ಕನ್ನಡನೆಟ್ ಸುದ್ದಿ : ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳ, ಶ್ರೀ ಅಮರೇಶ್ವರ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ, ವಿ.ಎ.ಎಸ್ ತರಬೇತಿ ಸಂಸ್ಥೆ ಮತ್ತು ಶ್ರೀನಿಧಿ ತರಬೇತಿ ಸಂಸ್ಥೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ ಸ್ವಚ್ಚತಾ ಜಾಥಾವು ಕೊಪ್ಪಳ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದ ವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

75ನೇಯ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸ್ವಚ್ಚತಾ ಜಾಥಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಕ್ರಮಗಳ ಬಗ್ಗೆ ಹಾಗೂ ಸ್ವಚ್ಚತೆಯ ಅರಿವು ಮೂಡಿಸುವ ಬಗ್ಗೆ ಹಸಿ ಮತ್ತು ಒಣ ಕಸ ವೈಜ್ಞಾನಿಕವಾಗಿ ಬೇರ್ಪಡಿಸುವ ಕುರಿತು ಸ್ವಚ್ಚತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನಾವು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಇದರಿಂದ ನಮ್ಮ ಮನೆ, ನಮ್ಮ ಕಾಲೋನಿ, ನಮ್ಮ ನಗರ, ನಮ್ಮ ರಾಜ್ಯ, ನಮ್ಮ ದೇಶ ಸ್ವಚ್ಚತೆಯಾಗುತ್ತದೆ ಹಾಗೂ ನಾವೆಲ್ಲರೂ ಆರೋಗ್ಯವಂತರಾಗಬೇಕು ಮತ್ತು ನಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕೆಂದು ಪ್ರಾಣೇಶ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು, ಕೊಪ್ಪಳ ಜಾಥಾ ಕಾರ್ಯಕ್ರಮದಲ್ಲಿ ತಿಳಿಸಿದರು.
ಇದರಲ್ಲಿ ಕೌಶಲ್ಯ ಮಿಷನ್ ಕೊಪ್ಪಳ ಇಲಾಖೆಯ ಅಹ್ಮದಹುಸೇನ್, ಮಹೇಶ್, ರಾಮು, ಮಲ್ಲಪ್ಪ ಅಧಿಕಾರಿಗಳು / ಸಿಬ್ಬಂದಿಗಳು, ಮಂಜುನಾಥ ಬೆಲ್ಲದ್, ಸಮುದಾಯ ಸಂಘಟನಾಧಿಕಾರಿ, ವಿವಿಧ ತರಬೇತಿ ಸಂಸ್ಥೆಯ ಮುಖ್ಯಸ್ಥರು ಹಾಗೂ ತರಬೇತಿ ಫಲಾನುಭವಿಗಳು, ಆರೋಗ್ಯ ನಿರೀಕ್ಷಕರುಗಳು, ಕೊಪ್ಪಳ ನಗರಸಭೆ ಸಿಬ್ಬಂದಿಗಳು, ಡೇ ನಲ್ಮ್ ಯೋಜನೆಯ ಸ್ವ ಸಹಾಯ ಸಂಘದ ಮಹಿಳೆಯರು ಮತ್ತು ಪೊಲೀಸ್ ಇಲಾಖೆ ಹಾಗೂ ಮತ್ತಿತರು ರಸ್ತೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.