ಐದು ಅಭ್ಯರ್ಥಿಗಳಿಂದ 12ನಾಮಪತ್ರಗಳ ಸಲ್ಲಿಕೆ

Kannadanet News
ಕರ್ನಾಟಕ ವಿಧಾನ ಪರಿಷತ್ ರಾಯಚೂರು ಹಾಗೂ ಕೊಪ್ಪಳ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, 05 ಅಭ್ಯರ್ಥಿಗಳಿಂದ ಒಟ್ಟು 12ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿ ಆಗಿರುವ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ತಿಳಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶರಣಗೌಡ ಪಾಟೀಲ್ ಬಯ್ಯಾಪೂರು 4 ನಾಮಪತ್ರ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿಶ್ವನಾಥ ಬನಹಟ್ಟಿ 4 ನಾಮಪತ್ರ, ಜನಹಿತ ಪಾರ್ಟಿ ಅಭ್ಯರ್ಥಿ ತಿರುಪತಿ ತಂದೆ ನರಸಪ್ಪ ಅವರಿಂದ 2 ನಾಮಪತ್ರ, ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದೊಡ್ಡ ಬಸನಗೌಡ ಪಾಟೀಲ್ 1 ನಾಮಪತ್ರ ಹಾಗೂ ನರೇಂದ್ರ ಆರ್ಯ ಅವರಿಂದ 1ನಾಮಪತ್ರ ಚುನಾವಣಾಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಕೆಯಾಗಿವೆ.