ಸಂವಿಧಾನವೇ ಎಲ್ಲ ಭಾರತೀಯರನ್ನು ಕಾಪಾಡುತ್ತಿದೆ: ಸೈಯ್ಯದ್


ಭಾರತದ ಸುಮಾರು ೧೩೫ ಕೋಟಿ ಬೃಹತ್ ಜನಸಂಖ್ಯೆಯನ್ನು ಜಾತಿ, ಮತ, ಧರ್ಮ, ಸಂಸ್ಕೃತಿಯ ಗಡಿ ದಾಟಿ ಕಟ್ಟಿ ನಿಲ್ಲಿಸಿದ್ದು ಒಂದೇ ಒಂದು ಗ್ರಂಥ ಅದುವೇ ಸಂವಿಧಾನ ಎಂಬ ಬೃಹತ್ ಉಕ್ಕಿನ ಗ್ರಂಥ ಎಂದು ಕಾಂಗ್ರೆಸ್ ಮುಖಂಡ ಕೆ. ಎಂ. ಸೈಯ್ಯದ್ ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ ಕಾಂಗ್ರೆಸ್ ಪರಿಶಿಷ್ಟ ಪಂಗಡದ ತಾಲೂಕ ಘಟಕ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನವನ್ನುದ್ದೇಶಿಸಿ ಮಾತನಾಡಿದರು. ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸಿ ಅವರ ಅಧರ್ಶಗಳನ್ನು ಮರೆತರೆ ಅದರಿಂದ ಪ್ರಯೋಜನವಿಲ್ಲ, ಅವರನ್ನು ನಮ್ಮ ಮನೆಯ ಹಿರಿಯ ಸದಸ್ಯನಂತೆ ಭಾವಿಸಿ ಅವರ ಮಾತಿಗೆ ಬೆಲೆಕೊಟ್ಟು ಶಿಕ್ಷಣವಂತರಾಗಿ, ಸಂಘಟಿತರಾಗಿ, ಹೋರಾಟ ಮಾಡುತ್ತಲೇ ಎಲ್ಲರೂ ಒಂದಾಗಿ ಸಾಗಿ ನವಭಾರತ ಕಟ್ಟೋಣ ಎಂದರು.
ಇದೇ ವೇಳೆ ಸಭೆಯ ಅಧ್ಯಕ್ಷತೆವಹಿಸಿದ್ದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು, ಅಂಬೇಡ್ಕರ್ ಭಾವಚಿತ್ರಗಳಿಗೆ ಅವಮಾನ ಮಾಡುವದು, ಅವರನ್ನು ಹೀಗಳಿಯುವದು, ಅಂಬೇಡ್ಕರ್ ಅಂದರೆ ಕೇವಲ ಅವರು ದಲಿತ ನಾಯಕ ಎಂಬಂತೆ ಬಿಂಬಿಸುವದು ಎಲ್ಲವೂ ಸಹ ತುಂಬಾ ನೋವಿನ ಸಂಗತಿ. ದೇಶದ ಆರ್ಥಿಕ ಸ್ವಾವಲಂಬನೆಗೆ ರಿಸರ್ವ್ ಬ್ಯಾಂಕ್ ಸ್ಥಾಪನೆ, ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯ ಜೊತೆಗೆ ಸರ್ವರಿಗೂ ಸಮಾನ ಹಕ್ಕು ಕೊಟ್ಟು ದೇಶದಲ್ಲಿ ಬಹುಸಂಖ್ಯಾತ ಶೋಷಿತ ವರ್ಗ ಮೇಲ್ವರ್ಗದ ಜನರಿಗೆ ಗೌರವ ಕೊಟ್ಟು ಉತ್ತಮ ಬದುಕು ಸಾಗಿಸುತ್ತಿರುವದಕ್ಕೆ ಕಾರಣವೇ ಸಂವಿಧಾನ. ಅಂತಹ ಸಂವಿಧಾನಕ್ಕೆ ಸದಾ ಗೌರವ ಕೊಟ್ಟು ದೇಶವನ್ನು ಸದಾ ಮುನ್ನಡೆಸೋಣ ಎಂದರು.ದಲಿತ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಅಂಬೇಡ್ಕರ್ ಸರ್ವರಿಗೂ ಸಂವಿಧಾನದ ಮೂಲಕ ಕೊಟ್ಟ ಅವಕಾಶದ ಸದುಪಯೋಗಪಡಿಸಿಕೊಂಡು ಸಾಗಬೇಕಿದೆ, ಸದಾ ಸರ್ವರ ಹಿತಕ್ಕಾಗಿ ದುಡಿದ ಅಂಬೇಡ್ಕರ್ ನೆನಪು ಚಿರಸ್ಥಾಯಿ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡ ಗವಿಸಿದ್ದಪ್ಪ ಕರ್ಕಿಹಳ್ಳಿ, ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಬೊಮ್ಮನಾಳ ಕಾಟ್ರಳ್ಳಿ, ಹನುಮಂತ ನಾಯಕ ಡಂಬ್ರಳ್ಳಿ, ಮಾರುತಿ ಚಿಲವಾಡಗಿ, ಮಾರುತಿ ಚಾಮಲಾಪುರ, ಹರೀಶ ಕಂಪಸಾಗರ, ದೇವಪ್ಪ ಇರಕಲಗಡಾ, ಕುಮಾರಸ್ವಾಮಿ ಬಿ.ಹೊಸಳ್ಳಿ, ಮಾರುತಿ ಬಳಿಗಾರ, ಕೃಷ್ಣಾ ಚೆನ್ನದಾಸರ ಇತರರು ಇದ್ದರು.

Please follow and like us: