ಶಾಶ್ವತ ಹಲ್ಲುಗಳು ಬಿದ್ದರೆ ಮರು ಜೋಡಿಸಬಹುದು ? ಹೀಗೆ ಮಾಡಿ – ಡಾ.ಶಿವಕುಮಾರ್ ಮಾಲಿಪಾಟೀಲ

ಪಾಲಕರು ,ಶಾಲಾ ಆಡಳಿತ ಮಂಡಳಿಗೆ ಇದು ಮಹತ್ವದ ವಿಷಯ…..
ನಿರಂತರ ಮಳೆ ಇದ್ದದ್ದರಿಂದ ನಾನು ತಡವಾಗಿ ಕ್ಲಿನಿಕ್ ಹೋದೆ ,ಒಬ್ಬ ಬಾಲಕ ಮಾಸ್ಕ ಹಾಕಿ ಅವರ ಹೆತ್ತವರ ಜೊತೆಗೆ ಕುಳಿತಿದ್ದ , ಒಳಗೆ ಕರೆದೆ , ಅವರ ತಂದೆ ಬಂದು ಮುಂಜಾನೆ ಬಿದ್ದಾನ ನೋಡಿ ಡಾಕ್ಟರ್ ಅಂದರು. ಮಾಸ್ಕ ತೆಗೆಸಿ Check up ಮಾಡಿದೆ ,ಮುಂದಿನ ಎರಡು ಶಾಶ್ವತ ಹಲ್ಲುಗಳು ಬಿದ್ದು ಹೋಗಿದ್ದವು. ಬಿದ್ದ ಹಲ್ಲುಗಳು ಎಲ್ಲಿ ? ಅಂತ ಕೇಳಿದೆ. ಮನೆಯಲ್ಲಿ ಇವೆ ಸರ್ ಎಂದರು,ಮೊದಲು ಮನೆಯಲ್ಲಿದ್ದವರಿಗೆ ಪೊನ್ ಮಾಡಿ
ಹಲ್ಲುಗಳನ್ನು ಎಸೆಯದಂತೆ ಹೇಳಿ ,
ಅವುಗಳನ್ನು ಹಾಲಿನಲ್ಲಿ ಇಟ್ಟುಕೊಂಡು ಇಲ್ಲಿಗೆ ತಂದರೆ ಮತ್ತೆ ಅವುಗಳನ್ನು ಜೋಡಿಸಬಹುದು ಎಂದೆ.
ಅವರಿಗೆ ಆಶ್ಚರ್ಯ ಜೊತೆಗೆ ಸ್ಪಲ್ಪ ಸಮಾಧಾನ ಆಯಿತು.
ರಕ್ತ ಬಹಳ ಬರುತ್ತಿತ್ತು ಭಯದಲ್ಲಿ ಹಾಗೆ ಬಂದು ಬಿಟ್ಟೆವು , ಹತ್ತು ನಿಮಿಷಗಳಲ್ಲಿ ತರುಸುತ್ತೆನೆ ಎಂದು ತಾಯಿ ಹೇಳಿದರು.
ಆ ಹುಡುಗನಿಗೆ ಇಡ್ಲಿ ತಿಂದು ಬರಲು ಕಳಿಸಿದೆ.
ಅಷ್ಟರಲ್ಲೇ ಹಲ್ಲುಗಳನ್ನು ತೆಗೆದುಕೊಂಡು ಬಂದರು.
ಆ ಹುಡುಗ ಬಂದ ಮೇಲೆ ಅರಿವಳಿಕೆ ಕೊಟ್ಟು ಮತ್ತೆ ಆ ಹಲ್ಲುಗಳನ್ನು ಅವುಗಳ ಜಾಗಕ್ಕೆ ತಂತಿಯ ಸಹಾಯ ದಿಂದ ಜೋಡಿಸಿದೆ(splinting).
ಹೆತ್ತವರು ಮುಖದಲ್ಲಿ ಆತಂಕ ಹೋಗಿ ಸಮಾಧಾನ ಮೂಡಿತು.
ಆದ್ದರಿಂದ ಪಾಲಕರು ,ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಮಾಹಿತಿ ಇರಬೇಕು.
ಮುಂದಿನ ಶಾಶ್ವತ ಹಲ್ಲುಗಳು ಆಟ ಆಡುವಾಗ ,ಬಿದ್ದಾಗ ಹೊರಗೆ ಬಂದರೆ ಅವುಗಳನ್ನು ಹಾಲಿನಲ್ಲಿ ಇಲ್ಲದಿದ್ದರೆ ಹಸಿ ಶುಭ್ರ ಬಟ್ಟೆ ,ಕಾಟನ್ ನಲ್ಲಿ ತಂದರೆ ಮರಳಿ ಜೋಡಿಸಬಹುದು.
ಇಲ್ಲದಿದ್ದರೆ ಮಕ್ಕಳು ,ಸಣ್ಣ ವಯಸ್ಸಿನಲ್ಲಿಯೇ ಕೃತಕ ಹಲ್ಲುಗಳನ್ನು ಹಾಕಿಸಿಕೊಳ್ಳಬೇಕಾಗುತ್ತದೆ.
ಮಕ್ಕಳು ,ಮಾನಸಿಕ ನೋವನ್ನು ಅನುಭವಿಸಬೇಕಾಗುತ್ತದೆ.
ಡಾ.ಶಿವಕುಮಾರ್ ಮಾಲಿಪಾಟೀಲ
ದಂತ ವೈದ್ಯರು , ಗಂಗಾವತಿ
9448302775

Please follow and like us: