“
ಕನ್ನಡನೆಟ್ ಸುದ್ದಿ : ಸಂಜೀವಿನಿ-ಎನ್.ಆರ್‌ಎಲ್‌ಎA ಯೋಜನೆಯಡಿ “ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಂಜೀವಿನಿ ಅಗರಬತ್ತಿ ಘಟಕ”ವನ್ನು ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಘಾಟನೆ ಮಾಡಲಾಯಿತು.
ಕೇಂದ್ರ ಪುರಸ್ಕೃತ ಸಂಜೀವಿನಿ-ಎನ್.ಆರ್.ಎಲ್.ಎA ಯೋಜನೆಯಡಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ “ಮಿಷನ್@35” ಅಡಿಯಲ್ಲಿ ಸಂಜೀವಿನಿ-ಎನ್.ಆರ್.ಎಲ್.ಎA ಯೋಜನೆಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಂದ ಜಿಲ್ಲೆಯ ಪ್ರತೀ ತಾಲೂಕಿನಿಂದ 5 ವಿಭಿನ್ನ ಚಟುವಟಿಕೆಗಳನ್ನು ಅನುಷ್ಟಾನ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಕೊಪ್ಪಳ ತಾಲೂಕಿನ 5 ವಿಭಿನ್ನ ಚಟುವಟಿಕೆಗಳಲ್ಲಿ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ “ಶ್ರೀಜನನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ)”ದ ವತಿಯಿಂದ 6 ಜನ ಸ್ವ-ಸಹಾಯ ಸಂಘದ ಮಹಿಳೆಯರಿಂದ “ಸಂಜೀವಿನಿ ಅಗರಬತ್ತಿ ಘಟಕ” ಪ್ರಾರಂಭಿಸಲಾಗಿದ್ದು, ಇಂದು ಒಕ್ಕೂಟದ ಅದ್ಯಕ್ಷರಾದ ದುರ್ಗಾ ಸುಧಾಕರ ರವರು ರಿಬ್ಬನ್ ಕಟ್ ಮಾಡುವುದರ ಮೂಲಕ “ಸಂಜೀವಿನಿ ಅಗರಬತ್ತಿ ಘಟಕ” ವನ್ನು ಉದ್ಘಾಟಿಸಿದರು.