ನುಡಿ ಸೇವೆಗೆ ಎಲ್ಲರೂ ಕೈಜೋಡಿಸಿ : ಶರಣೇಗೌಡ ಪಾಟೀಲ್

Kannadanet NEWS
ಕೊಪ್ಪಳ: ಕನ್ನಡಾಂಬೆಯ ನುಡಿ ಸೇವೆಗೆ ಮಾಡುವ ಅವಕಾಶ ಮಾಡಿಕೊಟ್ಟ ಎಲ್ಲ ಕನ್ನಡ ಮನಸ್ಸುಗಳಿಗೆ ನಾನು ಚಿರೃಣಿ ಕನ್ನಡ ನಾಡು ನುಡಿ ಸೇವೆಗೆ ಎಲ್ಲರೂ ಕೈಜೋಡಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಶರಣೇಗೌಡ ಪಾಟೀಲ್ ಹೆರೂರ ಹೇಳಿದರು.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ನನ್ನ ಗೆಲುವಿನ ಪ್ರಮುಖ ಪಾತ್ರ ವಹಿಸಿದ ಎಲ್ಲ
ಕನ್ನಡ ಮನಸ್ಸುಗಳಿಗೆ ನಾನು ಆಭಾರಿಯಾಗಿದ್ದೇನೆ, ಕನ್ನಡ ನುಡಿ ಸೇವೆಗೆ ನಿಮ್ಮ ಸಹಕಾರ ನನಗೆ ಅತ್ಯವಶ್ಯ ಈ ನಿಟ್ಟಿನಲ್ಲಿ ಎಲ್ಲರೂ ನನ್ನೊಡನೆ ಕೈಜೋಡಿಸಿ ಎಂದರು ಮುಂದಿನ ದಿನಗಳಲ್ಲಿ ಯುವ ಬರಹಗಾರರು, ಲೇಖಕರು, ಸಾಹಿತಿಗಳನ್ನು ಮುನ್ನೆಲೇಗೆ ತರುವ ಪ್ರಯತ್ನ ಮಾಡಲಾಗುವುದು, ಜಿಲ್ಲೆಯಲ್ಲಿ ಕನ್ನಡ ನುಡಿ ಜಾತ್ರೆ ಮಾಡುವ ಮೂಲಕ ಕನ್ನಡದ ಕಂಪು ಆವರಿಸು ಪ್ರಯತ್ನ ಮಾಡಿವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ನಿಕಟಪೂರ್ವ
ಅಧ್ಯಕ್ಷ ರಾಜಶೇಖರ ಅಂಗಡಿ, ಶರಣೇಗೌಡ ಪಾಟೀಲ್ ಅವರು ಕನ್ನಡ ನಾಡು ನುಡಿಗೆ ಹಗಲಿರುಳು ಶ್ರಮಿಸಿದ ಕನ್ನಡದ ಕಣ್ಮಣೀ ಕನ್ನಡ ಪರ ಹೋರಾಟ, ಕನ್ನಡದ ಅಸ್ಮೀತೆಗಾಗಿ ಅವರು ಕೂಡಾ ಕಂಕಣ ಬದ್ದವಾಗಿ ನಿಂತವರು ನನಗೆ ನೀಡಿದ ಸಹಕಾರವನ್ನು ನೀಡಿ ನುಡಿ ಸೇವೆಗೆ ಅನುವು
ಮಾಡಿ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕುಬೇರಪ್ಪ ಗೊರವರ,ಶರಣ್ಣಪ್ಪ ಬಿನ್ನಾಳ,ದ್ಯಾಮಣ್ಣ ಅಬ್ಬಿಗೇರಿ, ಮಾರುತೇಪ್ಪ ಅಂಗಡಿ, ರಮೇಶ ತುಪ್ಪದ,ಸಿದ್ದೇಶ್ ಅಂಗಡಿ, ಭೀಮಣ್ಣ ಗುಡ್ಲಾನೂರ, ಕಾಸಿಂ ನದಾಫ್ ಹುಲುಗಪ್ಪ, ಗ್ರಾಮ ಪಂಚಾಯತ್ ಸದಸ್ಯರು ಯುವಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: