೨ನೇ ರ್‍ಯಾಂಕ್ ಪಡೆದ ಕೊಪ್ಪಳದ ವಿದ್ಯಾರ್ಥಿನಿ ಗೀತಾಂಜಲಿ

ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೧೯-೨೦ ನೇ ಸಾಲಿನ ಬಿ.ಈಡಿ ಪ್ರಶಿಕ್ಷಣಾರ್ಥಿಯಾದ ಕುಮಾರಿ ಗಿತಾಂಜಲಿ ಬಸವರಾಜ ಅಬ್ಬಿಗೇರಿ ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಿ.ಈಡಿ ವಿದ್ಯಾರ್ಥಿಗಳ ರ್‍ಯಾಂಕ ವಿಜೇತರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ್ದು ಅದರಲ್ಲಿ ದ್ವಿತೀಯ ರ್‍ಯಾಂಕ್ ಬಿ.ಈಡಿ ತರಗತಿಯಲ್ಲಿ ೨ನೇ ರ್‍ಯಾಂಕ್ (೮೮.೨೧%) (೮೮.೨೧%) ಸ್ಥಾನವನ್ನು ಪಡೆದಿದ್ದಾಳೆ.ಸದರಿ ವಿದ್ಯಾರ್ಥಿಯು ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದಿದ್ದಕ್ಕೆ ಗವಿಮಠದ ಪೂಜ್ಯರು, ಶ್ರೀಗವಿವಟ್ರಸ್ಟ ನ ಕಾರ್ಯದರ್ಶಿಗಳು, ಕಾರ್ಯನಿರ್ವಾಹಣಾ ಅಧಿಕಾರಿಗಳು, ಸರ್ವ ಸದಸ್ಯರು, ಪ್ರಾಚಾರ್ಯರು, ಸಕಲ ಸಿಬ್ಬಂದಿವರ್ಗ ಹಾಗೂ ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.