ಗಂಗಾವತಿ ಪ್ರಾಣೇಶ್, ವೆಂಕಣ್ಣ ಚಿತ್ರಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ

ಕನ್ನಡನೆಟ್ ಸುದ್ದಿ

ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ನಗೆ ಭಾಷಣಕಾರ ಗಂಗಾವತಿ ಪ್ರಾಣೇಶ್, ಕಿನ್ನಾಳ ಗ್ರಾಮದ ಕಲಾವಿದ ವೆಂಕಣ್ಣ ಚಿತ್ರಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದ ವೆಂಕಣ್ಣ ಚಿತ್ರಗಾರ ,ಗಂಗಾವತಿ ಅವರಿಗೂ ಅಭಿನಂದನೆಗಳು-ಡಾ ಶಿವಕುಮಾರ್ ಮಾಲಿಪಾಟೀಲ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರರಾದ ಗಂಗಾವತಿಯ ಬಿ.ಪ್ರಾಣೇಶರವರು ೮೦ರ ದಶಕದಲ್ಲೇ ಗಂಗಾವತಿಯನ್ನು ಸಾಂಸ್ಕೃತಿಕ ವಾಗಿ ಕಟ್ಟುವ ಕ್ರಿಯೆಯಲ್ಲಿ ತೊಡಗಿದ್ದವರು. ತಮ್ಮ ಹಾಸ್ಯ ಭಾಷಣಗಳ ಮೂಲಕ ಕಚಗುಳಿಯಿಡುತ್ತಲೇ ನಾಡು,ನುಡಿಯ ಅಭಿಮಾನ ,ಬದುಕಿನ ಮೌಲ್ಯಗಳನ್ನು ಭಿತ್ತರಿಸುತ್ತಾ, ಎಚ್ಚರಿಸುತ್ತಾ ನಡೆದಿರುವ ಪರಿ ಅಭಿಮಾನದಾಯಕವಾದದ್ದು, ಗಂಗಾವತಿಯ ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮೂರ ಮುಡಿಗೆ ಹೂ ಮುಡಿಸುತ್ತಿರುವ ಪ್ರಾಣೇಶರವರಿಗೆ ಅನಂತ ಅಭಿನಂದನೆಗಳು-ಶರಣಬಸಪ್ಪ ಕೋಲ್ಕಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ (ರಿ) ಘಟಕ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ 2021ರ ಕೊಪ್ಪಳ ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಗಂಗಾವತಿಯ ಪ್ರಾಣೇಶ ಅವರಿಗೆ ಮತ್ತು ವೆಂಕಣ್ಣ ಚಿತ್ರಗಾರ ಅವರಿಗೆ ಅಭಿನಂದನೆಗಳು.
Please follow and like us: