ಅಲ್ಪಸಂಖ್ಯಾತರ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಸ್ತಿತ್ವಕ್ಕೆ

Kannadanet Suddi

ಒಂದರಿಂದ ಹತ್ತನೇ ತರಗತಿಯವರೆಗೆ ಒಟ್ಟು ಮೂರು ನೂರು ವಿದ್ಯಾರ್ಥಿಗಳಿಗೆ ಕೇವಲ ಎರಡು ಕೊಠಡಿಗಳಿದ್ದು. ತಕ್ಷಣ ಬೇರೆ ಕಡೆ ಸ್ಥಳಾಂತರಿಸಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಪಕ್ಷಾತೀತ ಚಳುವಳಿಗೆ ಅಲ್ಪಸಂಖ್ಯಾತರ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘಟಕ ಎಸ್. ಎ. ಗಫಾರ್ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಅಲ್ಪಸಂಖ್ಯಾತರ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ”ಶಾಲಾ ಕಟ್ಟಡ ಸ್ಥಳಾಂತರ ಸಮಾಲೋಚನಾ ಸಭೆಯಲ್ಲಿ” ಎಸ್.ಎ.ಗಫಾರ್ ಮುಂದುವರೆದು ಮಾತನಾಡಿ ಕಳೆದ ಅಗಸ್ಟ್ ಮತ್ತು ನವೆಂಬರ್ ಮೊದಲ ವಾರದಲ್ಲಿ ಎರಡು ಬಾರಿ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲಾ. ಆಸ್ತಿತ್ವಕ್ಕೆ ಬಂದ ಹೋರಾಟ ಸಮಿತಿಯಿಂದ ಶಾಲೆ ಸ್ಥಳಾಂತರ. ಶಾಲೆಗೆ ಜಾಗ ನೀಡಿ ನೂತನ ಕಟ್ಟಡ ನಿರ್ಮಾಣ. ಮೂಲಭೂತ ಸೌಲಭ್ಯಗಳಿಗೆ ಹಾಗೂ ಬರುವ ಪೀಳಿಗೆಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತಾಯಿಸಿ ನಿರಂತರ ಹೋರಾಟ ನಡೆಯುತ್ತದೆ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಸಿದ್ದೀಖಿ ಮಾತನಾಡಿ ಶಾಲೆಗೆ ಮಕ್ಕಳನ್ನು ತಂದು ಬಿಟ್ಟು ಹೋಗಿ ಬಿಡುತ್ತೇವೆ. ಮಕ್ಕಳಿಗೆ ಬೋಧನೆ ಮಾಡಲು ಕೊಠಡಿಗಳ ಕೊರತೆಯಿಂದ ಕುರಿಗಳಂತೆ ತುರುಕುತ್ತಾರೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಯೋಗಿಕ ಬೋಧನೆಯ ವ್ಯವಸ್ಥೆ ಹಾಗೂ ಇನ್ನು ಹಲವಾರು ಬೇಡಿಕೆಗಳಿಗೆ ಹೋರಾಟ ಮಾಡಲು ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಮೌಲಾನಾ ಆಝಾದ್ ಮಾದರಿಯ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಸಿದ್ದೀಖಿ. ಉಪಾಧ್ಯಕ್ಷರಾಗಿ ಆಯುಬ್ ಸಾಬ್ ಅಡ್ಡೆವಾಲೆ. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ. ಗಫಾರ್. ಸಂಘಟನಾ ಕಾರ್ಯದರ್ಶಿಯಾಗಿ ನಜೀರ್ ಅಹ್ಮದ್ ಮುದಗಲ್. ಖಜಾಂಚಿ ಯಾಗಿ ಹಾಮಿದ್ ಸಿದ್ದೀಖಿ.
ಕಾನೂನು ಸಲಹೆಗಾರರಾಗಿ ಯುವ ನ್ಯಾಯವಾದಿ ಶಕೀಲ್ ಅಹ್ಮದ್.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೈಯ್ಯದ್ ಅಫ್ಝಲ್ ಪಾಶಾ. ಮರ್ದನ್ ಅಲಿ ಆನೆಗುಂದಿ. ಹುಸೇನ್ ಬಾಷಾ ಎನ್. ಮಾನ್ವಿ. ನಾಸೀರ್ ಮಾಳೆಕೊಪ್ಪ. ನಜೀರ್ ಅಹ್ಮದ್ ಬೇಗ್. ಡಾ: ಮೊಹಮ್ಮದ್ ಅನ್ಸರ್ ಕಿಲ್ಲೇದಾರ್. ರಶೀದ್ ಸಾಬ್ ಬಿಸ್ತಿ. ಅಬ್ದುಲ್ ವಾಹಿದ್ ಸಿದ್ದೀಖಿ ಮುಂತಾದವರು ಸರ್ವಾನುಮತದಿಂದ ಆಯ್ಕೆಯಾದರು ಎಂದು ಸಂಘಟನಾ ಕಾರ್ಯದರ್ಶಿ ನಜೀರ್ ಅಹ್ಮದ್ ಮುದಗಲ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.Please follow and like us: