ಕನ್ನಡ ಗೀತ ಗಾಯನಕ್ಕೆ ಸಾಕ್ಷಿಯಾದ ೫ ಸಾವಿರ ವಿದ್ಯಾರ್ಥಿಗಳುKannadanet Suddi


ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ‘ಕನ್ನಡಕ್ಕಾಗಿ ನಾವು ‘ ಎನ್ನುವ ವಿನೂತನ ಹೆಸರಿನಡಿಯಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತ ಗಾಯನ ಕಾರ್ಯಕ್ರಮವು ಬೆಳಿಗ್ಗೆ ೧೧ ಗಂಟೆಗೆ ಜರುಗಿತು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಶ್ರೀ ರವಿಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಕರ್ನಾಟಕ ಸರಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದನ್ವಯ ಕನ್ನಡ ರಾಜ್ಯೋತ್ಸವದ ಮುನ್ನ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಬೆಳಿಗ್ಗೆ ೧೧ ಕ್ಕೆ ಏಕಕಾಲಕ್ಕೆ ಜರುಗುವ ವಿಶಿಷ್ಠ ಗೀತ ಕಾರ್ಯಕ್ರಮ ಇದಾಗಿದೆ ಎಂದು ಮಾತನಾಡಿದರು. ಮುಂದುವರೆದು ಭಾರತವು ೧೯೫೦ ರಲ್ಲಿ ಗಣರಾಜ್ಯವಾದ ನಂತರ ಇಲ್ಲಿನ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಚನೆಗೊಂಡಿದ್ದವು. ಈ ಮೊದಲು ರಾಜರುಗಳ ಆಳ್ವಿಕೆಗಳಲ್ಲಿ ದಕ್ಷಿಣ ಭಾರತದಲ್ಲಿ ಹಲವು ಸಂಸ್ಥಾಗಳನ್ನು ಒಳಗೊಂಡು ರಾಜ್ಯಗಳನ್ನು ರಚನೆ ಮಾಡಲಾಗಿತ್ತು.ಅದೇ ರೀತಿ ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿಕೊಂಡು ಮೈಸೂರು ರಾಜ್ಯವೆಂದು ೧೯೫೬ ನವಂಬರ್ ೧ ರಂದು ಉದಯವಾಯಿತು. ಮುಂಂದೆ ೧೯೭೩ ನವಂಬರ ೧ ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ವೆಂದು ನೂತನ ಹೆಸರನ್ನು ಕೊಡಲಾಯಿತು. ಅಲ್ಲಿಲ್ಲಿ ಚದುರಿ ಹೋಗಿದ್ದ ಕನ್ನಡದ ಪ್ರಾಂತ್ಯಗಳನ್ನು ಒಂದು ಗೂಡಿಸಿ ಅಖಂಡ ಕರ್ನಾಟಕವನ್ನು ಕಟ್ಟಲಾಗಿದೆ. ಈ ಸವಿನೆನಪಿಗಾಗಿ ಕನ್ನಡ ರಾಜ್ಯೋತ್ಸವವನ್ನು ನವಂಬರ ೧ ರಂದು ಆಚರಣೆ ಮಾಡುವ ಪರಂಪರೆ ನಮ್ಮಲ್ಲಿದೆ. ಇಡೀ ನವಂಬರ್ ತಿಂಗಳು ಕನ್ನಡದ ಹಬ್ಬದಾಚರಣೆಯಾಗಿದ್ದೂ ಈ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಇವುಗಳನ್ನು ಉಳಿಸಿಕೊಳ್ಳುವ ಮತ್ತು ರಕ್ಷಿಸಿಕೊಂಡು ಹೋಗುವಂತಹ ಮನಸ್ಥಿತಿ ಎಲ್ಲರಲ್ಲಿ ಬರಲಿ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡದ ಶ್ರೇಷ್ಟತೆಯನ್ನು ಸಾರುವ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಕೆ.ಎಸ್.ನಿಸಾರ್ ಅಹ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖರ ‘ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಗೀತೆಗಳನ್ನು ಕಲಾವಿದರಾದ ನ್ಯಾಮತ್ ಹುಸೇನ್ ಜವಳಗೇರಾ, ಚಂದ್ರು, ಶಿವಪ್ರಸಾದ ಹಾಗೂ ತಂಡದವರು ಮನದುಂಬಿ ಹಾಡಿದರು. ಮಹಾವಿದ್ಯಾಲಯದ ಸು. ೫ ಸಾವಿರ ವಿದ್ಯಾರ್ಥಿಗಳು ಇವೆಲ್ಲ ಹಾಡುಗಳನ್ನು ಮೆಚ್ಚಿ ಕುಣಿದು , ಕುಪ್ಪಳಿಸಿ ಕನ್ನಡಾಭಿಮಾನವನ್ನು ಮೆರೆದರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಏಕನಾಥ ಏಕಬೋಟೆ , ಕನ್ನಡ ಪ್ರಾಧ್ಯಾಪಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ಮಾತನಾಡಿದರು.ಇದೇ ಸಮಯದಲ್ಲಿ ಪ್ರಾಚಾರ್ಯರಾದ ಡಾ.ವಿರೇಶಕುಮಾರ ವಿದ್ಯಾರ್ಥಿಗಳಿಗೆ ಕನ್ನಡ , ನಾಡು ನುಡಿಯ ಅರಿವನ್ನು ಮೂಡಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವಾಗತ ಕನ್ನಡ ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ, ವಂದನಾರ್ಪಣೆ ಉಪಪ್ರಾಚಾರ್ಯರಾದ ಡಾ.ಬಾಳಪ್ಪ ತಳವಾರ ಹಾಗೂ ನಿರೂಪಣೆಯನ್ನು ಕನ್ನಡ ಉಪನ್ಯಾಸಕ ಮಂಜುನಾಥ ಬಡಿಗೇರ ನೆರವೇರಿಸಿದರು. ಶೈಕ್ಷಣಿಕ ಸಂಯೋಜಕರಾದ ಪರೀಕ್ಷಿತರಾಜ್, ಕನ್ನಡ ಉಪನ್ಯಾಸಕಿ ದೀಪಾ ಬೆಟಗೇರಿ, ಹನುಮಪ್ಪ ಶಲೂಡಿ, ಹನುಮಪ್ಪ ಚೌಡಕಿ ಹಾಗೂ ಸಕಲ ಬೋಧಕ ಮತ್ತು ಬೋಧಕೇತರ ಸಿಬ್ಭಂಧಿಗಳು ಇದ್ದರು.

Please follow and like us: