ಕೊಪ್ಪಳದ ಪುನೀತ್ ರಾಜ್‍ಕುಮಾರ್ ಅಭಿಮಾನಿ ಹೃದಯಾಘಾತದಿಂದ ಸಾವು

ಕನ್ನಡನೆಟ್ ಸುದ್ದಿ

ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ‌ . ಪುನೀತ್ ರಾಜ್‍ಕುಮಾರ್ ಅಭಿಮಾನಿಗೆ ಹೃದಯಾಘಾತ. ಹೃದಯಾಘಾತದಿಂದ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಾವನ್ನಪ್ಪಿದ್ದಾರೆ.

ಜ್ಞಾನಮೂರ್ತಿ ನಿಂಗಾಪುರ (40) ಹೃದಯಾಘಾತಕ್ಕೊಳಗಾದ ಅಭಿಮಾನಿ

ಪುನೀತ್ ರಾಜ್‍ಕುಮಾರ್ ಅಭಿಮಾನಿಯಾಗಿದ್ದ ಜ್ಞಾನಮೂರ್ತಿ. ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ. ಪುನೀತ್ ನಿಧನದಿಂದ‌ ಆಘಾತಕ್ಕೊಳಗಾಗಿದ್ದ ಜ್ಞಾನಮೂರ್ತಿ ಪುನೀತ್ ನಿಧನದ ಸುದ್ದಿಯನ್ನು ನಿರಂತರವಾಗಿ ನೋಡುತ್ತಿದ್ದರು. ಕಿರಾಣಿ ಅಂಗಡಿಯಲ್ಲಿ ಸದಾ ಪುನೀತ್ ರಾಜ್‍ಕುಮಾರ್ ಹಾಡುಗಳನ್ನು ಕೇಳುತ್ತಿದ್ದರು. ಪುನೀತ್ ರಾಜ್‍ಕುಮಾರ್ ರ ಬಹುತೇಕ ಸಿನಿಮಾಗಳನ್ನು‌ ಫಸ್ಟ್ ಶೋ ನೋಡುತ್ತಿದ್ದ ಜ್ಞಾನಮೂರ್ತಿ

ಪುನೀತ್ ನಿಧನದ ಬಳಿಕ ಅಸ್ವಸ್ಥನಾಗಿದ್ದರು. ಜ್ಞಾನಮೂರ್ತಿ ಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬದ ಸದಸ್ಯರು ಬಳಿಕ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ

Please follow and like us: