಪಳ, : ಇವರು ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ, ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ವಿ.ಎಮ್.ಭೂಸನೂರಮಠ್, ಹಿರಿಯ ನ್ಯಾಯವಾದಿಗಳು, ಕೊಪ್ಪಳ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಭಾರತ ಸಂವಿಧಾನವು ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ರಚನೆಯಾಗಿದ್ದು ಎಲ್ಲಾರಿಗೂ ಜೀವಿಸುವ ಹಕ್ಕನ್ನು, ಧಾರ್ಮಿಕ ಹಕ್ಕನ್ನು, ಮತ್ತು ಕಾನೂನಾತ್ಮಕ ಹಕ್ಕನ್ನು ಕೊಟ್ಟಿದೆ. ಈ ಹಕ್ಕುಗಳು ಉಲ್ಲಂಘನೆಯಾದರೆ ಅದಕ್ಕೆ ಪರಿಹಾರವನ್ನು ಸಹ ಮೂಲಭೂತ ಹಕ್ಕನ್ನಾಗಿ ಎಲ್ಲಾ ನಾಗರಿಕರಿಗೆ ಸಮಾನವಾಗಿ ನೀಡಿದೆ ಎಂದು ಸಂವಿಧಾನದ ಮಹತ್ವವನ್ನು ವಿವರಿಸುತ್ತಾ ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಘವೇಂದ್ರ ಪಾನಘಂಟಿ ಹಿರಿಯ ನ್ಯಾಯವಾದಿಗಳು, ಕೊಪ್ಪಳ. ಇವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜಗತ್ತಿನ ಸಂವಿಧಾನಗಳಲ್ಲೇ ಭಾರತ ಸಂವಿಧಾನವು ವಿಶಿಷ್ಟವಾದ ಮತ್ತು ಶ್ರೇಷ್ಠವಾದ ಸಂವಿಧಾನವಾಗಿದೆ. ಭಾರತದಲ್ಲಿ ಯಾವುದೇ ಕಾನೂನು ರಚನೆಮಾಡಬೇಕಾದರೆ ಅದು ಸಂವಿಧಾನದ ಅಡಿಯಲ್ಲಿಯೇ ರಚನೆಯಾಗಬೇಕೆಂದು ತಿಳಿಸಿದರು. ಪ್ರತಿಯೊಬ್ಬರು ಇದರ ಮಹತ್ವವನ್ನು ತಿಳಿಯಲು ೨೦೧೫ ರಿಂದ ಪ್ರತಿವರ್ಷ ನವೆಂಬರ್ ೨೬ನ್ನು ರಾಷ್ಟ್ರೀಯ ಸಂವಿಧಾನ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು ಆದೇಶಿಸಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಎ.ವಿ.ಕಣವಿ, ಕಾರ್ಯಕ್ರಮದಲ್ಲಿ ಸಂವಿಧಾನದ ಪೂರ್ವಭಾವಿ ತತ್ವಗಳು ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್‌ರವರ ವಿಚಾರಧಾರೆಗಳು ಮತ್ತು ಅವರ ತತ್ವಗಳನ್ನು ಭಾರತವು ಸೇರಿದಂತೆ ಇನ್ನಿತರ ದೇಶಗಳಲ್ಲಿನ ಪ್ರಜೆಗಳು ಇದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ವಿದ್ಯಾರ್ಥಿಗಳಾದ ನೀವು ಇವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮಕ್ಕೆ ಇನ್ನೋರ್ವ ಉಪನ್ಯಾಸಕರಾದ ಕುಮಾರಿ. ಸ್ಮಿತಾ ಎಸ್.ಅಂಗಡಿ, ಇವರು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಭಾರತ ಸಂವಿಧಾನದ ಪ್ರಸ್ತಾವನೆಯ ಕುರಿತು ಉಪನ್ಯಾಸ ನೀಡಿದರು.
ಕಾಂiiಕ್ರಮದ ಅಧ್ಯಕ್ಷತೆ ವಹಿಸಿದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ . ಡಾ. ಬಿ.ಎಸ್. ಹನಸಿ, ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂವಿಧಾನದ ಮಹತ್ವ ಕುರಿತು ಹೇಳಿದರು. ಮತ್ತು ಕಾರ್ಯಕ್ರಮದಲ್ಲಿ ಸಂವಿಧಾನ ದಿವಸದ ಅಂಗವಾಗಿ ಆಗಮಿಸಿದ ಅತಿಥಿಗಳನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಶ್ರೀಮತಿ. ಉಷಾದೇವಿ ಹಿರೇಮಠ, ಬಸವರಾಜ. ಎಸ್.ಎಮ್ ಶೇಷಾದ್ರಿ ಕೆ, ಶ್ರೀಮತಿ. ಕವಿತಾ, ಬಸವರಾಜ್ ಅಳ್ಳಳ್ಳಿ, ರವಿ ಬಡಿಗೇರ್, ಕುಮಾರಿ ಸುಜಾತ ಜಿ.ಕೆ., ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ. ರಾಧ, ಸ್ವಾಗತವನ್ನು ಕು. ಪ್ರದೀಪ್ ಕುಮಾರ್ ಮತ್ತು ಪ್ರಾರ್ಥನಾ ಗೀತೆಯನ್ನು ಕುಮಾರಿ. ಚೈತ್ರಾ ಹಾಗೂ ವಂದನಾರ್ಪಣೆಯನ್ನು ಕುಮಾರಿ ವಾಸಂತಿ ನೆರವೇರಿಸಿಕೊಟ್ಟರು


Please follow and like us: