ಪ್ರಥಮ ವರ್ಷದ ಬಿ.ಎ, ಬಿ.ಕಾಂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ

ಕನ್ನಡನೆಟ್ ಸುದ್ದಿ

ಹಿರೇವಂಕಲಕುಂಟಾ : ಎಸ್.ಎಸ್.ಎ.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ಮತ್ತು ಬಿ.ಕಾಂ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡದ ಮೇರು ನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಹಾಗೆಯೇ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಸ್ ವಿ ಡಾಣಿಯವರು ವಹಿಸಿ ಕಾಲೇಜಿನ ಯುಟ್ಯೂಬ್ ಚಾನೆಲ್ ನ್ನು ಉದ್ಘಾಟಿಸಿದರು . ನಂತರ ಇವರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಯುವಕ-ಯುವತಿಯರಿಗೆ ಭವಿಷ್ಯದ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಎಲ್ಲಾ ವಿಷಯಗಳಲ್ಲಿ ಪಾಂಡಿತ್ಯ ಪಡೆದುಕೊಳ್ಳುವುದರ ಜೊತೆಗೆ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕುˌ ಹಾಗೂ ಓದು ಅನ್ನುವುದು ನಿರಂತರವಾದದ್ದು ಅದನ್ನು ತಮ್ಮಲ್ಲಿ ಅಂತರ್ಗತ ಮಾಡಿಕೊಂಡು ಒಳ್ಳೆಯ ಆಸಕ್ತಿ ˌ ಆಲೋಚನೆಗಳನ್ನು ಶ್ರದ್ಧಾ ಭಕ್ತಿಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಭಾರತದ ಆಸ್ತಿಗಳು ನೀವಾಗಿರಿ ಎಂದು ಹಾರೈಸಿದರು.

ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ॥ ಶಿವಪ್ಪ ಸರ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಉಪನ್ಯಾಸಕ ಹತ್ತು ಹಲವು ಕನಸುಗಳನ್ನು , ಗುರಿ-ಉದ್ದೇಶಗಳನ್ನು ತರಗತಿಗಳಿಗೆ ಹೊತ್ತುತಂದು ಅವೆಲ್ಲವುಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಅವರುಗಳ ಗುರಿ- ಉದ್ದೇಶಗಳ ಬಗ್ಗೆ ಸ್ಪಷ್ಟಪಡಿಸಲಿಚ್ಚಿಸುತ್ತಾನೆ. ಹಾಗೆಯೇ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಅಧ್ಯಯನ ಮಾಡದೆ ಜೀವನ ದೃಷ್ಟಿಯಿಂದ ಅಧ್ಯಯನ ಮಾಡಿ ಎಂದು ಹೇಳುತ್ತಾ ಜೀವನದ ಮೌಲ್ಯಗಳನ್ನು ಕುರಿತು ಮಾತನಾಡಿದರು.

ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಬಸವಂತಪ್ಪ ಹೊಸಳ್ಳಿಯವರು ಮಾತನಾಡಿ ವಿದ್ಯಾರ್ಥಿಗಳು ಸಿಕ್ಕಿದ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬಂದು ಉತ್ತಮ ಜೀವನವನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಭಜಂತ್ರಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ˌ ಶ್ರೀಮತಿ ರತ್ನಾ ಕೆಂಬಾವಿಮಠ ಮತ್ತು ಎಲ್ಲ ವಿಷಯಗಳ ಅತಿಥಿ ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು . ವಿದ್ಯಾರ್ಥಿಗಳಾದ ಲಕ್ಷ್ಮಿ ವಣಗೇರಿ ಮತ್ತು ಕಲ್ಲೇಶ ನವಲಳ್ಳಿ ಯವರು ನಿರೂಪಿಸಿದ ಈ ಕಾರ್ಯಕ್ರಮದ ಆರಂಭದಲ್ಲಿ ಹನುಮೇಶ ಸ್ವಾಗತಿಸಿದರು ಕೊನೆಯಲ್ಲಿ ವಿದ್ಯಾರ್ಥಿ ಮಲ್ಲಿಕಾರ್ಜುನ ಉಪ್ಪಲದಿನ್ನಿ ವಂದಿಸಿದರು.

Please follow and like us: