ಸಂಸದ ನಳೀನ್‌ ಕುಮಾರ್ ಕಟೀಲ್ ಗೆ ಬಾಯಿ ತೊಳೆದುಕೊಳ್ಳಲು ಫಿನಾಯಿಲ್ ರವಾನೆ



ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ನಿಂದ ನಳೀನ್ ಕುಮಾರ್ ಕಟೀಲ್ ಗೆ ಅಂಚೆ ಮುಖಾಂತರ ಫೆನಾಯಿಲ್ ತಲುಪಿಸುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನದ ಮೇರೆಗೆ ಇಂದು ಅಕ್ಟೋಬರ್ ೨೨ ರಂದು ಶುಕ್ರವಾರ ಕೊಪ್ಪಳ ನಗರದ ಅಂಚೆ ಕಚೇರಿ ಮುಂಭಾಗದಲ್ಲಿ ಅರ್ಧ ಗಂಟೆ ಪ್ರತಿಭಟನಾರ್ಥ ಮೌನವಾಗಿ ಕುಳಿತು, ಸಂಸದ ನಳೀನ್ ಕುಮಾರ್ ಗೆ ಫಿನಾಯಲ್ ಕಳಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಸಂಸದ ನಳೀನ್‌ಕುಮಾರ್ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದು, ಡ್ರಗ್ಸ್ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದು, ದೇಶದ ಎಲ್ಲಾ ಉನ್ನತ ತನಿಖಾ ಸಂಸ್ಥೆಯವರು ಕೂಡಲೇ ನಳೀನ್‌ಕುಮಾರ್ ಅವರನ್ನು ಬಂಧಿಸಿ, ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮಾಹಿತಿ ಪಡೆಯಬೇಕು. ಅವರ ಹಿಂದೆ ದೊಡ್ಡ ಡ್ರಗ್ಸ್ ಮಾಫಿಯಾ ಗ್ಯಾಂಗ್ ಇರುವ ಅನುಮಾನ ದಟ್ಟವಾಗಿದೆ. ಅನುಮಾನ ಹೋಗಲಾಟಿಸಲು ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಿ ಅವರು ತಾವೇ ಅದಕ್ಕೆ‌ ಮುಂದಾಗಬೇಕು, ಇಲ್ಲವಾದರೆ ಈಚೆಗೆ ಗುಜರಾತ್ ಆದಾನಿ ಬಂದರಿನಲ್ಲಿ ಸಿಕ್ಕ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಪತ್ತೆಯಾದರೂ ಸಹ ಬಿಜೆಪಿ ಸರಕಾರಗಳ ಮೌನ ನೋಡಿದರೆ ದೇಶದ ಜನರಿಗೆ ಬಿಜೆಪಿನೇ ಡ್ರಗ್ಸ್ ಕೊಡುತ್ತಿದೆಯಾ ಎಂಬ ಅನುಮಾನ ಬರುತ್ತದೆ, ರಾಹುಲ್ ಗಾಂಧಿ ಅವರು ಅತ್ಯಂತ ಸರಳ ಸ್ವಭಾವದ ವಿದ್ಯಾವಂತ ನಾಯಕ, ಆಪಾದನೆ ಮಾಡುವಾಗ ಮೈ ಮೇಲೆ ಎಚ್ಷರ ಇರಬೇಕು, ನಿಶೆಯಲ್ಲಿ ಮಾತನಾಡುವದನ್ನು ಬಿಡಬೇಕು, ಬಿಟ್ಟಿ ಪ್ರಚಾರದ ತೆವಲನ್ನು ಬಿಟ್ಟು, ಸಂಸದ ಕ್ಷೇತ್ರದಲ್ಲಿ ಕೆಲಸ ಮಾಡಿ ಪ್ರಚಾರ ಪಡೆಯಲಿ. ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ನಳೀನ್ ಚಾರಿತ್ರ್ಯದಲ್ಲಿ ಇಲ್ಲ. ಅದಕ್ಕಾಗಿ ಅವರು ತಮ್ಮ ಹೊಲಸು ನಾಲಿಗೆಯನ್ನು ತೊಳೆದುಕೊಳ್ಳಲಿ ಎಂದು ಅಂಚೆ ಸ್ಪೀಡ್ ಪೋಸ್ಟ್ ಮೂಲಕ ಮಹಿಳಾ ಕಾಂಗ್ರೆಸ್ ನಿಂದ ಉಚಿತವಾಗಿ ಫಿನಾಯಿಲ್ ಕಳಿಸಿದ್ದೇವೆ ಬಾಯಿ ತೊಳೆದುಕೊಂಡು ದೇಶದ ಜನರ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಕ್ಷಮೆ ಕೇಳಿ ಅದರ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ಹಾಕಿರಿ ಎಂದು ಆಗ್ರಹಿಸಿದರು.



ಇದೇ ವೇಳೆ ಜಿಲ್ಲಾ ಮಹಿಳಾ ಕಾರ್ಯದರ್ಶಿ ವಿಶಾಲಾಕ್ಷಿ ವಿ. ತಾವರಗೇರಿ ಮಾತನಾಡಿ, ನಳೀನ್‌ಕುಮಾರ್ ಕಟೀಲ ತಮ್ಮ ಕುಟಿಲ ಬುದ್ಧಿಯನ್ನು ಬಿಟ್ಟು ಸಮಾಜ ಸುಧಾರಿಸುವ ಕಾರ್ಯ ಮಾಡಲಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ‌ಮಾಡಲಿ. ಪ್ರಚಾರಕ್ಕಾಗಿ ಕಾಂಗ್ರೆಸ್ ಮುಖಂಡರನ್ನು ತೆಗಳುವ ಕೆಲಸ ಬಿಡಲಿ, ಸಂಸ್ಕಾರವಂತ ಪಕ್ಷದ ಸಂಘ ಪರಿವಾರಗಳು ತಮ್ಮ ಮುಖಂಡರಿಗೆ ಬುದ್ಧಿ ಹೇಳಲಿ ಎಂದರು. ನಗರ ಕಾಂಗ್ರೆಸ್ ಘಟಕ ಅಧ್ಯಕ್ಷೆ ಸವಿತಾ ಗೋರಂಟ್ಲಿ ಮಾತನಾಡಿ, ಮಾನಗೇಡಿ ಕೆಲಸ ಬಿಟ್ಟು ಮಾನವಂತರಾಗಿ ಬದುಕುವದನ್ನು ಕಲಿಯಲಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್. ಟಿ. ಘಟಕದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಾಜಿ ಪಟ್ಟಣ ಪಂಚಾಯತ ಸದಸ್ಯೆ ಯಶೋಧಾ ಮರಡಿ, ಶಿಲ್ಪಾ ಭಾಗ್ಯನಗರ, ಜಯಶ್ರೀ ಕಿನ್ನಾಳ, ಮಾರುತಿ ಬೊಮ್ಮನಾಳ, ಹನುಮಂತ ನಾಯಕ ಡಂಬ್ರಳ್ಳಿ ಇತರರು ಇದ್ದರು



Please follow and like us:
error