ಪಟಾಕಿ, ತಂಬಾಕು ಮತ್ತು ಧೂಮಪಾನ ನಿಷೇಧಿಸಿ : ಗೊಂಡಬಾಳ ಆಗ್ರಹಕೊಪ್ಪಳ, ಅ. ೨೨: ದೇಶದ ಜನರ ರಕ್ಷಣೆಗೆ ಆರೋಗ್ಯದ ರಕ್ಷಣೆ ಮೊದಲು ಪಟಾಕಿ, ತಂಬಾಕು ಮತ್ತು ಧೂಮಪಾನವನ್ನು ನಿಷೇಧ ಮಾಡಬೇಕು ಎಂದು ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಸರಕಾರಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಹಾಗೂ ರಾಜ್ಯಗಳ ಪರಿಸರ ಇಲಾಖೆ ಮತ್ತು ಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಪಟಾಕಿಯನ್ನು ಹಿಂದೂ ಸಂಪ್ರದಾಯ ಎಂಬ ಸುಳ್ಳಿನ ಮೂಲಕ ಅದನ್ನು ದೇಶದಲ್ಲಿ ಉತ್ಪಾದನೆ ಮತ್ತು ಬಳಕೆ ಮಾಡುತ್ತಿರುವದು ಖಂಡನೀಯ, ಸರಕಾರಗಳಿಗೆ ಬಹುಸಂಖ್ಯಾತ ಜನರ ಆರೋಗ್ಯವೇ ಮೊದಲ ಆಧ್ಯತೆಯಾಗಬೇಕೆ ಹೊರತು ಸರಕಾರಗಳು ಇಂತಹ ಹಸಿ ಸುಳ್ಳುಗಳನ್ನು ಹೇಳಬಾರದು. ಪಟಾಕಿಯಲ್ಲಿ ಸದ್ದು ಬರಲು ಹಾಗೂ ಸ್ಪೋಟಗೊಳ್ಳಲು
ಉಸಿರಾಟಕ್ಕೆ ತೊಂದರೆಯಾಗುವಂತಹ ರಾಸಾಯನಿಕ ಸೇರಿಸಲಾಗುತ್ತದೆ, ಹಸಿರು ಪಟಾಕಿ ಎಂಬ ಹೊಸ ನಾಟಕ ಶುರು ಮಾಡಿದ್ದಾರೆ, ಅದು ಸಾಧ್ಯವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಒಂದು ವಸ್ತು ಸ್ಪೋಟಗೊಳ್ಳಲು ಅದಕ್ಕೆ ಗಂಧಕ, ರಂಜಕ, ಪೊಟ್ಯಾಶಿಯಮ್ ನೈಟ್ರೇಟ್, ಇದ್ದಿಲನ್ನು ಬಳಸಿ ಉತ್ಪಾದನೆ
ಮಾಡುತ್ತಿದ್ದು ಇವು ಎಲ್ಲವೂ ಸೇರಿ ಗಾಳಿಯನ್ನು ಬಹುಬೇಗ ಅಶುದ್ಧಗೊಳಿಸುವದಲ್ಲದೇ ಉಸಿರಾಟಕ್ಕೆ ತೊಂದರೆ ನೀಡುತ್ತವೆ. ವಿಶೇಷವಾಗಿ ಏಕ ಕಾಲದಲ್ಲಿ ಅವುಗಳನ್ನು ಹಬ್ಬದಲ್ಲಿ ಎಲ್ಲಾ ಕಡೆ ಬಳಸುವದರಿಂದ ವಿಪರೀತ ವಾಯು ಮಾಲಿನ್ಯ ಆಗುತ್ತದೆ. ಇದನ್ನು ತಿಳುವಳಿಕೆ ಅಥವಾ ಮನವರಿಕೆ ಮಾಡಲು ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ನಿಷೇಧ ಮಾಡುವದು ಮತ್ರವೇ ಪರಿಹಾರ, ಭಾವನಾತ್ಮಕವಾಗಿ ಜನರನ್ನು ಮರಳು ಮಾಡುವ ಅಗತ್ಯವಿಲ್ಲ.
ದೇಶದ ೧೪೦ ಕೋಟಿ ಜನರ ಆರೋಗ್ಯದ ಮುಂದೆ ಕೆಲವು ಲಕ್ಷ ಜನರ ಕೂಲಿ ಕೆಲಸದ ಉದ್ಯೋಗ ನಷ್ಟವಾದರೆ ತೊಂದರೆ ಇಲ್ಲ. ಅವರಿಗೆ ಒಂದು ಅವಧಿಗೆ ಸ್ವಂತ ಉದ್ಯೋಗ ಮಾಡಲು ಧನ ಸಹಾಯ ಮಾಡಲಿ. ಉದ್ಯಮಪತಿಗಳ ರಕ್ಷಣೆಗೆ ಕೂಲಿಕಾರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ಯಾವ
ದೊಡ್ಡ ಆಧಾರವೂ ಇದು ಆಗಿಲ್ಲ, ನೂರಾರು ಜನರು ಇದರಿಮದ ಸಾವನ್ನು ಅಪ್ಪಿದ್ದಾರೆ, ಅಲ್ಲಿ ಕೆಲಸ ಮಾಡುವ ಜನರ ಆರೋಗ್ಯವೂ ಸರಿ ಇಲ್ಲ ಎಂಬುದನ್ನು ಸರಕಾರ ಮೊದಲ ಆಧ್ಯತೆಯಾಗಿ ತೆಗೆದುಕೊಳ್ಳಬೇಕು.


ಇನ್ನು ತಂಬಾಕು ಮತ್ತು ಧೂಮಪಾನಗಳನ್ನು ಸಹ ಸಂಪೂರ್ಣವಾಗಿ ನಿಷೇಧ ಮಾಡಲೇಬೇಕು. ಇವೆರೆಡು ಸಹ ಜನರ ಆರೋಗ್ಯವನ್ನು ಸಂಪೂರ್ಣವಾಗಿ ಹಾಳು ಮಾಡುವದರ ಜೊತೆಗೆ ಅವುಗಳ ದಾಸರಲ್ಲದವರಿಗೂ ಸಹ ಅಗತ್ಯಕ್ಕಿಂತ ಜಾಸ್ತಿ ಹಾನಿ ಮಾಡುತ್ತಿದೆ. ಸರಕಾರ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅದು ಮಾಡುವ ತಪ್ಪು ಆಗುತ್ತದೆ. ಸರಕಾರ ಬಹುಸಂಖ್ಯಾತ ಜನರ ಆರೋಗ್ಯವನ್ನು ನೋಡಬೇಕೆ ಹೊರತು ಕೆಲವೇ ಉದ್ಯಮಿಗಳ ಮಾತು ಕೇಳಬಾರದು. ಇವರು
ದೇಶದ ಜನರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಸರಕಾರ ಇವುಗಳಿಂದ ತೆರಿಗೆ ರೂಪದಲ್ಲಿ ಬರುವ ಆದಾಯದ ಮೂರು ಪಟ್ಟು ಈ ಕಾರಣಗಳಿಗಾಗಿ ಬರುವ ರೋಗಕ್ಕೆ ಖರ್ಚು ಮಾಡುತ್ತದೆ. ಇವುಗಳನ್ನು ಬ್ಯಾನ್ ಮಾಡುವದರಿಂದ ಜನರ ಆರೋಗ್ಯ ಕಾಪಾಡಿ ದೇಶ ಇನ್ನಷ್ಟು ಬೆಳೆಯಲು ಅವಕಾಶ ನೀಡುವದರ ಜೊತೆಗೆ
ಹಣವೂ ಉಳಿತಾಯವಾಗುತ್ತದೆ. ಕೆಲವು ಅನಾವಶ್ಯಕ ಹೊರೆ ಸಹ ಕಡಿಮೆ ಆಗುತ್ತದೆ. ತಂಬಾಕು ಕ್ಯಾನ್ಸರ್ ಕಾರಕ, ಅದನ್ನು ಅವುಗಳ ಪೊಟ್ಟಣದ
ಮೇಲೆ ಮತ್ತು ಎಲ್ಲಾ ಕಡೆಗೆ ಪ್ರದರ್ಶನ ಮಾಡುತ್ತಿದ್ದಾರೆ, ಆದರೆ ತಿನ್ನುವ ಹಾಗೂ ಧೂಮಪಾನ ಮಾಡುವ ಜನರ ಸಂಖ್ಯೆ ಕಡಿಮೆ ಆಗಿಲ್ಲ, ಇವುಗಳ ಮುಂದುವರೆದ ಭಾಗವೇ ಡ್ರಗ್ಸ್ಸೇ ವನೆ, ಅದು ಇನ್ನೂ ದೊಡ್ಡ ಅಪಾಯಕಾರಿ ಸಂಗತಿಯಾಗುತ್ತದೆ. ಇವುಗಳಿಂದ ದೇಶದಲ್ಲಿ ಅನಾಚಾರ, ಅತ್ಯಾಚಾರ ಮತ್ತು ದೌರ್ಜನ್ಯ ಮಿತಿಮೀರಿವೆ. ಸರಕಾರಗಳಿಗೆ ಇವು ಇಚ್ಛಾಶಕ್ತಿ ಮತ್ತು ಜನಪರ ಕಾರ್ಯವಾಗಿದ್ದು, ದೇಶದ ಎಲ್ಲಾ ರಾಜ್ಯ ಸರಕಾರಗಳು ಮತ್ತು
ಕೇಂದ್ರ ಸರಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಲಿ ಎಂದು ಗೊಂಡಬಾಳ ಆಗ್ರಹಿಸಿದ್ದಾರೆ.

Please follow and like us:
error