ಕೈಬಿಟ್ಟಿರುವ ಸ್ನಾತಕೋತ್ತರ ಕೋರ್ಸ್ ಗಳನ್ನು ಮುಂದುವರಿಸಲು ಎಸ್ಎಫ್ಐ ಆಗ್ರಹ


Kannadanet Suddiಕೊಪ್ಪಳ ಮತ್ತು ಯಲಬುರ್ಗಾದ ಪಿಜಿ ಸೆಂಟರ್ ನಲ್ಲಿ ಕೈಬಿಟ್ಟಿರುವ ಸ್ನಾತಕೋತ್ತರ ಕೋರ್ಸ್ ಗಳನ್ನು ಮುಂದುವರಿಸಲು ಎಸ್ಎಫ್ಐ ಆಗ್ರಹಿಸಿದೆ. ಇಂದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ರಿಗೆ ಮನವಿ ಸಲ್ಲಿಸಿದರು.
ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ಪ್ರಸ್ತುತ 2021-22 ರ ಶೈಕ್ಷಣಿಕ ಅವಧಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದ್ದು ವಿಶ್ವವಿದ್ಯಾಲಯದ ವ್ಯಾಪ್ತಿಯ ಕೊಪ್ಪಳ ಮತ್ತು ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಇಲ್ಲಿವರೆಗೂ ಇದ್ದ ಎಂ.ಎ, ಪತ್ರಿಕೋದ್ಯಮ, ಎಂ,ಎ, ಕನ್ನಡ, ಎಂ.ಎಸ್,ಡಬ್ಲ್ಯೂ, ಯಲಬುರ್ಗಾದಲ್ಲಿ ರಾಜ್ಯಶಾಸ್ತ್ರ,ಇಂಗ್ಲೀಷ್, ಇತಿಹಾಸ ಮತ್ತು ಪುರತತ್ವ, ಅರ್ಥಶಾಸ್ತ್ರ ಕೋರ್ಸ್ ಗಳನ್ನು ಈ ಶೈಕ್ಷಣಿಕ ವರ್ಷದ ಪ್ರವೇಶಾತಿಯಲ್ಲಿ ಕೈ ಬಿಟ್ಟಿರುವುದನ್ನು ಎಸ್,ಎಫ್,ಐ ಸಂಘಟನೆಯು ಖಂಡಿಸಿದೆ. ಈ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಕೊಪ್ಪಳ ಮತ್ತು ಯಲಬುರ್ಗಾ ಕೇಂದ್ರ ಬಿಟ್ಟು ಬೇರೆ ಕಡೆ ಹೋಗಿ ಕಲಿಯಲು ವಿದ್ಯಾರ್ಥಿಗಳಿಗೆ ಊಟ, ವಸತಿ, ಆರ್ಥಿಕ ತೊಂದರೆ ಕಾಡುತ್ತದೆ ಈ ಭಾಗದ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕಡಿಮೆ ಇದ್ದು ಆ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಸರಕಾರದ ಮೂಲ ಉದ್ದೇಶಕ್ಕೆ ವಿಶ್ವವಿದ್ಯಾಲಯದ ಉಪಕುಲಪತಿಗಳು ಕೋರ್ಸಗಳನ್ನು ಕೈ ಬಿಡುವುದರ ಮೂಲಕ ಉನ್ನತ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಕಲಿಯುವವರಿಗೆ ನಿರಾಸೆ ಮಾಡಲು ಉಪಕುಲಪತಿಗಳು ಕುತಂತ್ರ ಮಾಡಿರುತ್ತಾರೆ, ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಯಲು ಸರ್ಕಾರ ಪಿ‌.ಜಿ ಕೇಂದ್ರ ಪ್ರಾರಂಭ ಮಾಡಿ ವಿವಿಧ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ಮಾಡಿದೆ ಆದರೆ ವಿಶ್ವ ವಿದ್ಯಾಲಯವು ಕೆಲವು ಕೋರ್ಸ್ ಗಳನ್ನು ಕೈ ಮಾಡುವುದರ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿದೆ. ಪ್ರಮುಖವಾಗಿ ಕನ್ನಡ ನಮ್ಮ ನಾಡಭಾಷೆ ಹಾಗೂ ಬಹುತೇಕರ ಮಾತೃಭಾಷೆ ಅದು ಅಂತಹ ವಿಷಯದಲ್ಲಿ ಈಗಾಗಲೇ 22 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಲ್ಪಟ್ಟಿರುವ ಮಾಧ್ಯಮ ರಂಗದ ಪತ್ರಿಕೋದ್ಯಮ ಕೋರ್ಸನ್ನು ಕೈಬಿಟ್ಟಿರುವ ಹಿನ್ನೆಲೆ ನೋಡಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಬಳ್ಳಾರಿ ವಿ.ವಿ ಕುಲಪತಿಗಳು ಉನ್ನತ ಶಿಕ್ಷಣವನ್ನು ನಿರಾಕರಣೆ ಮಾಡಲು ಹೊರಟಂತೆ ಕಾಣುತ್ತದೆ, ಅಲ್ಲದೆ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವ ಗಾದೆಯಂತೆ ಸರ್ಕಾರ ಅವಕಾಶ ನೀಡಿದರು ವಿಶ್ವವಿದ್ಯಾಲಯದ ಕುಲಪತಿಗಳು ಕಿತ್ತುಕೊಳ್ಳಲು ಹೊರಟಿರುತ್ತಾರೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯಲು ಇದ್ದರು ಸಹ ಕೆಲವು ಕೋರ್ಸ್ ಗಳನ್ನು ಕೈ ಬಿಡುವುದರ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿರುವುದನ್ನು ಸಂಘಟನೆಯೂ ಖಂಡಿಸಿದೆ.ಪ್ರಸ್ತುತ ವರ್ಷದಲ್ಲಿ ನೂರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಯಲು ಕನಸು ಕಾಣುತ್ತಿದ್ದು ಅವರಿಗೆ ನಿರಾಶೆ ಮಾಡದೆ, ಇದೆ ಶೈಕ್ಷಣಿಕ ವರ್ಷದಲ್ಲಿ ಕೊಪ್ಪಳ ಮತ್ತು ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಕೈಬಿಟ್ಟು ಕೋರ್ಸುಗಳನ್ನು ಪುನಃ ಸೇರ್ಪಡೆ ಮಾಡಿ ಮುಂದುವರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಜಿಲ್ಲಾ ಸಮಿತಿಯು ಕೊಪ್ಪಳ ಸ್ನಾತಕೋತ್ತರ ಕೇಂದ್ರ ನಿರ್ದೇಶಕರು ಮೂಲಕ ಈಗಾಗಲೇ ಒಂದು ಮನವಿ ಸಲ್ಲಿಸಿ ಒತ್ತಾಯ ಮಾಡಿರುತ್ತದೆ. ತಾವುಗಳು ಮುತುವರ್ಜಿ ಮಾಡಿ ಇದೆ ಶೈಕ್ಷಣಿಕ ವರ್ಷದಿಂದ ಕೈಬಿಟ್ಟು ಕೋರ್ಸುಗಳನ್ನು ಪುನಃ ಪ್ರಾರಂಭ ಮಾಡಬೇಕೆಂದು ಹಾಗೂ ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಹಾಕಲು ದಿನಾಂಕ ವಿಸ್ತರಣೆ ಮಾಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯು ಒತ್ತಾಯ ಮಾಡಿದೆ.
ಈ ಸಂದರ್ಭದಲ್ಲಿ Sfi ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ, ಬಂಡಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗು ವೈ.ಬಿ, ಬಂಡಿ ಇತರರು ಇದ್ದರು.

Please follow and like us:
error