ಗವಿಮಠಕ್ಕೆ ಭಜನಯೊಂದಿಗೆ ಪಾದಯಾತ್ರೆ

ಕೊಪ್ಪಳ
ಕಾರ್ತಿಕ ಮಾಸದ ನಿಮಿತ್ತ ಕೊಪ್ಪಳ ತಾಲೂಕಿನ ಡೊಂಬರಳ್ಳಿ, ಬೂದಿಹಾಳ ಹಾಗೂ ಹಿರೇಸಿಂದೋಗಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಸ್ಥರು ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಸೋಮವಾರ ಪಾದಯಾತ್ರೆಯನ್ನು ಮಾಡಿದರು.
ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದ ಸೀಮಿಲಿಂಗೇಶ್ವರ  ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ನಾನಾ ಗ್ರಾಮಗಳ ಭಜನಾಮಂಡಳಿಯವರು ಪಾಲ್ಗೊಂಡಿದ್ದರು. ಕಾರ್ತಿಕ ಮಾಸದ ಎರಡನೇ ಸೋಮವಾರ ಪ್ರಾರಂಭಿಸಿರುವ ಈ ಪಾದಯಾತ್ರೆ ಪ್ರತಿವರ್ಷವೂ ನಡೆಯಲಿದೆ.
ಹಿರೇಹಳ್ಳವನ್ನು ಪುನಶ್ಚೇತನ ಮಾಡಿದ ನೆನಪಿಗಾಗಿ ಈ ಪಾದಯಾತ್ರೆಯನ್ನು ಪ್ರಾರಂಭಿಸಲಾಗಿದ್ದು, ಇದು ಪ್ರತಿ ವರ್ಷ ನಡೆಯಲಿದೆ ಎಂದು ಭಕ್ತರು ತಿಳಿಸಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಗವಿಮಠಕ್ಕೆ ಬಂದ ಬಳಿಕ ಶ್ರೀಗಳಿಂದ ಆರ್ಶಿವಾದವನ್ನು ಪಡೆದು, ಪ್ರಸಾದವನ್ನು ಸ್ವೀಕಾರ ಮಾಡಲಾಯಿತು. ಸುಮಾರು ೧೨ ಕಿ.ಮೀಟರ ದೂರದ ಈ ಪಾದಯಾತ್ರೆಯಲ್ಲಿ ದಾರಿಯುದ್ದಕ್ಕೂ ಭಜನೆಯನ್ನು ಮಾಡಿಕೊಂಡು ಬರಲಾಯಿತು.
ನೇತ್ರದಾನ ಃ- ಪಾದಯಾತ್ರೆಯಲ್ಲಿ ಬಂದಿದ್ದವರ ಪೈಕಿ ಕೆಲವರು ತಮ್ಮ ನೇತ್ರದಾನದ ವಾಗ್ದಾನ ಮಾಡಿದರು.
ಶ್ರೀ ಗವಿಮಠಕ್ಕೆ ಆಗಮಿಸಿದ ಬಳಿಕ  ದೇವರಲ್ಲಿ ಬೇಡಿಕೊಂಡ ಸುಮಾರು ೫೦ ಕ್ಕೂ ಹೆಚ್ಚು ಜನರು ನೇತ್ರದಾನದ ವಾಗ್ದಾನ ಮಾಡಿದರು. ಹನುಮರಡಿ ಹಂಗನಕಟ್ಟಿ, ಬಸನಗೌಡ ಕರಡ್ಡಿ, ಕಲ್ಲೇಶ್ವರಗೌಡ ಯಲ್ಲನಗೌಡ್ರ, ಮುದಿಗೌಡ ಯಲ್ಲನಗೌಡ್ರ, ರವೀಂದ್ರಗೌಡ ಕನ್ನಡಿ, ಸಿದ್ದರಡ್ಡಿ ದುರ್ಗದ, ಪಾಂಡಪ್ಪ ಬಾರಕೇ, ದೇವಪ್ಪ, ದೇವರಡ್ಡಿ ಮೂಲಿಮನಿ,  ಶೇಖರಪ್ಪ ಮೊದಲಾದವರು ಇದ್ದರು.

Please follow and like us: